ಜಗತ್ತಿನ ಶ್ರೇಷ್ಠ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ: ಪ್ರೀತಮ್ ಜೆ.ಗೌಡ
ಹಾಸನ

ಜಗತ್ತಿನ ಶ್ರೇಷ್ಠ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ: ಪ್ರೀತಮ್ ಜೆ.ಗೌಡ

July 27, 2018

ಹಾಸನ:  ‘ರಾಷ್ಟ್ರಪತಿಯಾಗಿ ಸಂಶೋಧನೆ ಮಾಡಿ ದಂತಹ ಜಗತ್ತಿನ ಶ್ರೇಷ್ಠ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ’ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ಹೇಳಿದರು.

ನಗರದ ಸಾಲಗಾಮೆ ರಸ್ತೆಯಲ್ಲಿರುವ ಎಂ.ಕೃಷ್ಣ ಅಂಧ ಮಕ್ಕಳ ಶಾಲೆ ಸಭಾಂಗಣದಲ್ಲಿ ಮಾನವ ಹಕ್ಕುಗಳ ವೇದಿಕೆಯಿಂದ ಗುರು ವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲಾಂ ಅವರು ಮಕ್ಕಳಿಗೆ ಪ್ರೇರಣೆ ಯಾಗಿದ್ದರು. ಸಾಮಾನ್ಯ ಕುಟುಂಬದಿಂದ ಬಂದಂತಹ ಅವರು ಪರಮಾಣು ಶಕ್ತಿಯಲ್ಲಿ ಸಂಶೋಧನೆ ನಡೆಸಿ ಯಶಸ್ವಿಯಾಗಿ ಜಗತ್ತಿಗೆ ಮಾದರಿಯಾದರು. ರಾಜಕೀಯವನ್ನು ಮೀರಿ ಕೆಲವೇ ಕೆಲ ವ್ಯಕ್ತಿಗಳು ಇದ್ದಾರೆ. ಅಂತವರಲ್ಲಿ ಅಬ್ದುಲ್ ಕಲಾಂ ಕೂಡ ಒಬ್ಬರು ಎಂದು ಕಿವಿಮಾತು ಹೇಳಿದರು.

ಸಾಮರಸ್ಯಕ್ಕೆ ಮತ್ತು ಸೌಹಾರ್ದತೆಗೆ ಪ್ರೇರಣೆ ಆಗಿದ್ದ ಕಲಾಂ ಅವರ ನಡವಳಿಕೆಗಳೂ ಇಂದಿನ ಯುವ ಪೀಳಿಗೆಗೆ ಅವಶ್ಯಕ ವಾಗಿದೆ. ಅವರ ಆದರ್ಶವನ್ನು ಮೈಗೂಡಿಸಿಕೊಂಡು ಮುಂದೆ ನಡೆದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಕರೆ ನೀಡಿದರು. ನವಕರ್ನಾಟಕ ಯುವಶಕ್ತಿ ರಾಜ್ಯಾಧ್ಯಕ್ಷ ಕೆ.ಎನ್. ಲಿಂಗೇಗೌಡ ಮಾತನಾಡಿ, ಯಾರು ಇತಿಹಾಸ ಓದಿರುವುದಿಲ್ಲ ಅವರು ಇತಿಹಾಸ ಸೃಷ್ಟಿಸಲಾರರು. ದೇಶಕ್ಕಾಗಿ ತ್ಯಾಗ, ಬಲಿದಾನವನ್ನು ಮಾಡಿ ದವರನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಬಡ ಕುಟುಂಬದಿಂದ ಬಂದ ಕಲಾಂ ಅವರು ರಾಷ್ಟ್ರಪತಿ ಯಾದರು. ಅವರ ಆದರ್ಶ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ. ಆದರೆ, ವೇಗವಾಗಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ನಾವು ಮನುಷ್ಯತ್ವವನ್ನೇ ಕಳೆದುಕೊಳ್ಳುತ್ತಿದ್ದೇವೆ. ಯುವಶಕ್ತಿ ಎಚ್ಚರವಾಗಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಹಿರಿಯ ವಾರ್ತಾಧಿಕಾರಿ ವಿನೋದ್‍ಚಂದ್ರ, ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾಧ್ಯಕ್ಷ ಸೈಯದ್ ಏಜಾಜ್, ನಿರ್ದೇಶಕರಾದ ಕೆ.ಸಿ.ಮಂಜುನಾಥ್, ಸಿ.ಎಸ್.ಮಹಾಂತಪ್ಪ ಇದ್ದರು.

Translate »