ಮೈಸೂರು

ಮೈಸೂರು-ಮುಂಬೈ ಐಷಾರಾಮಿ ಡ್ರೀಮ್ ಕ್ಲಾಸ್ ಬಸ್ ಸಂಚಾರಕ್ಕೆ ಚಾಲನೆ
ಮೈಸೂರು

ಮೈಸೂರು-ಮುಂಬೈ ಐಷಾರಾಮಿ ಡ್ರೀಮ್ ಕ್ಲಾಸ್ ಬಸ್ ಸಂಚಾರಕ್ಕೆ ಚಾಲನೆ

June 11, 2019

ಮೈಸೂರು: ಮೈಸೂರು-ಮುಂಬೈ ನಡುವೆ ಐರಾವತ ಡ್ರೀಮ್ ಕ್ಲಾಸ್ ಬಸ್ ಸಂಚಾರಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕೆಎಸ್‍ಆರ್‍ಟಿಸಿ ಚೀಫ್ ಸೆಕ್ಯುರಿಟಿ ಅಂಡ್ ವಿಜಿಲೆನ್ಸ್ ಅಧಿಕಾರಿ (ಸಿಎಸ್‍ವಿಓ) ಲಿಂಗರಾಜು ಅವರು ಮೈಸೂರಿನ ಗ್ರಾಮಾಂತರ ಸಾರಿಗೆ 2ನೇ ಘಟಕದ ಆವರಣದಲ್ಲಿ ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಪ್ರಯಾಣಿಕರ ಸುಖಕರ ಹಾಗೂ ಆರಾಮದಾಯಕ ಪ್ರಯಾಣಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿರುವ 14.5 ಮೀಟರ್ ಉದ್ದದ ಈ ಬಸ್‍ನಲ್ಲಿ ಮೇಲ್ಗಡೆ ಮತ್ತು ಕೆಳಗಡೆ ಬರ್ತ್‍ಗಳು ಸೇರಿ ಒಟ್ಟು 40 ವಿಶೇಷ ಆಸನಗಳಿವೆ. ಆಸನದಲ್ಲಿಯೇ…

ದಯಾ ಮರಣ ಕೋರಿ ರಾಷ್ಟ್ರಪತಿಗೆ ಮನವಿ
ಮೈಸೂರು

ದಯಾ ಮರಣ ಕೋರಿ ರಾಷ್ಟ್ರಪತಿಗೆ ಮನವಿ

June 11, 2019

ಮೈಸೂರು: ಮೈಸೂರಿನ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ ಶಾಖೆಯ ಅಧಿಕಾರಿ, ಸಿಬ್ಬಂದಿ ಕಿರುಕುಳದಿಂದ ಬೇಸತ್ತಿರುವ ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದ ಹೆಚ್.ಶೇಖರ್ ಮತ್ತು ಅವರ ಕುಟುಂಬ ದಯಾಮರಣ ಕ್ಕಾಗಿ ಅನುಮತಿ ಕೋರಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ. ರಾಷ್ಟ್ರಪತಿಗಳಿಗೆ ಈ ಸಂಬಂಧ ಬರೆದ ಮನವಿಯನ್ನು ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು. ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಮನುಗನಹಳ್ಳಿಯ ಹೆಚ್. ಶೇಖರ್ ತಮ್ಮ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಮೈಸೂರಿನ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಷನ್ ಮೈಸೂರು ಶಾಖೆಯಲ್ಲಿ…

ರಸ್ತೆ ಅಭಿವೃದ್ಧಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ
ಮೈಸೂರು

ರಸ್ತೆ ಅಭಿವೃದ್ಧಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

June 11, 2019

ಮೈಸೂರು: ಮೈಸೂರಿನ ತಿಲಕ ನಗರದ ವಾರ್ಡ್ 25ರ ವ್ಯಾಪ್ತಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. ಇಲ್ಲಿನ ಸಾಡೇ ಮೆಮೋರಿಯಲ್ ಚರ್ಚ್ (ಸಿಎಸ್‍ಐ ಚರ್ಚ್) ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುವೆ ಹಾದು ಹೋಗಿರುವ ರಸ್ತೆ (ಪುಲಕೇಶಿ ರಸ್ತೆಯ ಅಡ್ಡ ರಸ್ತೆ) ಅಭಿವೃದ್ಧಿ ಕಾಮ ಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ 30 ಲಕ್ಷ ರೂ….

`ಫನಿ’ ಚಂಡಮಾರುತ ಹಾನಿ ದುರಸ್ತಿ ಕಾರ್ಯದಲ್ಲಿ ಭಾಗವಹಿಸಿದ್ದ ಚೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ
ಮೈಸೂರು

`ಫನಿ’ ಚಂಡಮಾರುತ ಹಾನಿ ದುರಸ್ತಿ ಕಾರ್ಯದಲ್ಲಿ ಭಾಗವಹಿಸಿದ್ದ ಚೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

June 11, 2019

ಮೈಸೂರು: ಒರಿಸ್ಸಾ ರಾಜ್ಯ ದಲ್ಲಿ “ಫನಿ” ಚಂಡಮಾರುತದಿಂದ ವಿದ್ಯುತ್ ಜಾಲ ಹಾನಿಗೊಳಗಾಗಿದ್ದ ಕಾರಣ ದುರಸ್ಥಿ ಕಾರ್ಯಕ್ಕೆ ಚೆಸ್ಕಾಂನ ಎನ್.ಆರ್. ಮೊಹಲ್ಲಾ ವಿಭಾಗದ 15 ಸಿಬ್ಬಂದಿಯನ್ನೊ ಳಗೊಂಡ ತಂಡವನ್ನು ನಿಯೋಜಿಸಲಾಗಿತ್ತು. ನಿಯೋಜಿಸಲ್ಪಟ್ಟ ಸಿಬ್ಬಂದಿ ವರ್ಗದ ವರು ಒರಿಸ್ಸಾ ರಾಜ್ಯದಲ್ಲಿನ ಪೂರಿ ನಗ ರದ ಸುತ್ತಮುತ್ತಾ ಸ್ಥಳೀಯ ಅಧಿಕಾರಿಗಳ ಜೊತೆ ಕೈ ಜೋಡಿಸಿ ವಿದ್ಯುತ್ ಪುನರ್ ಪೂರೈಕೆ ವ್ಯವಸ್ಥೆ ಮಾಡುವಲ್ಲಿ ನೆರವಾ ಗಿದ್ದು, ಇವರನ್ನು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿ ಯರ್ ಹೆಚ್.ಎಸ್.ಸ್ವಾಮಿ ಅಧ್ಯಕ್ಷತೆಯಲ್ಲಿ ಜೂನ್ 3 ರಂದು ಗೌರವಿಸಲಾಯಿತು….

ಸಂಸ್ಕøತ ಕಲಿತವರು ನಿರುದ್ಯೋಗಿಗಳಲ್ಲ
ಮೈಸೂರು

ಸಂಸ್ಕøತ ಕಲಿತವರು ನಿರುದ್ಯೋಗಿಗಳಲ್ಲ

June 11, 2019

ಮೈಸೂರು: ಸಂಸ್ಕøತ ಕಲಿತವರು ಯಾರೂ ನಿರು ದ್ಯೋಗಿಗಳಲ್ಲ. ಅವರಿಗೆ ಉತ್ತಮ ಭವಿಷ್ಯ ವಿದೆ ಎಂದು ಕರ್ನಾಟಕ ಸಂಸ್ಕøತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಪದ್ಮಾ ಶೇಖರ್ ಅಭಿಪ್ರಾಯಪಟ್ಟರು. ಮೈಸೂರಿನ ಬಿಜಿಎಸ್ ವಿದ್ಯಾಪೀಠದ ಆದಿಚುಂಚನಗಿರಿ ಸಂಸ್ಕøತ ಪಾಠಶಾಲೆ ಯಲ್ಲಿ ಮೈಸೂರು ವಿಭಾಗ ಸಂಸ್ಕøತ ಪಾಠ ಶಾಲಾ ಶಿಕ್ಷಕರ ವತಿಯಿಂದ ಏರ್ಪಡಿಸಿದ್ದ `ಸಂಸ್ಕøತೋತ್ಸವ ಹಾಗೂ ಅಭಿನಂದನಾ’ ಕಾರ್ಯಕ್ರಮದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಂಸ್ಕøತ ಶಿಕ್ಷಕರೇ ಭಾಷೆಯನ್ನು ಬೆಳೆ ಸುವ ವಾರಸುದಾರರು. ಶಿಕ್ಷಕರು ಹೆಚ್ಚೆಚ್ಚು ಸಂಸ್ಕøತ ಸಂಭಾಷಣಾ…

ಮೈಸೂರು ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಿಂದ ನಜರ್‍ಬಾದ್ ಕನ್ನಡ ಶಾಲಾ ಕಟ್ಟಡ ಪರಿಶೀಲನೆ
ಮೈಸೂರು

ಮೈಸೂರು ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಿಂದ ನಜರ್‍ಬಾದ್ ಕನ್ನಡ ಶಾಲಾ ಕಟ್ಟಡ ಪರಿಶೀಲನೆ

June 11, 2019

ಮೈಸೂರು: ಶಿಥಿಲಾವಸ್ಥೆಯಲ್ಲಿರುವ ಮೈಸೂರಿನ ಮೃಗಾಲಯದ ಬಳಿ ಇರುವ ಸರ್ಕಾರಿ ಕನ್ನಡ ಶಾಲಾ ಕಟ್ಟಡವನ್ನು ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರು ಇಂದು ಪರಿಶೀಲಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಸೇರಿದ 10 ಗುಂಟೆ ಜಾಗದಲ್ಲಿ ಈ ಹಿಂದೆ ಸರ್ಕಾರಿ ಕನ್ನಡ ಶಾಲೆ ನಡೆಯು ತ್ತಿತ್ತು. ಕಳೆದ 20 ವರ್ಷಗಳಿಂದ ಶಾಲೆ ಮುಚ್ಚಿರುವ ಕಾರಣ ಈ ಕಟ್ಟಡ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯ ಕ್ಕೊಳಗಾಗಿ ಶಿಥಿಲಾವಸ್ಥೆ ತಲುಪಿದೆ. ಪಾರಂಪರಿಕ ಶೈಲಿಯಲ್ಲಿರುವ ಶಾಲಾ ಕಟ್ಟಡ ನೆಲಕ್ಕುರುಳುವ ಸ್ಥಿತಿ ಯಲ್ಲಿರುವುದರಿಂದ ಅದನ್ನು ಕೆಡವಿ ಆ ಸ್ಥಳದಲ್ಲಿ…

ಶುಶ್ರೂಷಕರಿಗೆ ಪರಿಣಿತಿ ಜೊತೆಗೆ ಮಾನವೀಯತೆ ಮುಖ್ಯ
ಮೈಸೂರು

ಶುಶ್ರೂಷಕರಿಗೆ ಪರಿಣಿತಿ ಜೊತೆಗೆ ಮಾನವೀಯತೆ ಮುಖ್ಯ

June 11, 2019

ಮೈಸೂರು: ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಯಲ್ಲಿ ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯನ್ನು ಆಚರಿಸಲಾಯಿತು. ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ, ಆರೋಗ್ಯ ಸೇವೆಯಲ್ಲಿ ಶುಶ್ರೂಷಕರ ಸೇವೆ ವೈದ್ಯರ ಸೇವೆಯಷ್ಟೇ ಅತಿಮುಖ್ಯ ಎಂದು ತಿಳಿಸಿ ಶುಶ್ರೂಷಕರಿಗೆ ಪರಿಣಿತಿ ಜೊತೆಗೆ ಮಾನ ವೀಯತೆ, ಅನುಕಂಪ ಇರಬೇಕೆಂದು ತಿಳಿಸಿದರು. ಶುಶ್ರೂಷಕಿಯರು ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದವರೆಲ್ಲರು ಈ ಎರಡು ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಕರೆಯಿತ್ತರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ವೈದ್ಯಕೀಯ ಕಾಲೇಜಿನ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ…

ಇಂದು ಚಾ.ನಗರದಲ್ಲಿ, ನಾಳೆ ನಂಜನಗೂಡಿನಲ್ಲಿ ಬಿಜೆಪಿ ಕೃತಜ್ಞತಾ ಸಮಾವೇಶ: ಕೋಟೆ ಎಂ.ಶಿವಣ್ಣ
ಮೈಸೂರು

ಇಂದು ಚಾ.ನಗರದಲ್ಲಿ, ನಾಳೆ ನಂಜನಗೂಡಿನಲ್ಲಿ ಬಿಜೆಪಿ ಕೃತಜ್ಞತಾ ಸಮಾವೇಶ: ಕೋಟೆ ಎಂ.ಶಿವಣ್ಣ

June 11, 2019

ಮೈಸೂರು: ಚಾಮರಾಜ ನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ಗೆಲು ವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರಿಗೆ, ಸ್ಥಳೀಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿ ನಲ್ಲಿ ಜೂ.11 ಮತ್ತು 12ರಂದು ಚಾಮರಾಜನಗರ ಹಾಗೂ ನಂಜನಗೂಡಿನಲ್ಲಿ ಸಮಾವೇಶ ಆಯೋ ಜಿಸಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಎಂ.ಶಿವಣ್ಣ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜ ನಗರ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ….

ಖದೀಮನ ಬಂಧನ: ಜಂಬೂ ಸವಾರಿಯಂದು ಕದ್ದ ಚಿನ್ನಾಭರಣ ವಶ
ಮೈಸೂರು

ಖದೀಮನ ಬಂಧನ: ಜಂಬೂ ಸವಾರಿಯಂದು ಕದ್ದ ಚಿನ್ನಾಭರಣ ವಶ

June 11, 2019

ಮೈಸೂರು: 2018ರ ಜಂಬೂ ಸವಾರಿ ದಿನ ಮನೆಯೊಂದ ರಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಓರ್ವ ಖದೀಮನನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು, ಈತನಿಂದ 90 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದ ಗೌರಿಶಂಕರ ಅಲಿಯಾಸ್ ಶಂಕರ(38) ಬಂಧಿತ ಆರೋಪಿ. ಜೂ.9ರಂದು ಅಶೋಕ ರಸ್ತೆಯ ಅರಳಿ ಮರದ ಬಳಿಯ ಗಿರಿವಿ ಅಂಗಡಿ ಬಳಿ 2 ಚಿನ್ನದ ಬಳೆಯನ್ನು ಮಾರಾಟ ಮಾಡಲು ಆರೋಪಿ ಯತ್ನಿಸುತ್ತಿದ್ದ. ಮಾಹಿತಿ ಆಧರಿಸಿ ಈತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ…

ಇರಾನಿ ಗ್ಯಾಂಗ್ ಸರಗಳ್ಳರಿಬ್ಬರ ಬಂಧನ
ಮೈಸೂರು

ಇರಾನಿ ಗ್ಯಾಂಗ್ ಸರಗಳ್ಳರಿಬ್ಬರ ಬಂಧನ

June 11, 2019

ಮೈಸೂರು: ಇಬ್ಬರು ಇರಾನಿ ಗ್ಯಾಂಗ್‍ನ ಇಬ್ಬರು ಸರಗಳ್ಳರನ್ನು ಬಂಧಿಸಿರುವ ನಜರ್‍ಬಾದ್ ಪೊಲೀಸರು, ಇವರಿಂದ 56 ಗ್ರಾಂ ತೂಕದ 2 ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಸೆಲ್ವಾಪುರಂ ಹಿಮಾನ್ಯುಯಲ್ ನಗರದ ನಿವಾಸಿಗಳಾದ ಮುಸ್ತಫಾ ಅಲಿಯಾಸ್ ಶಾಲು(19), ಅಬೂ ತಾಲೀಫ್(20) ಬಂಧಿತ ಸರಗಳ್ಳರು. ಜೂ.8 ರಂದು ನಜರ್‍ಬಾದ್ ಪೊಲೀಸರು ಖಾಸಗಿ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ಈ ಖದೀಮರಿಬ್ಬರು ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಬೈಕ್ ಕದಿಯಲು ಯತ್ನಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನು ಠಾಣೆ ಕರೆತಂದು ವಿಚಾರಣೆ ನಡೆಸಿದಾಗ ಮೇ…

1 947 948 949 950 951 1,611
Translate »