ಮದರ್ ತೆರೇಸಾ, ಸಾವಿತ್ರಿ ಬಾಯಿ ಫುಲೆಯಂತಹ ಸಾಧಕಿಯರು ಮಹಿಳೆಯರಿಗೆ ಮಾದರಿ
ಮೈಸೂರು

ಮದರ್ ತೆರೇಸಾ, ಸಾವಿತ್ರಿ ಬಾಯಿ ಫುಲೆಯಂತಹ ಸಾಧಕಿಯರು ಮಹಿಳೆಯರಿಗೆ ಮಾದರಿ

January 5, 2020

ಮೈಸೂರು, ಜ.4(ಎಂಟಿವೈ)- ಸಾವಿತ್ರಿ ಬಾಯಿ ಫುಲೆ, ಮದರ್ ತೆರೇಸಾರಂತಹ ಆದರ್ಶ ಮಹಿಳೆಯರ ಸಾಧನೆ ಯನ್ನು ಮಾದರಿಯಾಗಿ ಸ್ವೀಕರಿಸಿ ಸಾಧನೆ ಮಾಡುವತ್ತ ಮಹಿಳೆಯರು ಗಮನಹರಿಸಬೇಕು ಎಂದು ಮಾಜಿ ಶಾಸಕ ವಾಸು ಸಲಹೆ ನೀಡಿದ್ದಾರೆ.

ಮೈಸೂರು ದೇವರಾಜ ಮೊಹಲ್ಲಾದಲ್ಲಿರುವ ಮಹಿಳಾ ಸದನ ಶಾಲೆಯಲ್ಲಿ ಶನಿವಾರ ಮೈಸೂರು ರಕ್ಷಣಾ ವೇದಿಕೆ ಯುವ ಘಟಕ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಜಯಂ ತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 18ನೇ ಶತಮಾನದಲ್ಲಿಯೇ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ ಸುವ ಕ್ರಾಂತಿ ಮಾಡಿದ ಸಾವಿತ್ರಿ ಬಾಯಿ ಫುಲೆ ಅವರ ಸೇವೆ, ಸಾಧನೆ ಸ್ಮರಣೀಯ. ಹೆಣ್ಣೊಂದು ಕಲಿತರೆ ಶಾಲೆ ಯೊಂದು ತೆರೆದಂತೆ ಎಂಬ ನಾಣ್ಣುಡಿಯನ್ನು ಸಾವಿತ್ರಿ ಬಾಯಿ ಫುಲೆ ಅವರಿಗೆ ಸಮರ್ಪಿಸಬೇಕು. ಪುರುಷರ ಪ್ರಾಧಾ ನ್ಯತೆ ಇದ್ದ ಆ ಕಾಲದಲ್ಲೇ ಕಟ್ಟುಪಾಡುಗಳಿಗೆ ನೀರೆರೆದು ಹೆಣ್ಣು ಮಕ್ಕಳಿಗಾಗಿ ಶಾಲೆ ಆರಂಭಿಸಿದರು. ಸಂಪ್ರದಾಯ ವಾದಿಗಳ ವಿರೋಧದ ನಡುವೆ ಸ್ತ್ರೀಯರ ವಿಮೋಚನೆ ಗಾಗಿ ಶ್ರಮಿಸಿದ್ದ ಮಹಾಮಾತೆ ಸಾವಿತ್ರಿಬಾಯಿ ಫುಲೆ ಅವರ ಹೋರಾಟದ ಫಲವಾಗಿ ನಾವಿಂದು ವಿದ್ಯೆ ಕಲಿಯುತ್ತಿ ದ್ದೇವೆ. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳ ವಡಿಸಿಕೊಳ್ಳಬೇಕು. ಕಷ್ಟ ಪಟ್ಟು ವಿದ್ಯಾವಂತರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದರು.

ನಟರಾಜ ಜೋಯಿಸ್ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಅವರ ಸಾಧನೆ ಕುರಿತು ಪುಸ್ತಕಗಳಿವೆ, ಜಾತಿ ಆಧಾರ ದಲ್ಲಿ ಜಯಂತಿ ಆಚರಿಸುವ ಸರ್ಕಾರ ಸಾವಿತ್ರಿ ಬಾಯಿ ಯವರ ಜಯಂತಿ ಆಚರಿಸಿ ಹೆಣ್ಣು ಮಕ್ಕಳಿಗೆ ಪೆÇ್ರೀತ್ಸಾ ಹಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವೇಷ ಭೂಷಣ ಸ್ಪರ್ಧೆಯಲ್ಲಿ ಶಾಲೆಯ ಹಲವು ವಿದ್ಯಾರ್ಥಿಗಳು ವಿವಿಧ ವೇಷಧರಿಸಿ ಗಮನ ಸೆಳೆದರು. ಈ ಸಂದರ್ಭ ದಲ್ಲಿ ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಯುವ ಘಟಕದ ಅಧ್ಯಕ್ಷ ಗುರುರಾಜ್ ಶೆಟ್ಟಿ, ಮುಖಂಡರಾದ ಪ್ರಮೋದ್ ಗೌಡ, ವಿಕ್ರಮ್ ಅಯ್ಯಂಗಾರ್, ಎಸ್.ಎನ್.ರಾಜೇಶ್, ಸಂಜಯ್, ಸಂತೋಷ್, ನಿತಿನ್, ಉಮೇಶ್, ಶಿಕ್ಷಕರಾದ ಗೀತಾ, ರಾಜಲಕ್ಷ್ಮಿ,ಸರಸ್ವತಿ, ಗಾಯಿತ್ರಿ ಸೇರಿದಂತೆ ವಿದ್ಯಾರ್ಥಿಗಳ ಪೆÇೀಷಕರು ಪಾಲ್ಗೊಂಡಿದ್ದರು.

Translate »