ಮೈಸೂರು: ಶ್ರೀರಾಂಪುರ ಬಡಾವಣೆಯಲ್ಲಿ ಹಾದು ಹೋಗಿರುವ ದೊಡ್ಡ ಮೋರಿಯಿಂದ ಮಳೆಯ ನೀರು ಮಾನಂದವಾಡಿ ಸೇತುವೆ ಬಳಿ ಸರಾಗವಾಗಿ ಹೋಗದೆ ವಾಪಸಾಗುವ ಹಿನ್ನೆಲೆಯಲ್ಲಿ ಬಡಾವಣೆಯ ಜನ ಮೋಡ ಕಂಡರೆ ಆತಂಕ್ಕೀಡಾಗಿರುವ ಬಗ್ಗೆ ಜೂ.12ರ `ಮೈಸೂರು ಮಿತ್ರ’ನ ವರದಿ ಹಿನ್ನೆಲೆಯಲ್ಲಿ ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್ ಅವರು ಸಮಸ್ಯೆಯನ್ನು ಬೇಗ ಪರಿಹರಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆ ಯಲ್ಲಿ ಮೈಸೂರು ನಗರಪಾಲಿಕೆ ಅಧಿಕಾರಿ ಗಳು ಮತ್ತು ಪಾಲಿಕೆ ಸದಸ್ಯರನ್ನು ಒಳಗೊಂಡ ತಂಡ ಬುಧವಾರ ಸ್ಥಳ ಪರಿಶೀಲನೆ ನಡೆಸಿತು. ಮಳೆ ಬಂದರೆ ದೊಡ್ಡ…
ಪ್ರತಾಪ್ ಸಿಂಹರಿಂದ ವಾಕ್, ಶ್ರವಣ ಸಂಸ್ಥೆ ಕಟ್ಟಡ ಕಾಮಗಾರಿ ಪರಿಶೀಲನೆ
June 13, 2019ಮೈಸೂರು: ಮೈಸೂರಿನ ಮಾನಸಗಂಗೋತ್ರಿ ಆವರಣದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ನಡೆಯುತ್ತಿರುವ ಕಟ್ಟಡಗಳ ಕಾಮಗಾರಿಯನ್ನು ಸಂಸದ ಪ್ರತಾಪ್ ಸಿಂಹ ಅವರು ಇಂದು ವೀಕ್ಷಿಸಿದರು. ಆಯಿಷ್ ಆವರಣದಲ್ಲಿ 137 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೆಂಟರ್ ಆಫ್ ಎಕ್ಸಲೆನ್ಸಿ, ಮನುಷ್ಯನ ಮುಖದ ಆಕಾರದ ವಿಶೇಷ ವಿನ್ಯಾಸದಲ್ಲಿ ನಿರ್ಮಾಣವಾಗುತ್ತಿರುವ ಆಕರ್ಷಕ ವಸ್ತು ಸಂಗ್ರಹಾಲಯದ ಕಟ್ಟಡ (6.85 ಕೋಟಿ ರೂ.), 11 ಹೊಸ ವಿದ್ಯಾರ್ಥಿನಿಲಯ ಕಟ್ಟಡಗಳು ಹಾಗೂ ಆರ್‍ಓ ಪ್ಲಾಂಟ್ ನಿರ್ಮಾಣ ಕಾಮಗಾರಿಯನ್ನು ಸಂಸದರು ಪರಿಶೀಲಿಸಿದರು. ಈ ವೇಳೆ…
ಆಧಾರ್ ಕಾರ್ಡ್‍ಗೆ ನೂಕುನುಗ್ಗಲು: ಕರ್ನಾಟಕ ಒನ್ ಸೆಂಟರ್‍ನಲ್ಲಿ ಏಕಮಾತ್ರ ಸಿಬ್ಬಂದಿ, ಸಾರ್ವಜನಿಕರ ಆಕ್ರೋಶ
June 13, 2019ಮೈಸೂರು: ಬೆಳಿಗ್ಗೆ ನಾಲ್ಕೈದು ಗಂಟೆಗೆ ಬಂದು ನಿಂತರೂ ಆಧಾರ್ ಕಾರ್ಡ್ ಮಾಡಿಸಲು ಟೋಕನ್ ಸಿಗುತ್ತಿಲ್ಲ. ದಿನನಿತ್ಯ ಇದೇ ಕೆಲಸವಾದರೆ, ನಮ್ಮ ಹೊಟ್ಟೆ ಪಾಡಿನ ಗತಿಯೇನು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಅತ್ತ ಆಧಾರ್ ಕೌಂಟರ್‍ನಲ್ಲಿರುವ ಒಬ್ಬರೇ ಸಿಬ್ಬಂದಿ ಸಾರ್ವಜನಿಕರು ಹಾಕುತ್ತಿರುವ ಹಿಡಿ ಶಾಪಕ್ಕೆ ದಿಕ್ಕು ತೋಚದಂತಾಗುತ್ತಿದ್ದಾರೆ. ಇದು ಮೈಸೂರಿನ ಶೇಷಾದ್ರಿ ಐಯ್ಯರ್ ರಸ್ತೆಯಲ್ಲಿರುವ ಕರ್ನಾಟಕ ಓನ್ ಕೇಂದ್ರದ ಚಿತ್ರಣವಾಗಿದ್ದು, ಟೋಕನ್‍ಗಾಗಿ ಅಲೆದಾಡಿ ತಾಳ್ಮೆ ಕಳೆದುಕೊಂಡಿದ್ದ ಸಾರ್ವಜನಿಕರು ಬುಧವಾರ ಈ ಕೇಂದ್ರದ ಎದುರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ…
ವಸ್ತು ಪ್ರದರ್ಶನ ಮೈದಾನ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್
June 13, 2019ಮೈಸೂರು: ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರಿನ ದಸರಾ ವಸ್ತು ಪ್ರದ ರ್ಶನ ಮೈದಾನದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್ (ಅಬ್ದುಲ್ಲಾ) ಬುಧವಾರ ಪರಿಶೀಲನೆ ನಡೆಸಿದರು. ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ಹೊಂದಿಕೊಂಡಿರುವ ದೊಡ್ಡ ಮೋರಿಯ ಹೂಳು ತೆಗೆಸುವುದು, ಬೆಳೆದು ನಿಂತಿರುವ ಗಿಡ-ಗಂಟಿಗಳನ್ನು ತೆರವುಗೊಳಿಸಿ ಮಳಿಗೆ ಗಳ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸು ವುದು ಸೇರಿದಂತೆ ದಸರಾ ವಸ್ತು ಪ್ರದ ರ್ಶನ ಆಯೋಜನೆ ಹಿನ್ನೆಲೆಯಲ್ಲಿ ಆಗ ಬೇಕಿರುವ ಕೆಲಸ-ಕಾರ್ಯಗಳ ಸಂಬಂಧ ಪರಿಶೀಲನೆ…
ಸ್ಕೂಟರ್‍ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆಡಿ ಕಾರನ್ನು 34 ಗಂಟೆಯೊಳಗೆ ಬೆಂಗಳೂರಿನಲ್ಲಿ ಪತ್ತೆ ಮಾಡಿದ ಮೈಸೂರು ಸಂಚಾರಿ ಪೊಲೀಸರು
June 13, 2019ಮೈಸೂರು: ಸ್ಕೂಟರ್‍ಗೆ ಡಿಕ್ಕಿ ಹೊಡೆದು, ವೃದ್ಧ ರೊಬ್ಬರ ಬಲಿ ಪಡೆದು ಪರಾರಿಯಾಗಿದ್ದ ಕಾರು ಮತ್ತು ಚಾಲಕನನ್ನು ದುರಂತ ನಡೆದ 34 ಗಂಟೆಯೊಳಗಾಗಿ ಮೈಸೂರಿನ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀ ಸರು ಬೆಂಗಳೂರಲ್ಲಿ ಪತ್ತೆ ಮಾಡಿದ್ದಾರೆ. ಚಾಲಕ ನಾಸಿರ್ ಮತ್ತು ಆಡಿ ಕಾರನ್ನು (ಕೆಎ03-ಎಂಎಕ್ಸ್9699) ಮಂಗಳವಾರ ರಾತ್ರಿ ಬೆಂಗಳೂರಿನ ಜಯನಗರದ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆ ಮಾಡಿರುವ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿ, ವಾಹನದೊಂದಿಗೆ ಇಂದು ಬೆಳಿಗ್ಗೆ ಮೈಸೂರಿಗೆ ಕರೆತಂದಿದ್ದಾರೆ. ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲ ಕೃಷ್ಣ ನಿರ್ದೇಶನದಂತೆ…
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬದಲಾವಣೆಗೆ ಕಾಂಗ್ರೆಸ್ ವರಿಷ್ಠರ ಚಿಂತನೆ
June 12, 2019ಬೆಂಗಳೂರು: ರಾಜ್ಯದ ಆಡಳಿತಾರೂಢ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಮೌನಕ್ಕೆ ಶರಣಾಗಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಕಳೆದ ಭಾನುವಾರ ರಾತ್ರಿ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ…
ಬೆಂಗಳೂರು-ಮೈಸೂರು ವಿಶ್ವದರ್ಜೆ ಹೆದ್ದಾರಿ ಅವಧಿಗೂ ಮುನ್ನವೇ ಸಂಚಾರಕ್ಕೆ ಮುಕ್ತ
June 12, 2019ಪ್ರಗತಿ ಪರಿಶೀಲನೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ವಿಶ್ವ ದರ್ಜೆ ಮಟ್ಟದ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಗೊಂಡು ನಿಗದಿತ ಅವಧಿಗೂ ಮುನ್ನವೇ ರಾಷ್ಟ್ರಕ್ಕೆ ಸಮರ್ಪಣೆ ಆಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ಸಮ್ಮೇಳನ ಸಭಾಂಗಣದಲ್ಲಿ ಲೋಕೋಪ ಯೋಗಿ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತ ನಾಡಿದ ಅವರು, ಈಗಾಗಲೇ ಶೇ.80ರಷ್ಟು ಕೆಲಸ ಆರಂಭ ಗೊಂಡು ವೇಗದಲ್ಲಿ ಸಾಗುತ್ತಿದೆ. ಶೇ.10ರಿಂದ ಶೇ.15ರಷ್ಟು ಭೂಸ್ವಾಧೀನ ಮತ್ತು ಅರಣ್ಯ ಇಲಾಖೆ ತೊಡಕುಗಳು ಎದುರಾಗಿವೆ,…
ಕಾರು, ಗೂಡ್ಸ್ ವಾಹನದ ಡ್ರೈವರ್‍ಗಳ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ
June 12, 2019ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿ ನಾಲ್ವರು ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದ ಬಳಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಶ್ರೀರಂಗ ಪಟ್ಟಣದ ಸಂತೇ ಮಾಳದ ನಿವಾಸಿ ರಂಜಿತ್(26) ಮತ್ತು ಚಾಮರಾಜ ನಗರದ ಫಾಹಿದ್ ಕಲಾರ್(28) ಮೃತ ದುರ್ದೈವಿಗಳು. ಘಟನೆ ಹಿನ್ನೆಲೆ: ಸೋಮವಾರ ರಾತ್ರಿ 10ರ ಸುಮಾರಿ ನಲ್ಲಿ ಮೈಸೂರು ಕಡೆಗೆ ವೇಗವಾಗಿ…
ಐಎಂಎ ವಂಚನೆ ಪ್ರಕರಣ: ಹನ್ನೊಂದು ಸಾವಿರಕ್ಕೂ ಅಧಿಕ ದೂರು ದಾಖಲು
June 12, 2019ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಸಹಸ್ರಾರು ಜನರಿಗೆ ವಂಚಿಸಿರುವ ಪ್ರತಿಷ್ಠಿತ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ವಿರುದ್ಧ 11 ಸಾವಿರಕ್ಕೂ ಅಧಿಕ ದೂರು ದಾಖಲಾಗಿದೆ. ಈ ಮಧ್ಯೆ ಮನ್ಸೂರ್ ದುಬೈಗೆ ಪರಾರಿಯಾಗಿರುವ ಸಂಶಯ ವ್ಯಕ್ತವಾಗಿದೆ. ಆತ ಕಳೆದ ತಿಂಗಳಾಂತ್ಯದಲ್ಲಿ ದುಬೈಗೆ ತೆರಳಿ ರುವುದಾಗಿ ಸ್ವತಃ ಹೂಡಿಕೆದಾರರೇ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತಂಕಕ್ಕೊಳ ಗಾದ ಹೂಡಿಕೆದಾರರು ಮಂಗಳವಾರ ಕೂಡ ಸಹಸ್ರಾರು ಸಂಖ್ಯೆಯಲ್ಲಿ ದೂರು ನೀಡಲು ಬಂದಿದ್ದ ದೃಶ್ಯ ಶಿವಾಜಿನಗರದ ಶಾದಿ ಮಹಲ್ ನಲ್ಲಿ ಕಂಡುಬಂತು. ಪ್ರತಿಯೊಬ್ಬರ…
ಎಸ್‍ಐಟಿ ತನಿಖೆಗೆ ಹಸ್ತಾಂತರಿಸಿದ ಸಿಎಂ
June 12, 2019ಬೆಂಗಳೂರು: ಹೂಡಿಕೆಯ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚಿಸಿರುವ ಐಎಂಎ ಜ್ಯುವೆಲ್ಲರ್ಸ್ ಮಾಲೀಕನ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣವನ್ನು ಸಿಸಿಬಿ ಬದಲಿಗೆ ವಿಶೇಷ ತನಿಖಾ ತಂಡ(ಎಸ್‍ಐಟಿ)ಕ್ಕೆ ಹಸ್ತಾಂತರಿಸಿರುವುದಾಗಿ ಮುಖ್ಯ ಮಂತ್ರಿ ಎಚ್.ಡಿ .ಕುಮಾರಸ್ವಾಮಿ ಮಂಗಳವಾರ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳ ಕಚೇರಿ, ಐಎಂಎ ವಂಚನೆ ಪ್ರಕರಣದ ಗಂಭೀರತೆಯನ್ನು ಅರಿತು ಪ್ರಕರಣ ವನ್ನು ಎಸ್‍ಐಟಿ ತನಿಖೆಗೆ ಹಸ್ತಾಂತರಿಸಲಾಗಿದೆ ಮತ್ತು ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ….










