ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಒಕ್ಕಲಿಗ ಮುಖಂಡರ ಸಭೆ
ಮೈಸೂರು

ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಒಕ್ಕಲಿಗ ಮುಖಂಡರ ಸಭೆ

April 11, 2019

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಮುದಾಯದ ಮುಖಂಡರ ಸಭೆ ನಡೆಸಿ, ಬೆಂಬಲ ಕೋರುತ್ತಿರುವ ಬಿಜೆಪಿ, ಬುಧವಾರ ಮೈಸೂರಲ್ಲಿ ಒಕ್ಕಲಿಗ ನಾಯಕರು ಹಾಗೂ ಮುಖಂಡರ ಸಭೆ ನಡೆಸಿತು.

ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ಧಿ ಎಸ್. ಎಂ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಒಕ್ಕಲಿಗ ಮುಖಂಡರ ಗೌಪ್ಯ ಸಭೆಯಲ್ಲಿ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಒಕ್ಕಲಿಗರ ಸಂಘದ ನಿರ್ದೇಶಕ ಪ್ರಸನ್ನಗೌಡ, ಯಶಸ್ವಿನಿ ಸೋಮಶೇಖರ್, ಬಿ.ಪಿ.ಮಂಜು ನಾಥ್, ಅರುಣ್‍ಕುಮಾರ್‍ಗೌಡ, ಹೇಮಂತ್‍ಕುಮಾರ್‍ಗೌಡ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಅನೇಕ ಮುಖಂಡರು, ಶೈಕ್ಷಣಿಕ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಸಿ.ಬಸವೇಗೌಡರು, ಕೆಂಪೀರೇಗೌಡರು, ಬೋಗಾದಿ ಕೃಷ್ಣ ಮಾದೇಗೌಡರು, ಜಿ.ಟಿ. ದೇವೇಗೌಡರು ಚಂದಾ ಎತ್ತಿ ಸಿದ್ದರಾ ಮಯ್ಯನವರ ರಾಜಕೀಯ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತು, ಚುನಾವಣೆಗಳಲ್ಲಿ ಗೆಲ್ಲಿಸಿದ್ದರು. ಆದರೆ ನಂತರದಲ್ಲಿ ಈ ಎಲ್ಲಾ ಮುಖಂಡರನ್ನು ರಾಜಕೀಯವಾಗಿ ಮುಗಿಸಲು ಸಿದ್ದರಾಮಯ್ಯನವರೇ ಪ್ರಯತ್ನಿ ಸಿದರು. ಇದೀಗ ಮೈತ್ರಿಯ ಹೆಸರು ಹೇಳಿ ಕೊಂಡೇ ಮಂಡ್ಯ, ಹಾಸನ ಹಾಗೂ ತುಮ ಕೂರಿನಲ್ಲಿ ಒಕ್ಕಲಿಗರ ನಾಯಕರ ಶಕ್ತಿ ಕುಗ್ಗಿಸಲು ಷಡ್ಯಂತ್ರ ಮಾಡಿದ್ದಾರೆ. ಇದಕ್ಕೆಲ್ಲಾ ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತ್ಯುತ್ತರ ನೀಡದಿದ್ದರೆ ಸಮುದಾಯ ಮತ್ತಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಹಾಗಾಗಿ ಎಲ್ಲರೂ ಸಂಘಟಿತರಾಗಬೇಕೆಂಬ ಒಕ್ಕೊರಲ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿ ತೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸಭೆಯಲ್ಲಿ ಮಾತನಾಡಿದ ಎಸ್.ಎಂ. ಕೃಷ್ಣ ಅವರು, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮೂರೂವರೆ ವರ್ಷ ನಾನು ವಿದೇಶಾಂಗ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೆ. ಪಾಕಿಸ್ತಾನ ನಮ್ಮ ಮೇಲೆ ಆಕ್ರಮಣ ಮಾಡಿದರೆ ಹೇಗೆ ದಾಳಿ ಮಾಡಬೇಕೆಂದು ಯೋಚಿಸುವ ಪರಿಸ್ಥಿತಿಯಿತ್ತು. ಅವರೇನೋ ಬೇಜವಾಬ್ದಾರಿಯಿಂದ ನಡೆದು ಕೊಳ್ಳುತ್ತಾರೆ ಎಂದು ನಾವೂ ಹಾಗೇ ನಡೆದು ಕೊಳ್ಳಲಾದೀತೆ ಎಂಬ ಧೋರಣೆಯಿಂದ ಪಾಕಿಸ್ತಾನದ ಬಗ್ಗೆ ಮೃದುವಾಗಿ ನಡೆದುಕೊಳ್ಳ ಲಾಗಿತ್ತು. ಆದರೆ ಮೋದಿ ಅವರು ಪ್ರಧಾನಿ ಯಾದ ನಂತರ ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಬೇಕೆಂಬ ದಿಟ್ಟ ನಿಲುವು ತೆಗೆದುಕೊಂಡು ಬಾಲಾಕೋಟ್ ನಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಘನತೆ, ಗೌರವ ಹೆಚ್ಚಿರುವುದು ಎಲ್ಲರೂ ಒಪ್ಪಬೇಕಿರುವ ಸತ್ಯ. ಹಾಗಾಗಿ ಇಂತಹ ದಿಟ್ಟ ನಾಯಕ ಮೋದಿ ಯನ್ನು ಮತ್ತೊಮ್ಮೆ ಪ್ರಧಾನಿ ಸ್ಥಾನಕ್ಕೇರಿ ಸಬೇಕು. ಮೈಸೂರು-ಕೊಡಗು ಸಂಸದನಾಗಿ ಉತ್ತಮ ಕೆಲಸ ಮಾಡುತ್ತಿರುವ ಪ್ರತಾಪ ಸಿಂಹ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ಮಾದರಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸಮು ದಾಯಗಳಿಗೆ ಒಳಿತಾಗುವಂತೆ ಕೆಲಸ ಮಾಡುವ ಮೂಲಕ ಒಕ್ಕಲಿಗ ಸಮಾಜದ ಗೌರವ ಹೆಚ್ಚಿಸಿದರು. ನಾವೂ ಕೂಡ ಇವರ ಹಾದಿಯಲ್ಲೇ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟರೆಂದು ಹೇಳಲಾಗಿದೆ.

ಈಗಾಗಲೇ ಬಿಜೆಪಿ ವತಿಯಿಂದ ನಾಯಕ, ಮರಾಠ, ಕುರುಬ, ವೀರಶೈವ ಲಿಂಗಾಯತ, ಉಪ್ಪಾರ, ವಿಶ್ವಕರ್ಮ ಸೇರಿದಂತೆ ವಿವಿಧ ಸಮುದಾಯಗಳ ನಾಯಕರು ಹಾಗೂ ಮುಖಂಡರ ಸಭೆ ನಡೆಸಿರುವುದು ಇಲ್ಲಿ ಉಲ್ಲೇಖಾರ್ಹ.

Translate »