ಕಾರು, ಗೂಡ್ಸ್ ವಾಹನದ ಡ್ರೈವರ್‍ಗಳ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ
ಮಂಡ್ಯ, ಮೈಸೂರು

ಕಾರು, ಗೂಡ್ಸ್ ವಾಹನದ ಡ್ರೈವರ್‍ಗಳ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ

June 12, 2019

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿ ನಾಲ್ವರು ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದ ಬಳಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಶ್ರೀರಂಗ ಪಟ್ಟಣದ ಸಂತೇ ಮಾಳದ ನಿವಾಸಿ ರಂಜಿತ್(26) ಮತ್ತು ಚಾಮರಾಜ ನಗರದ ಫಾಹಿದ್ ಕಲಾರ್(28) ಮೃತ ದುರ್ದೈವಿಗಳು.

ಘಟನೆ ಹಿನ್ನೆಲೆ: ಸೋಮವಾರ ರಾತ್ರಿ 10ರ ಸುಮಾರಿ ನಲ್ಲಿ ಮೈಸೂರು ಕಡೆಗೆ ವೇಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರು ಟಿ.ಎಂ. ಹೊಸೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಹಾರಿ, ಬೆಂಗ ಳೂರು ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನÀಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತ ದಲ್ಲಿ ಸಿಫ್ಟ್ ಕಾರ್‍ನ ಡ್ರೈವರ್ ಚಾಮರಾಜ ನಗರದ ಫಾಹಿದ್ ಕಲಾರ್ ಮತ್ತು ಗೂಡ್ಸ್ ವಾಹನದ ಡ್ರೈವರ್ ಶ್ರೀರಂಗಪಟ್ಟಣದ ಸಂತೇಮಾಳದ ನಿವಾಸಿ ರಂಜಿತ್ ಸ್ಥಳದಲ್ಲೇ ಮೃತಪಟ್ಟಿದ್ದು ಕಾರ್‍ನಲ್ಲಿದ್ದ ತನ್ವೀರ್ ಸೇರಿದಂತೆ ನಾಲ್ವರು ತೀವ್ರವಾಗಿ ಗಾಯಗೊಂಡಿ ದ್ದಾರೆ. ಗಾಯಾಳುಗಳೆಲ್ಲಾ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶ್ರೀರಂಗಪಟ್ಟಣ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.