ಹಿಟ್ಲರ್ ಫೇಕ್ ಫೋಟೋ ಬಳಸಿ ಪಿಎಂ ಮೋದಿ ಕಾಲೆಳೆಯಲು ಹೋಗಿ ಮುಖಭಂಗಕ್ಕೀಡಾದ ನಟಿ ರಮ್ಯಾ!
ಮೈಸೂರು

ಹಿಟ್ಲರ್ ಫೇಕ್ ಫೋಟೋ ಬಳಸಿ ಪಿಎಂ ಮೋದಿ ಕಾಲೆಳೆಯಲು ಹೋಗಿ ಮುಖಭಂಗಕ್ಕೀಡಾದ ನಟಿ ರಮ್ಯಾ!

April 30, 2019

ನವದೆಹಲಿ: ನಟಿ ಕಮ್ ರಾಜಕಾರಣಿ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಸರ್ವಾಧಿಕಾರಿ ಹಿಟ್ಲರ್ ಅವರ ಫೇಕ್ ಫೋಟೋ ಬಳಸಿ ಪ್ರಧಾನಿ ಮೋದಿಯ ಕಾಲೆಳೆಯಲು ಹೋಗಿ ತಾವೇ ಮುಖಭಂಗ ಕ್ಕೀಡಾಗಿದ್ದಾರೆ.

ಪ್ರಧಾನಿ ಮೋದಿ ಕ್ಯೊಟೋದ ಬುದ್ದಿಸ್ಟ್ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭ ದಲ್ಲಿ ಬಾಲಕನೊಬ್ಬನ ಕಿವಿಯನ್ನು ನಯ ವಾಗಿ ಹಿಂಡುವ ಮೂಲಕ ಫೋಟೋಗೆ ಪೋಸ್ ಕೊಟ್ಟಿದ್ದರು. ಈ ಫೋಟೋಗೆ ಹಿಟ್ಲರ್ ಬಾಲಕಿಯ ಕಿವಿ ಹಿಂಡುತ್ತಿರುವ ಫೇಕ್ ಫೋಟೋವನ್ನು ಕ್ಲಬ್ ಮಾಡಿ ಹಾಕಿ ಈ ಇಬ್ಬರ ಫೋಟೋವನ್ನು ನೋಡಿದರೆ ನಿಮಗೆ ಏನನಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಹಿಟ್ಲರ್ ಬಾಲಕಿಯ ಭುಜವನ್ನು ಹಿಡಿದುಕೊಂಡಿರುವ ಫೋಟೋವನ್ನು ತಿರುಚಿ ಕಿವಿಯನ್ನು ಹಿಂಡುತ್ತಿರುವಂತೆ ತೋರಿಸಿದ್ದಾರೆ. ಇದಕ್ಕೆ ಟ್ವೀಟರಿಗರು ಒರಿಜಿನಲ್ ಫೋಟೋವನ್ನು ಹಾಕಿ ರಮ್ಯಾರನ್ನು ಟೀಕಿಸುತ್ತಿದ್ದಾರೆ.

Translate »