ಬಿಜೆಪಿಯಲ್ಲಿ ದೊರೆತ ಎಲ್ಲಾ ಅಧಿಕಾರದಿಂದ ಸಾಕಷ್ಟು ಸ್ವಂತ ಆಸ್ತಿ ಮಾಡಿಕೊಂಡಿದ್ದೇ ವಿಜಯಶಂಕರ್ ಸಾಧನೆ
ಮೈಸೂರು

ಬಿಜೆಪಿಯಲ್ಲಿ ದೊರೆತ ಎಲ್ಲಾ ಅಧಿಕಾರದಿಂದ ಸಾಕಷ್ಟು ಸ್ವಂತ ಆಸ್ತಿ ಮಾಡಿಕೊಂಡಿದ್ದೇ ವಿಜಯಶಂಕರ್ ಸಾಧನೆ

April 11, 2019

ಮೈಸೂರು: ರಾಜಕೀಯದ ಅರಿವಿಲ್ಲದ ವ್ಯಕ್ತಿಯನ್ನು ಆರಿಸಿದ್ದೇ ಕೊಡಗಿನ ಅಭಿವೃದ್ಧಿ ಹಿನ್ನಡೆಗೆ ಕಾರಣ ಎಂಬ ಸಿ.ಹೆಚ್.ವಿಜಯಶಂಕರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಎರಡು ಬಾರಿ ಸಂಸದರಾಗಿ, ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಕೊನೆಗೆ ಸಚಿವರಾಗಿ ಸ್ವಂತ ಆಸ್ತಿ ಮಾಡಿಕೊಂಡಿದ್ದನ್ನು ಬಿಟ್ಟು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನೆಂಬುದನ್ನು ವಿಜಯಶಂಕರ್ ಜನತೆ ಮುಂದೆ ತಿಳಿಸುವಂತೆ ಸವಾಲೆಸೆದಿದ್ದಾರೆ.

ಒಮ್ಮೆ ಶಾಸಕ, ಎರಡು ಬಾರಿ ಸಂಸದ, ಸೋತು ಕುಳಿತಿದ್ದಾಗ ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ ಸಚಿವ ಸ್ಥಾನ ಕಲ್ಪಿಸಿದ ಬಿಜೆಪಿ ಬಗ್ಗೆ ಸಣ್ಣ ಕೃತಜ್ಞತೆ ತೋರದೆ, ಸ್ಮರಣೆಯನ್ನೂ ಮಾಡದೇ ಕೋಮುವಾದಿ ಪಕ್ಷ ಎಂದು ನೀಚತನದ ಹೇಳಿಕೆ ನೀಡುವ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಅವರಿಂದ ನಾನು ನೈತಿಕ ಪಾಠ ಕಲಿಯುವ ಅಗತ್ಯವಿಲ್ಲ. ಅರಿವಿಲ್ಲದ ವ್ಯಕ್ತಿಯನ್ನು ಆರಿಸಿದ್ದೇ ಕೊಡಗಿನ ಅಭಿವೃದ್ಧಿ ಹಿನ್ನಡೆಗೆ ಕಾರಣ ಎಂದು ಹೇಳಿರುವ ಅವರು, ಸಂಸದರಾಗಿ, ಸಚಿವರಾಗಿ ತಾವು ನೀಡಿರುವ ಕೊಡುಗೆ ಏನೆಂದು ತಿಳಿಸಲಿ. ಸ್ವಂತಕ್ಕೆ ಸಾಕಷ್ಟು ಆಸ್ತಿ ಮಾಡಿಕೊಂಡಿದ್ದನ್ನು ಬಿಟ್ಟರೆ ಜನರಿಗೆ ಏನಾದರೂ ಕೊಡುಗೆ ನೀಡಿದ್ದಾರಾ. ಮೈಸೂರಿಗೆ ಒಂದೇ ಒಂದು ವಿಮಾನ, ರೈಲು ತರಲಾಗಲಿಲ್ಲ. ಮೈಸೂರು-ಕೊಡಗು ಕ್ಷೇತ್ರಕ್ಕೆ ಒಂದೇ ಒಂದು ರಾಷ್ಟ್ರೀಯ ಹೆದ್ದಾರಿ ಮಾಡಿಸಲು ಸಾಧ್ಯವಾಗಲಿಲ್ಲ. ಕೊಡಗಿನಲ್ಲಿ ಈಗ 3 ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿವೆ. ಇವುಗಳನ್ನು ಪ್ರತಾಪ್ ಸಿಂಹ ತಂದಿದ್ದು. ವಿಜಯಶಂಕರ್ ಅಲ್ಲ. ಇವರು ಹುಟ್ಟುವ ಮುನ್ನವೇ ಮಹಾರಾಜರು ಖಾಸಗಿ ಏರ್ ಪೆÇೀರ್ಟ್ ಮಾಡಿಕೊಂಡಿದ್ದರು. ಅಲ್ಲೇ ಅಭಿವೃದ್ಧಿ ಮಾಡಲಾಗಿದೆ. ನಮ್ಮ ಕಾಲದಲ್ಲಿ ಕಟ್ಟಿಸಿದ್ದು ಎನ್ನುವು ದರಲ್ಲಿ ಅರ್ಥವಿಲ್ಲ. ಬಸ್ ಬರಲಿಲ್ಲ ಎಂದರೆ ನಿಲ್ದಾಣ ವಿದ್ದು ಪ್ರಯೋಜನವಿಲ್ಲ ಎಂದು ಚಾಟಿ ಬೀಸಿದರು.

ಹೌದು, ವಿಜಯಶಂಕರ್ ಅವರಂತಹ ರಾಜಕೀಯ ಅರಿವು ನನಗಿಲ್ಲ. ಆದರೆ ಅಭಿವೃದ್ಧಿ ಅರಿವು ಖಂಡಿತ ಇದೆ. ಬಂದವರಿಗೆಲ್ಲಾ ಕೈಮುಗಿದು, ತಂದೆ ಬದುಕಿ ದ್ದಾರೋ, ನಿಧನರಾಗಿದ್ದಾರೋ ಅನ್ನೋದನ್ನೂ ತಿಳಿಯದೆ ನಿಮ್ಮ ತಂದೆ ಹೇಗಿದ್ದಾರೆ? ಎಂದು ಕೇಳಿ ಜನರ ಮನ ನೋಯಿಸುವುದು. ಕೊಡಗಿಗೆ ಬಂದು ಇದು ನಮ್ಮ ಮಾವನ ಊರು ಅನ್ನೋದು. ಮೈಸೂರಿಗೆ ಬಂದಾಗ ಇದು ನಮ್ಮೂರು ಅನ್ನೋದು. ಈ ರೀತಿಯ ಪಾಲಿಟಿಕ್ಸ್ ಬಿಟ್ಟರೆ ಕ್ಷೇತ್ರ ಹಾಗೂ ಜನರಿಗೆ ಏನು ಒಳ್ಳೆಯ ಕೆಲಸ ಮಾಡಿದ್ದಾರೆ, ಅವರೇ ತಿಳಿಸಲಿ. ಸ್ಥಾನಮಾನ ನೀಡಿ ಬೆಳೆಸಿದ ಪಕ್ಷವನ್ನೇ ನೀಚತನದಿಂದ ಟೀಕಿಸುವ ಅವರಿಂದ ನಾನು ನೈತಿಕತೆ, ಅಭಿವೃದ್ಧಿ ಬಗ್ಗೆ ತಿಳಿಯಬೇಕಿಲ್ಲ ಎಂದು ಅತ್ಯಂತ ಕಟುವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಜನರಿಗೆ ಬರೀ ಭಾಷಣ, ಸ್ವಂತಕ್ಕೆ ಅಭಿವೃದ್ಧಿ ಮಾಡಿ ಕೊಳ್ಳುವ ಅವರಂತಹ ರಾಜಕೀಯ ಅರಿವು ನನಗಿಲ್ಲ. ಈವರೆಗೆ ಆ ರೀತಿಯ ರಾಜಕಾರಣ ಮಾಡಿಲ್ಲ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇನೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಬಿಜೆಪಿ ಅಭ್ಯರ್ಥಿಯೂ ಆದ ಹಾಲಿ ಸಂಸದ ಪ್ರತಾಪ್ ಸಿಂಹ, ಎದುರಾಳಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್‍ಗೆ ಟಾಂಗ್ ನೀಡಿದ್ದಾರೆ.

Translate »