ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ದೀಪ ಧ್ಯಾನ ದಾನ ಕಾರ್ಯಕ್ರಮ
ಚಾಮರಾಜನಗರ

ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ದೀಪ ಧ್ಯಾನ ದಾನ ಕಾರ್ಯಕ್ರಮ

January 6, 2020

ಚಾಮರಾಜನಗರ, ಜ.5- ಸ್ಥಳೀಯ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ದಿವ್ಯ ಅಲೌಕಿಕ ದಿನದರ್ಶಿಕೆ ಬಿಡುಗಡೆ ಹಾಗೂ ದೀಪ ಧ್ಯಾನ ದಾನ ಕಾರ್ಯ ಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದ ರಾಜಯೋಗ ವಿದ್ಯಾರ್ಥಿ ಗಳು ದೀಪ ಹಚ್ಚಿಕೊಂಡು ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇ ಶ್ವರೀಜಿಯವರ ನೇತೃತ್ವದಲ್ಲಿ ತ್ರಾಟಕ ಯೋಗ ಧ್ಯಾನ ಮಾಡಿದರು. ಪರಸ್ಪರ ದಲ್ಲಿ ಒಬ್ಬರಿಗೊ ಬ್ಬರು ದೀಪವನ್ನು ಕೊಡುವ ಮತ್ತು ತೆಗೆದುಕೊಳ್ಳುವ ಮೂಲಕ ಅವರಲ್ಲಿರುವ ಪ್ರತಿಭೆ ಹಾಗೂ ವಿಶೇಷತೆ ಗುಣಗಳನ್ನು ನೋಡುವ ಅಭ್ಯಾಸ ಮಾಡಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್.ಬಿ.ಕೆ.ದಾನೇಶ್ವರೀಜಿ, ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು, ಹೊಸ ವರ್ಷದಲ್ಲಿ ಸಂಬಂಧಗ ಳನ್ನು ಸುಂದರ ಹಾಗೂ ಗಟ್ಟಿ ಮಾಡಿಕೊಳ್ಳ ಬೇಕಾಗಿದೆ. ನಾವು ಮಾಡುವ ಶ್ರೇಷ್ಠ ಕರ್ಮದ ಮೂಲಕ ಭಾಗ್ಯದ ರೇಖೆಯನ್ನು ಎಳೆದುಕೊಂಡು ಸಮಾಜ ಸೇವೆಯನ್ನು ಮಾಡಬೇಕು ಎಂದರು.

ಪ್ರತಿಯೊಬ್ಬರೂ ಆರೋಗ್ಯವಂತ ರಾಗಿರಲು ಇಷ್ಟ ಪಡುತ್ತಾರೆ. ಅದು ನಮ್ಮ ಮನೋಸ್ಥಿತಿಯಿಂದ ಕಾಪಾಡಿಕೊಳ್ಳಲು ಸಾಧ್ಯ. ನಮ್ಮ ಅದೃಷ್ಟವನ್ನು ನಾವೇ ಬೆಳಗಿಸಿಕೊಳ್ಳಬೇಕು. ಅದೃಷ್ಟದ ಲೇಖನಿ ನಮ್ಮ ಕೈಯಲ್ಲಿದೆ.2020ನ್ನು ಚಾಲೆಂ ಜಿಂಗ್ ಆಗಿ ಎದುರಿಸಬೇಕು ಎಂದರು.

ನಿವೃತ್ತ ಶಿಕ್ಷಕ ಪ್ರಭಾಕರ್ ಮಾತನಾಡಿ, ದಿನದರ್ಶಿಕೆಗಳು ಜೀವನ ವಿಧಾನವನ್ನು ಬದಲಿಸುವ ದಿಕ್ಸೂಚಿಯಾಗಿದೆ ಎಂದರು. ವಕೀಲರಾದ ಶಿವಲಿಂಗೇಗೌಡ ಮಾತನಾಡಿ, ರಾಜಯೋಗ ಶಿಕ್ಷಣವು ಮಾನಸಿಕ ಒತ್ತಡವನ್ನು ನಿಯಂತ್ರಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವೀಸ್‍ನ ಬಿ.ಕೆ. ಆರಾಧ್ಯ ಶ್ರೀನಿವಾಸ, ಸತೀಶ, ಭಾರತಿ, ಸುಧಾ, ಶಿವಕುಮಾರ್, ಪುಟ್ಟಶೇಖರ ಮೂರ್ತಿ ಮುಂತಾದವರು ಹಾಜರಿದ್ದರು

Translate »