ನಾನು ಯಾರನ್ನೂ ದ್ವೇಷ ಮಾಡಿಲ್ಲ, ನನ್ನಿಂದ ನೋವಾಗಿದ್ದರೆ ಮರೆತು, ಕ್ಷಮಿಸಿಬಿಡಿ: ಎಸ್‍ಎಂಕೆ
ಮೈಸೂರು

ನಾನು ಯಾರನ್ನೂ ದ್ವೇಷ ಮಾಡಿಲ್ಲ, ನನ್ನಿಂದ ನೋವಾಗಿದ್ದರೆ ಮರೆತು, ಕ್ಷಮಿಸಿಬಿಡಿ: ಎಸ್‍ಎಂಕೆ

January 5, 2020

ಬೆಂಗಳೂರು, ಜ. 4- ನಾನು ಯಾರ ಬಗ್ಗೆಯೂ ದ್ವೇಷ ಸಾಧಿಸುವ ಪ್ರಯತ್ನ ವನ್ನೇ ಮಾಡಲಿಲ್ಲ. ಇದಕ್ಕೆ ಕಾರಣ ನನ್ನ ತಂದೆ ಬೋಧಿಸಿದ ಮೌಲ್ಯಗಳು. ಅವರು ಬೋಧಿಸಿದ ಮೌಲ್ಯಗಳು ನನ್ನನ್ನ ಆ ಕಡೆ ಈ ಕಡೆ ಕರೆದುಕೊಂಡು ಹೋಗಲಿಲ್ಲ. ಅಪ್ಪಿತಪ್ಪಿ ನನ್ನಿಂದ ಯಾರಿಗಾದರೂ ನೋವಾ ಗಿದ್ದರೆ ಮರೆತುಬಿಡಿ, ಕ್ಷಮಿಸಿಬಿಡಿ. ಪರಸ್ಪರ ನಿಂದನೆಯನ್ನು ನಿಲ್ಲಿಸಿಬಿಡಿ, ಎಲ್ಲಾ ಮುಂದೆ ಸಾಗೋಣ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೇಳಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೃಷ್ಣ ಪಥ ಹಲವು ವಿಶೇಷಗಳಿಗೆ ಸಾಕ್ಷಿಯಾ ಗಿತ್ತು. ಕೃಷ್ಣಪಥ ಸಮಿತಿಯಿಂದ ಹೊರತಂದಿ ರುವ ಆರು ಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಯಿತು. ಕೃಷ್ಣ ಪಥ, ಚಿತ್ರ ದೀಪ ಸಾಲು, ಸ್ಮೃತಿವಾಹಿನಿ, ಭವಿಷ್ಯ ದರ್ಶನ, ಸ್ಟೇಟ್ಸ್ ಮ್ಯಾನ್ ಎಸ್.ಎಂ.ಕೃಷ್ಣ ಸೇರಿ ದಂತೆ 6 ಗ್ರಂಥಗಳು ಬಿಡುಗಡೆಯಾದವು. ಜಾನಪದ ಶೈಲಿಯಲ್ಲಿ ಸೋಬಾನೆ ಪದ ದೊಂದಿಗೆ ಬುಟ್ಟಿಯಲ್ಲಿದ್ದ ಗ್ರಂಥಗಳನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾ ನಂದ ಮಹಾರಾಜ್ ಗ್ರಂಥಗಳನ್ನ ಬಿಡು ಗಡೆ ಮಾಡಿದರು.

ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಎಸ್‍ಎಂಕೆ ನಡೆದು ಬಂದ ಕೃಷ್ಣಪಥದ ಬಗ್ಗೆ ಮೆಲುಕು ಹಾಕಲಾಯಿತು. ಇದೇ ವೇಳೆ ಎಸ್‍ಎಂಕೆ ಕೂಡ ತಮ್ಮ ಹಾದಿಯನ್ನು ಚುಟುಕಾಗಿ ಮೆಲುಕು ಹಾಕಿ ದರು. ತಂದೆ ಮಲ್ಲಯ್ಯನವರಿಂದ ಬಂದ ಸಂಸ್ಕಾರ, ಆದರ್ಶಗಳು, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡಿದರು. ಜೊತೆಗೆ ಎಸ್‍ಎಂಕೆ ರಾಜಕೀಯ ದಿಕ್ಕನ್ನು ಬದಲಾಯಿಸಿದ ವೀರಣ್ಣಗೌಡರನ್ನು ಸೋಲಿ ಸಿದ ಚುನಾವಣೆಯನ್ನು ನೆನಪಿಸಿದರು. ಕಾಡುಗಳ್ಳ ವೀರಪ್ಪನ್‍ನಿಂದ ಡಾ.ರಾಜ್ ಕುಮಾರ್ ಅಪಹರಣ ಪ್ರಕರಣವನ್ನು ಸ್ಮೃತಿಪಟಲದ ಮುಂದೆ ತಂದರು.

ಇಂಗ್ಲಿಷ್‍ನಲ್ಲಿ ಮಾತನಾಡಿ ಲಕ್ಷ ಲಕ್ಷ ರೂ. ವಂಚಿಸಿದ್ದ ನಕಲಿ ಮ್ಯಾನೇಜರ್ ಅರೆಸ್ಟ್
ಬೆಂಗಳೂರು,ಜ.4-ಇಂಗ್ಲಿಷ್‍ನಲ್ಲಿ ಮಾತ ನಾಡಿ ವಿವಿಧ ಬ್ಯಾಂಕ್ ಗ್ರಾಹಕರಿಗೆ ವಂಚಿ ಸಿದ್ದ ನಕಲಿ ಮ್ಯಾನೇಜರ್‍ನನ್ನು ಬೆಂಗಳೂರು ಪೆÇಲೀಸರು ಬಂಧಿಸಿದ್ದಾರೆ. ಶಿವಪ್ರಸಾದ್ ಮಾಗಡಿ(30) ಬಂಧಿತ ನಕಲಿ ಮ್ಯಾನೇ ಜರ್. ಆರೋಪಿ ಶಿವಪ್ರಸಾದ್ ವಿವಿಧ ಬ್ಯಾಂಕ್ ಗ್ರಾಹಕರಿಗೆ ಫೆÇೀನ್ ಮಾಡಿ, ನಾನು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಳ್ಳುತ್ತಿದ್ದ. ಬಳಿಕ ಗ್ರಾಹಕರಿಗೆ ಅನುಮಾನ ಬರದಂತೆ, ನಿಮ್ಮ ಅಕೌಂಟ್‍ನಲ್ಲಿ ಸ್ವಲ್ಪ ಟೆಕ್ನಿಕಲ್ ಸಮಸ್ಯೆ ಆಗಿದೆ. ಹೀಗಾಗಿ ಅಕೌಂಟ್ ಮಾಹಿತಿ ನೀಡಿ ಎಂದು ಇಂಗ್ಲಿಷ್‍ನಲ್ಲಿ ಕೇಳುತ್ತಿದ್ದ. ಆರೋ ಪಿಯ ಮಾತನ್ನು ನಂಬಿದ ಗ್ರಾಹಕರು ಬ್ಯಾಂಕ್ ಮಾಹಿತಿ ನೀಡುತ್ತಿದ್ದರು. ಅಷ್ಟೇ ಅಲ್ಲದೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮಾಹಿತಿ ಜೊತೆಗೆ ಓಟಿಪಿ ಪಡೆದು ಲಕ್ಷಾಂತರ ರೂ. ವಂಚಿಸುತ್ತಿದ್ದ. ಇದೇ ರೀತಿ ವಕೀಲ ರವಿ ಎಂಬುವರಿಗೆ ಕಾಲ್ ಮಾಡಿದ್ದ ಶಿವಪ್ರಸಾದ್, ಸುಳ್ಳು ಹೇಳಿ ಮಾಹಿತಿ ಪಡೆದು ಬರೋಬ್ಬರಿ 97 ಲಕ್ಷ ರೂ. ಹಣ ಡ್ರಾ ಮಾಡಿ ತಲೆಮರೆಸಿ ಕೊಂಡಿದ್ದ. ಹಣ ಕಳೆದುಕೊಂಡಿದ್ದ ರವಿ ಆರೋಪಿ ಶಿವಪ್ರಸಾದ್ ವಿರುದ್ಧ ಹಲ ಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಪೆÇಲೀಸರು ಶಿವ ಪ್ರಸಾದ್‍ನನ್ನು ಬಂಧಿಸಿದ್ದಾರೆ. ಪೆÇಲೀಸರ ವಿಚಾರಣೆ ವೇಳೆ ಶಿವಪ್ರಸಾದ್ ಹತ್ತಕ್ಕೂ ಹೆಚ್ಚು ಜನರಿಗೆ ಇದೇ ರೀತಿ ಲಕ್ಷಾಂತರ ರೂ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

 

Translate »