ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರಾರಂಭ
ಮೈಸೂರು

ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರಾರಂಭ

July 17, 2018

ವಿಜಯಪುರ: ಸ್ವಲ್ಪ ದಿನಗಳಿಂದ ತಣ್ಣಗಾಗಿದ್ದ ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರ್ ಆರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

ಚುನಾವಣೆ ನಂತರ ಇದೇ ಮೊದಲ ಬಾರಿಗೆ ಲಿಂಗಾಯಿತ ಹೋರಾಟ ಕುರಿತು ಮಾತ ನಾಡಿದ ಅವರು, ಅನೇಕ ಲಿಂಗಾಯತ ನಾಯಕರು ಚುನಾವಣಾ ಪ್ರಕ್ರಿಯೆ ಹಾಗೂ ಹೊಸ ಸರ್ಕಾರ ರಚನೆಯಲ್ಲಿ ನಿರತರಾಗಿದ್ದರಿಂದ ಹೋರಾಟಕ್ಕೆ ವಿರಾಮ ನೀಡಲಾಗಿದೆ. ಈ ತಿಂಗಳ ನಂತರ ಮತ್ತೆ ಹೋರಾಟ ಆರಂಭಿಸು ವುದಾಗಿ ಹೇಳಿದರು. ಜೆಡಿಎಸ್ ಪಕ್ಷದ ಬಸವರಾಜ್ ಹೊರಟ್ಟಿ ಕೂಡಾ ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ಎಂ. ಬಿ. ಪಾಟೀಲ್ ತಿಳಿಸಿದರು.

ಲಿಂಗಾಯಿತ ಸಮುದಾಯದ ಪ್ರತ್ಯೇಕ ಧರ್ಮದ ಹೋರಾಟವನ್ನು ಮತ್ತೆ ಆರಂಭಿಸುವ ಕುರಿತು ನಾಯಕರು ಹಾಗೂ ತಜ್ಞರು ಸಭೆಯನ್ನು ಆರಂಭಿಸಿ ದ್ದಾರೆ. ಆದರೆ, ಈ ಬಾರಿ ಹೋರಾಟದ ಸ್ವರೂಪ ಬೇರೆ ರೀತಿಯದ್ದಾಗಿರುತ್ತದೆ ಎಂದರು. ಬಸವಣ್ಣನ ಜೀವನ ಹಾಗೂ ಲಿಂಗಾಯಿತ ಧರ್ಮದ ಆರಂಭದ ದಿನಗಳ ಬಗ್ಗೆ ತಂಡಗಳು ಮಾಹಿತಿ ಸಂಗ್ರಹಿಸುತ್ತಿವೆ. ಮಾಹಿತಿ ಸಂಶೋಧನೆ ನಂತರ ಲಿಂಗಾಯಿತ ಧರ್ಮದ ಹುಟ್ಟಿನ ಬಗ್ಗೆ ರಾಜ್ಯದಲ್ಲಿನ ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು. ಸಕಾರಾತ್ಮಕ ಫಲಿತಾಂಶ ಸಿಗುವವರೆಗೂ ಹೋರಾಟವನ್ನು ತೀವ್ರಗೊಳಿಸಲಾಗುವುದು, ಈಗಲೂ ಕೂಡಾ ನಾವು ಹಿಂದೂಗಳಾಗಿಯೇ ಉಳಿದಿವೆ. ಭೌದ್ದ ಧರ್ಮದ ರೀತಿಯಲ್ಲಿ ಬಸವಧರ್ಮಕ್ಕೆ ಜಾಗತಿಕವಾಗಿ ಪ್ರತ್ಯೇಕ ಧರ್ಮದ ಸ್ಥಾನಮಾನ ದೊರೆಯಲಿದೆ ಎಂದು ಎಂ. ಬಿ. ಪಾಟೀಲ್ ತಿಳಿಸಿದರು.

Translate »