ಗದ್ದಲ, ವಿರೋಧದ ನಡುವೆ ಜಾಗತಿಕ ಲಿಂಗಾಯಿತ ಮಹಾಸಭಾ ಉದ್ಘಾಟನೆ
ಚಾಮರಾಜನಗರ

ಗದ್ದಲ, ವಿರೋಧದ ನಡುವೆ ಜಾಗತಿಕ ಲಿಂಗಾಯಿತ ಮಹಾಸಭಾ ಉದ್ಘಾಟನೆ

July 27, 2018

ಚಾಮರಾಜನಗರ: ಗೊಂದಲ-ಗದ್ದಲ, ತೀವ್ರ ವಿರೋಧದ ನಡುವೆ ನಗರದಲ್ಲಿ ಗುರುವಾರ ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟ ಕದ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶ ನಡೆಯಿತು.

ಜಾಗತಿಕ ಲಿಂಗಾಯಿತ ಮಹಾಸಭಾದ ಆಶ್ರಯದಲ್ಲಿ ನಗರದ ಶ್ರೀ ಶಿವಕುಮಾರ ಸ್ವಾಮಿ ಭವನದಲ್ಲಿ ಮಹಾಸಭಾದ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೂಡಲ ಸಂಗ ಮದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ, ಚಿಕ್ಕಮಗಳೂರು ಎನ್.ಆರ್.ಪುರದ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿ, ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಜಿ.ಪಾಟೀಲ್, ಜಿಲ್ಲಾ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಸೇರಿದಂತೆ ಇತರ ಗಣ್ಯರು ವೇದಿಕೆಯಲ್ಲಿ ಆಸಿನರಾಗಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಆದ ನಂತರ ಸ್ವಾಗತಿಸುವುದು ಆರಂಭವಾಯಿತು. ಈ ವೇಳೆ ವೇದಿಕೆಯ ಮುಂಭಾಗ ಕುಳಿತಿದ್ದ ವೀರಶೈವ ಮಹಾಸಭಾದ ಜಿಲ್ಲಾ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ವೀರಶೈವ ಲಿಂಗಾಯಿತ ಸಂಘಟನೆ ಗಳ ಪ್ರಮುಖರು ಎದ್ದು ನಿಂತು ಕಾರ್ಯ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಇದಕ್ಕೆ ಪ್ರತಿಯಾಗಿ ಕಾರ್ಯಕ್ರಮ ರೂಪಿ ಸಿದವರು ಸಹ ತಮ್ಮದೇ ಆದ ಘೋಷ ಣೆಗಳನ್ನು ಕೂಗಲು ಆರಂಭಿಸಿದರು. ಎರಡೂ ಸಂಘಟನೆಯ ಪ್ರಮುಖರು ಘೋಷಣೆ. ಅದಕ್ಕೆ ಪ್ರತಿ ಘೋಷಣೆ ಕೂಗಿದ ಕಾರಣ ಕಾರ್ಯಕ್ರಮದ ಆರಂಭದಲ್ಲಿಯೇ ಗೊಂದಲ-ಗದ್ದಲ ಉಂಟಾ ಯಿತು. ಯಾರೂ ಏನು ಘೋಷಣೆ ಕೂಗುತ್ತಿದಾರೆ. ಯಾರು ಏನು ಮಾತನಾಡುತ್ತಿದ್ದಾರೆ ಎಂದು ತಿಳಿಯದ ಪರಿಸ್ಥಿತಿ ನಿರ್ಮಾಣ ಆಯಿತು. ಎರಡೂ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿಯೂ ಆರಂಭವಾಯಿತು. ಸ್ಥಳದಲ್ಲಿದ್ದ ಪೊಲೀ ಸರು ಇಬ್ಬರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಈ ನಡುವೆ ಮಾತನಾಡಿದ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷ ರಾದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು, ಇದು ಪ್ರಜಾಪ್ರಭುತ್ವ ರಾಜ್ಯ, ಎಲ್ಲರಿಗೂ ಎಲ್ಲದಕ್ಕೂ ಸ್ವಾತಂತ್ರ್ಯ ಇದೆ. ಯಾರೂ ಗಲಾಟೆ ಮಾಡಬೇಡಿ. ನಿಮ್ಮ ಎಲ್ಲ ಪ್ರಶ್ನೆಗಳು, ಗೊಂದಲಗಳಿಗೆ ಉತ್ತರಿಸುತ್ತೇನೆ. ತಮ್ಮ ಅಭಿಪ್ರಾಯವನ್ನು ವೇದಿಕೆಗೆ ಆಗಮಿಸಿ ತಿಳಿಸುವಂತೆ ಕೋರಿದರು.

ಈ ವೇಳೆ ಮಾತನಾಡಿದ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಕೋಡ ಸೋಗೆ ಶಿವಬಸಪ್ಪ, ವೀರಶೈವ ಲಿಂಗಾಯಿತರು ಒಂದೇ. ಜಿಲ್ಲೆಯಲ್ಲಿ ನಾವಿಬ್ಬರೂ ಯಾವುದೇ ಗೊಂದಲ ಇಲ್ಲದೇ ಒಗ್ಗಟ್ಟಾಗಿದ್ಧೇವೆ. ವೀರಶೈವ ಮಹಾಸಭಾ ಸಂಘಟನೆಗಳು ಪ್ರಬಲವಾಗಿದೆ. ಈ ನಡುವೆ ಜಾಗತಿಕ ಲಿಂಗಾಯಿತ ಮಹಾಸಭಾ ಘಟಕ ಅಸ್ಥಿತ್ವಕ್ಕೆ ಬರುವ ಅವಶ್ಯಕತೆ ಇಲ್ಲ. ಇದರಿಂದ ಜಿಲ್ಲೆಯಲ್ಲೂ ಗೊಂದಲ ಉಂಟಾಗುತ್ತದೆ. ಇದನ್ನು ವೇದಿಕೆಯಲ್ಲಿ ಇರುವ ಎಲ್ಲಾ ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ವೇಳೆ ವೀರಶೈವ ಮಹಾಸಭಾದ ಪದಾಧಿಕಾರಿಗಳು ಘೋಷಣೆಗಳನ್ನು ಕೂಗುತ್ತಾ ಕಾರ್ಯಕ್ರಮವನ್ನು ನಿಲ್ಲಿಸು ವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಯಾಗಿ ಕಾರ್ಯಕ್ರಮ ರೂಪಿಸಿದ್ದವರೂ ಸಹ ಪ್ರತಿ ಘೋಷಣೆಗಳನ್ನು ಕೂಗಿದರು. ಈ ಹಂತದಲ್ಲಿ ಮತ್ತೆ ಗದ್ದಲ-ಗೊಂದಲ, ಕೂಗಾಟ ಹೆಚ್ಚಾದ ಕಾರಣ ಪೊಲೀಸರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ ಮುಖಂಡರನ್ನು ಬಲವಂತವಾಗಿ ಭವನದಿಂದ ಹೊರಕ್ಕೆ ಕರೆ ತಂದರು. ನಂತರ ಪರಿಸ್ಥಿತಿ ತಿಳಿಯಾಯಿತು.

ಉದ್ಘಾಟನೆ: ಈ ಗದ್ದಲ-ಗೊಂದಲದ ನಡುವೆ ವೇದಿಕೆಯಲ್ಲಿ ಇದ್ದ ಎಲ್ಲಾ ಸ್ವಾಮೀ ಜಿಗಳು ಹಾಗೂ ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾ ಟಿಸಿದರು. ನಂತರ ಮಾತನಾಡಿದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು, ಬಸವಣ್ಣ ಲಿಂಗಾಯಿತ ಧರ್ಮದ ಸ್ಥಾಪಕ. ಹೀಗಾಗಿ ಲಿಂಗಾಯಿತ ಧರ್ಮ ವಿಶ್ವಧರ್ಮ ಎಂದು ಪ್ರತಿಪಾದಿಸಿದರು.

ಲಿಂಗಾಯಿತ ಸ್ವತಂತ್ರ ಧರ್ಮ. ಇದಕ್ಕೆ ಮಾನ್ಯತೆ ಸಿಗಲಿ. ಅಥವಾ ಸಿಗದಿರಲಿ ಯಾವುದೇ ತೊಂದರೆ ಇಲ್ಲ. ಶ್ರೇಷ್ಠತೆಯ ಪ್ರತಿಬಿಂಬವಾದ ಇಷ್ಟಲಿಂಗ ಪೂಜೆಯನ್ನು ಜಗತ್ತಿಗೆ ಪ್ರತಿಪಾದಿಸಿದ ಬಸವಣ್ಣನ ಪರಂಪರೆಯನ್ನು ಒಪ್ಪಿಕೊಂಡು ಇಷ್ಟಲಿಂಗ ಪೂಜೆ ಮಾಡುವವರು ಲಿಂಗಾಯಿತ ಧರ್ಮ ವನ್ನು ಒಪ್ಪಿಕೊಂಡಂತೆ ಎಂದರು. ಮಹಾಸಭಾದ ರಾಜ್ಯ ಪ್ರಧಾನ ಕಾರ್ಯ ದರ್ಶಿ ಶ್ರೀಕಾಂತಸ್ವಾಮಿ, ರಾಜ್ಯ ಕಾರ್ಯದರ್ಶಿ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್, ಮುಖಂಡ ಹೊನ್ನೂರು ಪ್ರಕಾಶ್ ಇತರರು ಉಪಸ್ಥಿತರಿದ್ದರು.

Translate »