ಬೆಂಗಳೂರು-ಮೈಸೂರು ವಿಶ್ವದರ್ಜೆ ಹೆದ್ದಾರಿ ಅವಧಿಗೂ ಮುನ್ನವೇ ಸಂಚಾರಕ್ಕೆ ಮುಕ್ತ
ಮೈಸೂರು

ಬೆಂಗಳೂರು-ಮೈಸೂರು ವಿಶ್ವದರ್ಜೆ ಹೆದ್ದಾರಿ ಅವಧಿಗೂ ಮುನ್ನವೇ ಸಂಚಾರಕ್ಕೆ ಮುಕ್ತ

June 12, 2019

ಪ್ರಗತಿ ಪರಿಶೀಲನೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ

ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ವಿಶ್ವ ದರ್ಜೆ ಮಟ್ಟದ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಗೊಂಡು ನಿಗದಿತ ಅವಧಿಗೂ ಮುನ್ನವೇ ರಾಷ್ಟ್ರಕ್ಕೆ ಸಮರ್ಪಣೆ ಆಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ಸಮ್ಮೇಳನ ಸಭಾಂಗಣದಲ್ಲಿ ಲೋಕೋಪ ಯೋಗಿ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತ ನಾಡಿದ ಅವರು, ಈಗಾಗಲೇ ಶೇ.80ರಷ್ಟು ಕೆಲಸ ಆರಂಭ ಗೊಂಡು ವೇಗದಲ್ಲಿ ಸಾಗುತ್ತಿದೆ. ಶೇ.10ರಿಂದ ಶೇ.15ರಷ್ಟು ಭೂಸ್ವಾಧೀನ ಮತ್ತು ಅರಣ್ಯ ಇಲಾಖೆ ತೊಡಕುಗಳು ಎದುರಾಗಿವೆ, ಅವುಗಳನ್ನು ನಿವಾರಿಸಿ ಕೆಲಸ ಆರಂಭಿಸುತ್ತೇವೆ. ಕೇಂದ್ರ ಸರ್ಕಾರದ ಅನುಮತಿ ದೊರೆತರೂ ರಸ್ತೆಯ ಭೂಸ್ವಾಧೀನ ಕಾರ್ಯ ವಿಳಂಬದಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಆದರೆ ಈಗ ಸಮ ರೋಪಾದಿಯಲ್ಲಿ ಕೆಲಸ ನಡೆಯುತ್ತಿದ್ದು, ಅವಧಿಗೂ ಮುನ್ನವೇ ಪೂರ್ಣಗೊಳ್ಳಲಿದೆ ಎಂದರು. ಸಭೆಯಲ್ಲಿ ಇಂಜಿನಿಯರ್‍ಗಳನ್ನು ತರಾಟೆಗೆ ತೆಗದುಕೊಂಡ ಮುಖ್ಯ ಮಂತ್ರಿ ಅವರು, ನೀವು ಬಿಲ್ ಬರೆಯುವುದರಲ್ಲೇ ಕಾಲ ಕಳೆಯುತ್ತೀರಿ, ಯೋಜನಾ ಅಂದಾಜನ್ನೂ ಬೇರೆಯವರು ಮಾಡುತ್ತಾರೆ, ಈ ಅಂದಾಜು ಮೊತ್ತಕ್ಕಿಂತಲೂ ಹೆಚ್ಚಾಗಿ ಗುತ್ತಿಗೆದಾರರಿಂದ ಬಿಡ್ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ, ಯೋಜನಾ ಅಂದಾಜು ನಂತರ ನಿರ್ದಿಷ್ಟ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು.

ಗುತ್ತಿಗೆನೀಡಿದ ನಂತರ ಕಾಮಗಾರಿ ವೀಕ್ಷಣೆಯೇ ಮಾಡುವುದಿಲ್ಲ, ಅವರು ಮಾಡಿದ್ದನ್ನೇ ಒಪ್ಪಿ, ಬಿಲ್ ಮಾಡುತ್ತೀರಿ. ಇದರಿಂದ ಗುಣಮಟ್ಟದ ಕೆಲಸಗಳು ನಡೆಯುತ್ತಿಲ್ಲ. ಮೊದ ಮೊದಲು ಇಂಜಿನಿಯರ್ ಮತ್ತು ನಿಮ್ಮ ಇಲಾಖಾ ಅಧಿಕಾರಿ ಗಳು ರಾಜ್ಯ ಹಾಗೂ ರಾಷ್ಟ್ರಕ್ಕೆ ದುಡಿದು ಬೃಹತ್ ಅಣೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅವು ಈಗಲೂ ರಾಷ್ಟ್ರದ ಆಸ್ತಿಯಾಗಿ ಉಳಿದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಗುಣಾತ್ಮಕ ಯೋಜನೆಗಳೇ ಅನುಷ್ಠಾನಗೊಳ್ಳುತ್ತಿಲ್ಲ. ಇದಕ್ಕೆ ನೀವು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕೆಲಸ ಮಾಡುವುದೇ ಕಾರಣ. ಇಲಾಖೆಗೆ 21,000 ಕೋಟಿ ರೂ. ನೀಡಿದ್ದೇವೆ. ಇನ್ನು ಆರೇಳು ತಿಂಗಳಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಿ ಗುಣಮಟ್ಟದ ರಸ್ತೆಗಳನ್ನು ನೀಡಿ ಎಂದು ಕಿವಿಮಾತು ಹೇಳಿದರು.

Translate »