ಮುಂದಿನ ಮೂರು ದಿನದಲ್ಲಿ ರಾಜ್ಯದಲ್ಲೂ ಮಳೆ ಸಾಧ್ಯತೆ
ಮೈಸೂರು

ಮುಂದಿನ ಮೂರು ದಿನದಲ್ಲಿ ರಾಜ್ಯದಲ್ಲೂ ಮಳೆ ಸಾಧ್ಯತೆ

April 29, 2019

ಚೆನ್ನೈ: ಹಿಂದೂ ಮಹಾ ಸಾಗರ ಮತ್ತು ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತಷ್ಟು ತೀವ್ರವಾಗಿದ್ದು, ಫ್ಯಾನಿ ಚಂಡ ಮಾರುತ ನಾಳೆ ತಮಿಳುನಾಡಿಗೆ ಕಾಲಿಟ್ಟು ಮುಂದಿನ ವಾರ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಯಿದೆ. ಇದರಿಂದ ಕರ್ನಾಟಕದ ಕರಾ ವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಭಾರ ತೀಯ ಹವಾಮಾನ ಇಲಾಖೆ ತಿಳಿಸಿದೆ.

ಚೆನ್ನೈಯ ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, ನಿನ್ನೆ ವಾಯು ಭಾರ ಕುಸಿತ ತೀವ್ರವಾಗಿದ್ದು, ಚಂಡ ಮಾರುತ ಬೀಸಲು ಆರಂಭವಾಗಿದೆ. ನಾಳೆ ಉತ್ತರ ತಮಿಳುನಾಡು ಮತ್ತು ಆಂಧ್ರಪ್ರದೇಶದ ದಕ್ಷಿಣ ತೀರಕ್ಕೆ ಮುಂದಿನ ಮಂಗಳವಾರ ಸಾಯಂಕಾಲ ಕಾಲಿಡಲಿದೆ ಎಂದು ಅದು ಹೇಳಿದೆ. ಇದುವರೆಗೆ ಮಳೆ ಇಲ್ಲದೆ ಬಿಸಿಲಿ ನಿಂದ ತತ್ತರಿಸಿ ಹೋಗಿದ್ದ ಚೆನ್ನೈ, ತಿರುವಲ್ಲೂರು ಮತ್ತು ಕಂಚೀಪುರಂನ ಹಲವು ಪ್ರದೇಶಗಳು ಮಳೆಯಿಂದ ಅತ್ಯಂತ ಹೆಚ್ಚು ಲಾಭ ಪಡೆಯಲಿದ್ದು, ಏಪ್ರಿಲ್ 30 ಮತ್ತು ಮೇ 1ರಂದು ತಮಿಳುನಾಡಿನ ಉತ್ತರ ತೀರದಲ್ಲಿ ಹಗುರದಿಂದ ಕೂಡಿದ ಭಾರೀ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ವಾರ 100 ಮಿಲಿ ಮೀಟರ್ ನಿಂದ 200 ಮಿಲಿ ಮೀಟರ್ ವರೆಗೆ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ವರದಿಗಳು ತಿಳಿಸಿವೆ. ತಮಿಳುನಾಡು ತೀರದಲ್ಲಿ 1200 ಕಿಲೋ ಮೀಟರ್‍ವರೆಗೆ ಫ್ಯಾನಿ ಚಂಡಮಾರುತದ ವ್ಯಾಪ್ತಿ ವಿಸ್ತಾರವಾಗಲಿದ್ದು 400 ಕಿಲೋಮೀಟರ್ ವರೆಗೆ ಮಳೆ ಸುರಿಯಲಿದೆ. ಸೋಮವಾರದ ಹೊತ್ತಿಗೆ ಸ್ಪಷ್ಟ ಚಿತ್ರಣ ತಿಳಿಯಲಿದೆ ಎನ್ನುತ್ತಾರೆ ತಜ್ಞರು.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಫ್ಯಾನಿ ಚಂಡಮಾರುತ ಗಂಟೆಗೆ 80ರಿಂದ 90 ಕಿಲೋಮೀಟರ್ ವೇಗದಲ್ಲಿ ಆರಂಭವಾಗಿ ಭಾನುವಾರ ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ ತಲುಪಲಿದೆ. ಮಂಗಳವಾರದ ಹೊತ್ತಿಗೆ ತಮಿಳುನಾಡಿನಲ್ಲಿ ಗಂಟೆಗೆ 140ರಿಂದ 150 ಕಿಲೋಮೀಟರ್ ತೀವ್ರ ವೇಗದಲ್ಲಿ ಫ್ಯಾನಿ ಚಂಡಮಾರುತ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Translate »