ಮಾಜಿ ಸಿಎಂ ಎಸ್.ಎಂ.ಕೃಷ್ಣ ಹುಟ್ಟುಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ
ಮೈಸೂರು

ಮಾಜಿ ಸಿಎಂ ಎಸ್.ಎಂ.ಕೃಷ್ಣ ಹುಟ್ಟುಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ

April 30, 2019

ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ಮೇ 1ರಂದು ಮೈಸೂರಿನ ಕುವೆಂಪುನಗರದಲ್ಲಿರುವ ಅಂಬೇಡ್ಕರ್ ಉದ್ಯಾನವನದ ಮುಂಭಾಗ ಬೆಳಿಗ್ಗೆ 10.30ಕ್ಕೆ ಪೌರ ಕಾರ್ಮಿಕರಿಗೆ ಎಸ್.ಎಂ.ಕೃಷ್ಣ ಅಭಿಮಾನಿ ಬಳಗದ ವತಿ ಯಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ.

ಮಾನಸ ಗಂಗೋತ್ರಿ ಕುವೆಂಪು ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರಧಾನ ಗುರುದತ್ ಪೌರ ಕಾರ್ಮಿಕರನ್ನು ಸನ್ಮಾನಿ ಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಲ್.ನಾಗೇಂದ್ರ, ಖ್ಯಾತ ಮಧುಮೇಹ ತಜ್ಞ ಡಾ.ವಿ.ಲಕ್ಷ್ಮೀನಾರಾಯಣ, ನಗರ ಪಾಲಿಕೆ ಸದಸ್ಯ ಎಂ.ಶಿವ ಕುಮಾರ್, ಎಂ.ಸಿ.ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಬಳಗದ ಅಧ್ಯಕ್ಷ ವಿಕ್ರಾಂತ್ ಪಿ.ದೇವೇಗೌಡ ಉಪಸ್ಥಿತರಿರುವರು.

Translate »