ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ, ಎರಡೂ ಒಂದೇ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಪುನರುಚ್ಛಾರ
ಮೈಸೂರು

ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ, ಎರಡೂ ಒಂದೇ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಪುನರುಚ್ಛಾರ

April 27, 2018

ಮೈಸೂರು: ವೀರಶೈವ-ಲಿಂಗಾಯತ ಬೇರೆ ಬೇರೆ ಯಲ್ಲ. ಎರಡೂ ಒಂದೇ ಎಂದು ಸಂಶೋ ಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು. ಮೈಸೂರು ಮಾನಸ ಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಜಂಟಿ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಗುರುವಾರ ಏರ್ಪಡಿಸಿದ್ದ `ಶರಣ ಚಳವಳಿ ಮತ್ತು ಆಧುನಿಕ ಸಾಮಾಜಿಕ ಚಳವಳಿಗಳು: ಅನುಸಂಧಾನದ ನೆಲೆಗಳು’ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವಕ್ಕೆ ಮಾದರಿಯಾದ ಹಾಗೂ ಎಲ್ಲ ಧರ್ಮಗಳನ್ನು ಸಮೀಕರಣಗೊಳಿ ಸುವಂಥ ಧರ್ಮ ಪ್ರಚಾರ ಮಾಡಿದವರು ಬಸವಣ್ಣನವರು. ಇಡೀ ವಿಶ್ವವೇ ಬಸವ ಧರ್ಮವನ್ನು ಮೆಚ್ಚಿಕೊಂಡಿದ್ದು, ವಿಶ್ವ ಧರ್ಮವನ್ನು ಒಂದುಗೂಡಿಸಿದ ವೀರಶೈವರ ಚಂದಿರ ಎಂದು ಕವಿಯೊಬ್ಬ ಹೊಗಳಿ ದ್ದಾನೆ ಎಂದು ಹೇಳಿದರು.

ಬಸವಣ್ಣ ಬ್ರಾಹ್ಮಣನಾಗಿದ್ದರೂ ಬಳಿಕ ಕ್ರಾಂತಿಕಾರಿಯಾದರು. ಬಸವಣ್ಣ ಹುಟ್ಟಿ ನಿಂದ ಬ್ರಾಹ್ಮಣ ನಂತರ ವೀರಶೈವರಾಗು ತ್ತಾರೆ. ಬ್ರಾಹ್ಮಣ ಧರ್ಮಶಾಸ್ತ್ರಕ್ಕೆ ಮತ್ತು ಜಾತಿ ವ್ಯವಸ್ಥೆಗೆ ಪ್ರಾಶಸ್ತ್ಯ ನೀಡಿದ್ದರಿಂದ ಅದನ್ನು ಬಿಟ್ಟು ವೀರಶೈವ ಧರ್ಮಕ್ಕೆ ಸೇರುತ್ತಾರೆ. ಅಂದರೆ ಬಸವಣ್ಣನವರಿಗೂ ಹಿಂದೆಯೇ ವೀರಶೈವ ಪಂಥವಿತ್ತು. ಹಿಂದೆ ಇದು ಅನೇಕ ಕ್ರಾಂತಿಕಾರಿ ತತ್ವ ಒಳಗೊಂಡಿತ್ತು. ಹಾಗಾಗಿ ಬಸವಣ್ಣನನ್ನು ವೀರಶೈವರ ಆಗಮಿಕ ವಿಜ್ಞಾನಿ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಮೈಸೂರು ವಿವಿ ಕುಲಸಚಿವೆ ಡಿ.ಭಾರತಿ ಮಾತನಾಡಿ, ಎಲ್ಲ ರಂಗದಲ್ಲೂ ಶೋಷಣೆ ನಡೆಯುತ್ತಿದೆ. ಚಲನಚಿತ್ರ ನಟಿಯರ ಮೇಲೆ ಕಾಸ್ಟಿಂಗ್ ಕೌಚ್ (ಲೈಂಗಿಕ ಕಿರುಕುಳ) ಹೆಚ್ಚುತ್ತಿ ರುವುದು ಮಾಧ್ಯಮದಲ್ಲಿ ಚರ್ಚೆಯಾ ಗುತ್ತಿದೆ. ಕಾಸ್ಟಿಂಗ್ ಕೌಚ್‍ನಿಂದ ಸಂಸತ್ ಕೂಡ ಹೊರತಾಗಿಲ್ಲ ಎಂದು ರೇಣುಕಾ ಚೌಧರಿ ಆರೋಪಿಸಿದ್ದಾರೆ. ಇಂತಹ ಕೆಟ್ಟ ವ್ಯವಸ್ಥೆಯನ್ನು ಸಮರ್ಥಿಸುವವರು ಇರುವುದು ದುರಂತದ ಸಂಗತಿ ಎಂದು ವಿಷಾದಿಸಿದರು. ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆ ನಿರ್ದೇಶಕ ಎಂ.ನೀಲಗಿರಿ ತಳವಾರ, ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಚಂದ್ರಶೇಖರಯ್ಯ, ವಿವಿ ಹಣಕಾಸು ಅಧಿಕಾರಿ ಮಹದೇವಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »