ಎಲ್ಲಾ ಪಕ್ಷಗಳ ಸಮಾವೇಶಗಳಿಗೂ  ಕೆ.ಎಂ. ಶರೀಫ್ ಪೆಂಡಾಲ್ ಆಶ್ರಯ
ಮೈಸೂರು

ಎಲ್ಲಾ ಪಕ್ಷಗಳ ಸಮಾವೇಶಗಳಿಗೂ ಕೆ.ಎಂ. ಶರೀಫ್ ಪೆಂಡಾಲ್ ಆಶ್ರಯ

April 11, 2019

ಮೈಸೂರು: ಚುನಾವಣಾ ಸಮಯವಾಗಿರುವುದರಿಂದ ರಾಜಕೀಯ ಪಕ್ಷಗಳು ಹಾಗೂ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುವುದುಂಟು.

ಈ ಹಿಂದೆ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ ಅವರು ಫ್ಲೈಟ್‍ಗಳಲ್ಲಿ ಬಂದು ಬಿಸಿಲನ್ನೂ ಲೆಕ್ಕಿಸದೇ ಕಾದಿರುತ್ತಿದ್ದ ಜನ ಸ್ತೋಮವನ್ನುದ್ದೇಶಿಸಿ ಭಾಷಣ ಮಾಡಲು ಸಮಾವೇಶದ ಎತ್ತರದ ವೇದಿಕೆ ಏರುತ್ತಿದ್ದ ಪ್ರಸಂಗಗಳೀಗ ಇತಿಹಾಸ.

ಪರಿಸ್ಥಿತಿ ಬದಲಾಗಿದ್ದು, ಚುನಾವಣಾ ಪ್ರಚಾರದ ಬಹಿರಂಗ ಸಭೆಗಳಲ್ಲಿ ಜನರಿ ಗಾಗಿ ಬೃಹತ್ ಪೆಂಡಾಲ್, ಫ್ಯಾನ್, ಬ್ಯಾರಿ ಕೇಡ್, ಕುಡಿಯುವ ನೀರು, ಆಸನಗಳ ವ್ಯವಸ್ಥೆ ಸೇರಿದಂತೆ ಬರುವವರಿಗೆ ಹಲವು ಅನುಕೂಲಗಳನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ. ಅಂತಹ ಸಮಾವೇಶಗಳಿಗೆ ಅತ್ಯಾಧುನಿಕ ಸುಸಜ್ಜಿತ ಪೆಂಡಾಲ್‍ಗಳನ್ನು ನಿರ್ಮಿಸಿ ಭವ್ಯ ವೇದಿಕೆ ಸಿದ್ಧಪಡಿಸುವು ದರಲ್ಲಿ ಮೈಸೂರಿನ ಎಂ. ಶರೀಫ್, ಎಲ್ಲಾ ಪಕ್ಷಗಳ ನಾಯಕರ ವಿಶ್ವಾಸ ಗಳಿಸಿದ್ದಾರೆ.

ಮೈಸೂರಿನ ಉದಯಗಿರಿ ನಿವಾಸಿ, ಸುಮಾರು 59 ವರ್ಷ ವಯಸ್ಸಿನ ಶರೀಫ್, ಅಗ್ರಹಾರದಲ್ಲಿ ಶರೀಫ್ ಫರ್ನೀ ಚರ್ಸ್ ಹಾಗೂ ನಜರ್‍ಬಾದಿನಲ್ಲಿ ದೊಡ್ಡ ಮಳಿಗೆಯನ್ನು ಹೊಂದಿದ್ದಾರೆ.

ಶೂನ್ಯ ಬಂಡವಾಳ: ಪಿಯುಸಿ ನಂತರ 35 ವರ್ಷಗಳ ಹಿಂದೆ ಶೂನ್ಯ ಬಂಡವಾಳ ದಿಂದ ಚಿಕ್ಕದಾಗಿ ಪೆಂಡಾಲ್ ಹಾಕುವ ವೃತ್ತಿ ಆರಂಭಿಸಿದ ಶರೀಫ್ ಈ ಹಿಂದೆ ಜೀವ ರಾಜ ಆಳ್ವ, ಸುಷ್ಮಾ ಸ್ವರಾಜ್, ಸ್ವರಾಜ್ ಲೋಕಶಕ್ತಿಯಂತಹ ಹಲವು ಪ್ರಮುಖ ಪಕ್ಷಗಳ ಸಮಾವೇಶಗಳಿಗೆ ಬೃಹತ್ ಪೆಂಡಾಲ್ ಹಾಕುವ ಮಟ್ಟಕ್ಕೆ ಬೆಳೆದಿದ್ದಾರೆ.

ಮೋದಿ ರ್ಯಾಲಿ: ಮಂಗಳವಾರ ಮಹಾ ರಾಜ ಕಾಲೇಜು ಮೈದಾನದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂ ಡಿದ್ದ ಬಿಜೆಪಿ ಸಂಕಲ್ಪ ರ್ಯಾಲಿಗೂ ಸುಸಜ್ಜಿತ ವಾಟರ್ ಪ್ರೂಫ್ ಬೃಹತ್ ಪೆಂಡಾಲ್ ಅನ್ನು ಶರೀಫ್ ಅವರೇ ಹಾಕಿದ್ದರು.
ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಶರೀಫ್, ಮೋದಿ ಅವರ ಬಹಿರಂಗ ಸಭೆಗೆ ಒಂದು ಲಕ್ಷ ಚದರಡಿ ವಿಸ್ತಾರದ (250×400 ಅಡಿ) ಪೆಂಡಾಲ್, ಬೃಹತ್ ವೇದಿಕೆ, ಸೋಫಾ, ವಿಐಪಿ ಚೇರ್ ಗಳು, ಏರ್‍ಕೂಲರ್, ಫ್ಯಾನ್‍ಗಳು, ಎಲ್‍ಇಡಿ, ಬ್ಯಾರಿಕೇಡ್‍ಗಳು, ಆರಮ್ ಅಂಡ್ ಆರಮ್‍ಲೆಸ್ ಪ್ಲಾಸ್ಟಿಕ್ ಚೇರ್‍ಗಳನ್ನು ಒದ ಗಿಸಿದ್ದೆವು ಎಂದರು.

ಶೇ.40ರಷ್ಟು ವಾಟರ್ ಪ್ರೂಫ್ ಪೆಂಡಾಲ್ ಆಗಿದ್ದು, ಮಂಗಳವಾರದ ಸಭೆಗೆ ನಾವು 19,15,000 ರೂ. ಬಿಲ್ ಕೊಟ್ಟಿದ್ದೇವೆ. ಇಂದು ನಡೆದ ಮಾಯಾವತಿ ಅವರ ಕಾರ್ಯ ಕ್ರಮಕ್ಕೂ ಎರಡೂ ಬದಿಯ ಸಾಮಾನ್ಯ ಪೆಂಡಾಲ್ ತೆರವುಗೊಳಿಸಿ ಮಧ್ಯದ ಜರ್ಮನ್ ಟೆಂಟ್ ಮಾದರಿಯ ಚಪ್ಪರ ವನ್ನು ಕೇವಲ 5,000 ಮಂದಿಗೆ ಅಗತ್ಯ ವಿರುವಷ್ಟನ್ನು ಮಾತ್ರ ಉಳಿಸಿದ್ದೆವು ಎಂದು ಶರೀಫ್ ನುಡಿದರು.

ಏಪ್ರಿಲ್ 12ರಂದು ಜೆಡಿಎಸ್-ಕಾಂಗ್ರೆಸ್ ಸಮಾವೇಶವಿದೆ ಎಂದು ಹೇಳಿದ್ದಾರೆ. ಆದರೆ ದೃಢಪಡಿಸಿಲ್ಲ. ಗುರುವಾರ ಬೆಳಿಗ್ಗೆ ಹೇಳದಿದ್ದಲ್ಲಿ ಸಂಪೂರ್ಣ ಪೆಂಡಾಲ್ ಅನ್ನು ತೆಗೆಯುತ್ತೇವೆ ಎಂದು ನುಡಿದರು.

ಜೆಎಸ್‍ಎಸ್ ಮಹಾ ವಿದ್ಯಾಪೀಠ: ನನಗೆ ಜೆಎಸ್‍ಎಸ್ ಮಹಾ ವಿದ್ಯಾಪೀಠ ಅತೀ ದೊಡ್ಡ ಗ್ರಾಹಕರು. ಮಠದ ಯಾವುದೇ ಕಾರ್ಯಕ್ರಮ ನಡೆದರೂ ಪೆಂಡಾಲ್, ವೇದಿಕೆ ಸಿದ್ಧಪಡಿಸಲು ನನಗೇ ಹೇಳುತ್ತಾರೆ. ಕಳೆದ 35 ವರ್ಷಗಳಿಂದ ನಾನೇ ಅದರ ಜವಾ ಬ್ದಾರಿ ನಿರ್ವಹಿಸಲು ಅವಕಾಶ ಸಿಕ್ಕಿದ್ದು ನನ್ನ ಸುಯೋಗ ಎಂದು ಶರೀಫ್ ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನ, ಟೌನ್‍ಹಾಲ್, ಅರಮನೆ ಆವ ರಣಗಳಲ್ಲಿ ರಾಜಕೀಯ ಪಕ್ಷಗಳು, ಜಿಲ್ಲಾ ಡಳಿತ ನಡೆಸುವ ಉದ್ಯೋಗ ಮೇಳ, ಚುನಾವಣಾ ಸಮಾವೇಶಗಳು, ದಸರಾ ಕಾರ್ಯಕ್ರಮಗಳಿಗೂ ಮೈಸೂರಲ್ಲಿ ನಾನೊಬ್ಬನೇ ಅವರು ಅಪೇಕ್ಷಿಸುವ ಪ್ರಮಾಣದಲ್ಲಿ ಪೆಂಡಾಲ್ ಅಳವಡಿಸಲು ಬೇಕಾದ ಸಾಮಗ್ರಿಗಳನ್ನು ಹೊಂದಿದ್ದೇನೆ ಎಂದು ಅವರು ತಿಳಿಸಿದರು.

ಪೇಮೆಂಟ್ ಬಾಕಿ: ಸರ್ಕಾರದಿಂದ ಬಿಲ್ ಪಾಸಾಗಲು ಕನಿಷ್ಠ 6 ತಿಂಗಳಾಗುತ್ತದೆ. ರಾಜಕೀಯ ಪಕ್ಷಗಳದ್ದೂ ಸಹ ಮೊದಲು ಪಡೆದದ್ದೇ ಹಣ, ಬಾಕಿ ಬರುವುದು ತುಂಬಾ ತಡವಾಗುತ್ತದೆ. ಆದರೆ ರಾಜ ಕೀಯ ನಾಯಕರು ನನ್ನ ಮೇಲಿಟ್ಟಿರುವ ವಿಶ್ವಾಸ-ಅಭಿಮಾನಕ್ಕೆ ಕಟ್ಟುಬಿದ್ದು, ಹೇಗೋ ನಿಭಾಯಿಸುತ್ತಿದ್ದೇನೆ ಎಂದು ಶರೀಫ್ ನುಡಿ ದರು. ಮೈಸೂರು, ಮಂಡ್ಯ, ಹಾಸನ, ಚಾಮ ರಾಜನಗರ ಜಿಲ್ಲೆಗಳಲ್ಲದೇ ಬೇರೆ ಬೇರೆ ನಗರಗಳಲ್ಲಿ ನಡೆಯಲಿರುವ ಅತೀ ಗಣ್ಯರ ಸಭೆಗಳಿಗೂ ನಾನು ವೇದಿಕೆ ಮತ್ತು ಪೆಂಡಾಲ್ ಅನ್ನು ನಿರ್ಮಿಸುವಷ್ಟು ಮೂಲಭೂತ ಸೌಕರ್ಯವನ್ನು ಹೊಂದಿದ್ದೇನೆ ಎಂದು ಶರೀಫ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »