ಮೈಸೂರು: ಪೀಪಲ್ ಫಾರ್ ಅನಿಮಲ್ (ಪಿಎಫ್‍ಎ), ವಲ್ರ್ಡ್ ವೆಟ್ ಇಂಟರ್‍ನ್ಯಾಷನಲ್ ಸೊಸೈಟಿ (ಡಬ್ಲ್ಯೂ ವಿಎಸ್) ವತಿಯಿಂದ ಸೋಮವಾರ ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದ ಟಾಂಗಾ ಕುದುರೆಗಳ ಆರೋಗ್ಯ ತಪಾಸಣಾ ಶಿಬಿರದ ವೇಳೆ ಬಹುತೇಕ ಕುದುರೆಗಳ ಆರೋಗ್ಯದಲ್ಲಿ ಏರುಪೇರು ಇರುವುದು ಹೆಚ್ಚಾಗಿ ಕಂಡು ಬಂದಿತು. ಶಿಬಿರದಲ್ಲಿ ಪೀಪಲ್ ಫಾರ್ ಅನಿಮಲ್ ಮತ್ತು ವಲ್ರ್ಡ್ ವೆಟ್ ಇಂಟರ್‍ನ್ಯಾಷನಲ್‍ನ ನುರಿತ ಪಶು ವೈದ್ಯರು 35ಕ್ಕೂ ಹೆಚ್ಚು ಕುದುರೆಗಳ ಆರೋಗ್ಯ ಪರೀಕ್ಷಿಸಿದರು. ಈ ವೇಳೆ ಕೆಲವು ಕುದುರೆಗಳು ಗಾಯಗೊಂಡಿದ್ದು,…
ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ 12 ಸಾವಿರ ಸಹಾಯ ಧನಕ್ಕೆ ಆಗ್ರಹ
June 12, 2019ಮೈಸೂರು:ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡುವ ವಾರ್ಷಿಕ 6 ಸಾವಿರ ರೂ. ಸಹಾಯಧನ ವನ್ನು 12 ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಯೋಜನ ಯಾವುದೇ ಆದಾಯ ಮಿತಿ ಇಲ್ಲದೆ ಎಲ್ಲಾ ರೈತರಿಗೂ ದೊರೆಯುವಂತೆ ಆಗಬೇಕು ಎಂದರು. ಕೇಂದ್ರ ಸರ್ಕಾರ…
ಹೂಟಗಳ್ಳಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
June 12, 2019ಮೈಸೂರು: ಗುಂಪೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಹೂಟಗಳ್ಳಿ ನಿವಾಸಿ ಶಿವು ತೀವ್ರವಾಗಿ ಗಾಯಗೊಂಡಿರುವ ಯುವಕ ನಾಗಿದ್ದು, ಆತನನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಮವಾರ ರಾತ್ರಿ ಹೂಟಗಳ್ಳಿಯ ಹೌಸಿಂಗ್ ಬೋರ್ಡ್ ಬಳಿ ಸರ್ಕಲ್‍ನಲ್ಲಿ ಕುಳಿತಿದ್ದಾಗ ಏಕಾಏಕಿ ನಾಲ್ವರು ಯುವಕರ ಗುಂಪು ದಾಳಿ ನಡೆಸಿ ಮಚ್ಚು, ಡ್ರ್ಯಾಗನ್‍ನಿಂದ ಹಲ್ಲೆ ನಡೆಸಿ ಪರಾರಿಯಾಯಿತು ಎಂದು ಶಿವು ಪೊಲೀಸರಿಗೆ ತಿಳಿಸಿದ್ದಾನೆ. ಘಟನೆಯಲ್ಲಿ ಶಿವು ಕೊರಳಲ್ಲಿದ್ದ 23…
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
June 12, 2019ಮೈಸೂರು: ವಿಷ ಸೇವಿಸಿ ವ್ಯಕ್ತಿಯೊರ್ವ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ಟೌನ್ ನಿವಾಸಿ ವಿಶ್ವನಾಥ(50) ಎಂಬುವವರೇ ಆತ್ಮಹತ್ಯೆ ಮಾಡಿ ಕೊಂಡವರಾಗಿದ್ದು, ಇಂದು ಬೆಳಿಗ್ಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕೆ.ಆರ್. ಠಾಣೆ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸಾಗಿಸಿ ಸಂಬಂಧಿಕರಿಗೆ ಮಾಹಿತಿ ನೀಡಿ ಕರೆಸಿಕೊಂಡು ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿದರು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವಿವಾದದಿಂದ ಬೇಸತ್ತು ವಿಶ್ವನಾಥ ವಿಷ…
ತಾಯಿ, ಮಕ್ಕಳು ನಾಪತ್ತೆ
June 12, 2019ಮೈಸೂರು: ನಂಜನಗೂಡಿಗೆ ಹೋಗುವುದಾಗಿ ಹೇಳಿ ಹೋದ ತಾಯಿ ಮಕ್ಕಳಿಬ್ಬರು ನಾಪತ್ತೆ ಯಾಗಿರುವ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖ ಲಾಗಿದೆ. ನಂಜನಗೂಡಿನ ತೋಪಿನ ಬೀದಿ ನಿವಾಸಿ ಗಳಾದ ಜ್ಯೋತಿ(31), ಶಶಾಂಕ್(9), ಕಿರ್ತನಾ(6) ನಾಪತ್ತೆಯಾದವರು. ಜ್ಯೋತಿಯವರು ನಂಜನಗೂಡಿನ ಮಹದೇವಸ್ವಾಮಿ ಎಂಬುವವರೊಂದಿಗೆ ವಿವಾಹವಾಗಿದ್ದು, ಇವರಿಗೆ ಶಶಾಂಕ್ ಮತ್ತು ಕೀರ್ತನಾ ಎಂಬ ಮಕ್ಕಳಿದ್ದರು. ಇಬ್ಬರೂ ಮೈಸೂರು ಕುವೆಂಪುನಗರದಲ್ಲಿನ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಜ್ಯೋತಿ ಕಾನ್ವೆಂಟ್‍ನಲ್ಲಿ ಓದುತ್ತಿದ್ದರು. ಆದರೆ, ಜೂ.8 ರಂದು ಜ್ಯೋತಿ ಮಕ್ಕಳಿಬ್ಬರನ್ನು ಕರೆದುಕೊಂಡು ನಂಜನಗೂಡಿನಲ್ಲಿಯೇ ಶಾಲೆಗೆ ಸೇರಿಸುವು ದಾಗಿ ಹೇಳಿ…
ಜಲಸಂವರ್ಧನೆ ಪರಿಣಾಮಕಾರಿ ಅನುಷ್ಠಾನ
June 12, 2019ಸ್ವಚ್ಛಮೇವ ಜಯತೆ, ಜಲಾಮೃತ ಯೋಜನೆಗಳಿಗೆ ಜಿಪಂ ಅಧ್ಯಕ್ಷೆ, ಡಿಸಿ, ಸಿಇಓರಿಂದ ಕೃಷಿ ಮಹಾವಿದ್ಯಾಲಯದಲ್ಲಿ ಚಾಲನೆ ಹಾಸನ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ `ಸ್ವಚ್ಛ ಮೇವ ಜಯತೆ’ ಮತ್ತು `ಜಲಾಮೃತ’ ಅನು ಷ್ಠಾನಕ್ಕೆ ತಾಲೂಕಿನ ಶಾಂತಿ ಗ್ರಾಮ ಬಳಿಯ ಮಡೆನೂರಿನ ಕೃಷಿ ಮಹಾ ವಿದ್ಯಾಲಯ ದಲ್ಲಿ ಮಂಗಳವಾರ ಚಾಲನೆ ದೊರೆಯಿತು. ಕೃಷಿ ಮಹಾವಿದ್ಯಾಲಯದ ಸಂಶೋ ಧನಾ ಕೇಂದ್ರದ ಆವರಣದಲ್ಲಿ ಮಂಗಳ ವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್, ಜಿಲ್ಲಾಧಿ ಕಾರಿ ಅಕ್ರಂ…
ಗಿರೀಶ್ ಕಾರ್ನಾಡ್ ಇನ್ನಿಲ್ಲ
June 11, 2019ಬೆಂಗಳೂರು: ಖ್ಯಾತ ಸಾಹಿತಿ, ರಂಗಭೂಮಿ, ಸಿನಿಮಾ ನಟರೂ ಆಗಿದ್ದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ (81) ಸೋಮವಾರ ಬೆಳಿಗ್ಗೆ ಅಸುನೀಗಿದ್ದಾರೆ. ಎಲ್ಲಾ ಸೀಮೆಗಳನ್ನು ಮೀರಿದ್ದ ಮಹಾನ್ ಪ್ರತಿಭೆ ಗಿರೀಶ್ ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದ ನಟರಾಗಿ ಹೆಸರಾಗಿದ್ದವರು. ಗಿರೀಶ್ ಕಾರ್ನಾಡರ ನಿಧನದ ಹಿನ್ನೆಲೆ ಯಲ್ಲಿ ಇಂದು ರಾಜ್ಯ ಸರ್ಕಾರ ರಜೆ ಘೋಷಿಸ ಲಾಗಿತ್ತು. ಮೂರು ದಿನ ಸರ್ಕಾರಿ ಶೋಕಾ ಚರಣೆ ಘೋಷಿಸಿದೆ. ಕಾರ್ನಾಡರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು…
ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಯುವರಾಜ್‍ಸಿಂಗ್ ವಿದಾಯ
June 11, 2019ಮುಂಬೈ: ಭಾರತೀಯ ಕ್ರಿಕೆಟ್‍ನ `ಸಿಕ್ಸರ್ ಕಿಂಗ್’ ಎಂದೇ ಹೆಸರಾಗಿದ್ದ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಸೋಮವಾರ ವಿದಾಯ ಹೇಳಿದ್ದಾರೆ. ಭಾರತ ತಂಡದಲ್ಲಿ ಖಾಯಂ ಸದಸ್ಯ ನಾಗಿ, ಮ್ಯಾಚ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದ 37 ವರ್ಷದ ಎಡಗೈ ಆಟಗಾರ ಯುವರಾಜ್ ಸಿಂಗ್‍ಗೆ ಯುವಿಯೇ ಸಾಟಿ. 2000ರಲ್ಲಿ ಕೀನ್ಯಾ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ಸುಮಾರು 19 ವರ್ಷಗಳಲ್ಲಿ (2000-2019) ದೇಶ-ವಿದೇಶಗಳಲ್ಲಿ ಭಾರತ ತಂಡವನ್ನು…
ಬೆಂಗಳೂರಲ್ಲಿ ಮತ್ತೊಂದು ಸಾವಿರಾರು ಕೋಟಿ ವಂಚನೆ ಪ್ರಕರಣ
June 11, 2019ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಸಾವಿರಾರು ಕೋಟಿ ವಂಚನೆ ಪ್ರಕರಣ ಬಯಲಾಗಿದ್ದು, ಗ್ರಾಹಕ ರಿಂದ ಕೋಟ್ಯಾಂತರ ರೂ. ಠೇವಣಿ ಸಂಗ್ರಹಿಸಿದ್ದ ಶಿವಾಜಿನಗರದ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮನ್ಸೂರ್ ಅಲಿಖಾನ್, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೊಲೀಸ್ ಆಯುಕ್ತರಿಗೆ ಆಡಿಯೋ ರವಾನಿಸಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಮನ್ಸೂರ್ ಅಲಿಖಾನ್‍ನ ಆಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಬಳಿ ಹೂಡಿಕೆ ಮಾಡಿದ್ದ ಸಾವಿರಾರು ಗ್ರಾಹಕರು ಐಎಂಎ ಜ್ಯುವೆಲ್ಲರ್ಸ್ ಮುಂದೆ ಜಮಾಯಿಸಿ ಪ್ರತಿಭಟನೆಗಿಳಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ವಂಚನೆ ಗೊಳಗಾಗಿರುವ…
`ಕಿಶೋರ 7 ಪಾಸ್ 8’ ಚಿತ್ರತಂಡದಿಂದ ಗಿರೀಶ್ ಕಾರ್ನಾಡ್‍ಗೆ ನಮನ
June 11, 2019ಮೈಸೂರು: ರಂಗಕರ್ಮಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನದ ಹಿನ್ನೆಲೆಯಲ್ಲಿ `ಕಿಶೋರ 7 ಪಾಸ್ 8’ ಚಿತ್ರತಂಡ ಚಿತ್ರೀಕರಣ ವನ್ನು ಸ್ಥಗಿತಗೊಳಿಸಿ, ಸಂತಾಪ ವ್ಯಕ್ತಪಡಿಸಿತು. ಮೈಸೂರಿನ ಕುವೆಂಪುನಗರದ ಪ್ರಮತಿ ಶಿಕ್ಷಣ ಸಂಸ್ಥೆಯ ಹಿಂಭಾಗ ಸೋಮವಾರ ಚಿತ್ರೀಕರಣ ನಡೆಯುತ್ತಿತ್ತು. ಗಿರೀಶ್ ಕಾರ್ನಾಡ್ ಅವರ ನಿಧನದ ಸುದ್ದಿ ತಿಳಿ ಯುತ್ತಿದ್ದಂತೆ ಚಿತ್ರೀಕರಣ ಸ್ಥಗಿತಗೊಳಿಸ ಲಾಯಿತು. ಅಲ್ಲದೆ ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರತಂಡದ ಸದಸ್ಯರು ಕಾರ್ನಾಡರ ಭಾವಚಿತ್ರವಿಡಿದು ಕೆಲ ಕಾಲ ಮೌನ ಆಚರಿಸಿ, ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ…










