ಆಧಾರ್ ಕಾರ್ಡ್‍ಗೆ ನೂಕುನುಗ್ಗಲು: ಕರ್ನಾಟಕ ಒನ್ ಸೆಂಟರ್‍ನಲ್ಲಿ ಏಕಮಾತ್ರ ಸಿಬ್ಬಂದಿ, ಸಾರ್ವಜನಿಕರ ಆಕ್ರೋಶ
ಮೈಸೂರು

ಆಧಾರ್ ಕಾರ್ಡ್‍ಗೆ ನೂಕುನುಗ್ಗಲು: ಕರ್ನಾಟಕ ಒನ್ ಸೆಂಟರ್‍ನಲ್ಲಿ ಏಕಮಾತ್ರ ಸಿಬ್ಬಂದಿ, ಸಾರ್ವಜನಿಕರ ಆಕ್ರೋಶ

June 13, 2019

ಮೈಸೂರು: ಬೆಳಿಗ್ಗೆ ನಾಲ್ಕೈದು ಗಂಟೆಗೆ ಬಂದು ನಿಂತರೂ ಆಧಾರ್ ಕಾರ್ಡ್ ಮಾಡಿಸಲು ಟೋಕನ್ ಸಿಗುತ್ತಿಲ್ಲ. ದಿನನಿತ್ಯ ಇದೇ ಕೆಲಸವಾದರೆ, ನಮ್ಮ ಹೊಟ್ಟೆ ಪಾಡಿನ ಗತಿಯೇನು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಅತ್ತ ಆಧಾರ್ ಕೌಂಟರ್‍ನಲ್ಲಿರುವ ಒಬ್ಬರೇ ಸಿಬ್ಬಂದಿ ಸಾರ್ವಜನಿಕರು ಹಾಕುತ್ತಿರುವ ಹಿಡಿ ಶಾಪಕ್ಕೆ ದಿಕ್ಕು ತೋಚದಂತಾಗುತ್ತಿದ್ದಾರೆ.

ಇದು ಮೈಸೂರಿನ ಶೇಷಾದ್ರಿ ಐಯ್ಯರ್ ರಸ್ತೆಯಲ್ಲಿರುವ ಕರ್ನಾಟಕ ಓನ್ ಕೇಂದ್ರದ ಚಿತ್ರಣವಾಗಿದ್ದು, ಟೋಕನ್‍ಗಾಗಿ ಅಲೆದಾಡಿ ತಾಳ್ಮೆ ಕಳೆದುಕೊಂಡಿದ್ದ ಸಾರ್ವಜನಿಕರು ಬುಧವಾರ ಈ ಕೇಂದ್ರದ ಎದುರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ದರು. ಸುಮಾರು 300 ಮಂದಿ ಸ್ಥಳದಲ್ಲಿ ಜಮಾಯಿಸಿ ಟೋಕನ್ ನೀಡಲೇಬೇ ಕೆಂದು ಒತ್ತಾಯಿಸಿದರು.

ಪಡಿತರ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದು, ಇದಕ್ಕೆ ಜು.31 ಕಡೆ ದಿನವಾಗಿದೆ. ಈ ಹಿನ್ನೆಲೆಯಲ್ಲೂ ನಗರದ ಕರ್ನಾಟಕ ಒನ್ ಕೇಂದ್ರಗಳತ್ತ ಸಾರ್ವಜ ನಿಕರು ಎಡತಾಕುತ್ತಿದ್ದಾರೆ. ಪ್ರತಿಭಟನಾ ನಿರತ ಸಾರ್ವಜನಿಕರು ಹೇಳುವಂತೆ ಈ ಪರಿಸ್ಥಿತಿ ಇದೊಂದು ಕೇಂದ್ರದಲ್ಲಿ ಮಾತ್ರವಲ್ಲ, ರಾಮಕೃಷ್ಣನಗರದ ಮುಡಾ ಕಾಂಪ್ಲೆಕ್ಸ್‍ನ ಕರ್ನಾಟಕ ಓನ್ ಕೇಂದ್ರ ಸೇರಿದಂತೆ ಮೈಸೂರಿನ ಒಟ್ಟು 6 ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಎಂದು ಕಿಡಿಕಾರುತ್ತಾರೆ.

ಪ್ರತಿಭಟನಾ ಕಾವು ತಟ್ಟಿದ್ದರಿಂದ ಶೇಷಾದ್ರಿ ಐಯ್ಯರ್ ರಸ್ತೆಯಲ್ಲಿರುವ ಕರ್ನಾಟಕ ಒನ್ ಕೇಂದ್ರದ ಕಾರ್ಯ ಇಂದು ಸಮ ರ್ಪಕವಾಗಿ ನಡೆಯದಾಯಿತು. ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರು, ನಾವು ಕೆಲಸ ಕಾರ್ಯ ಬಿಟ್ಟು ಬಂದಿದ್ದು, ಇಂದು ಇಲ್ಲಿ ಬಂದಿರುವ ಎಲ್ಲರಿಗೂ ಟೋಕನ್ ನೀಡಲೇಬೇಕು. ಬೇಕಿದ್ದರೆ ದಿನಾಂಕ ಗಳನ್ನು ನಿಗದಿ ಮಾಡಿ ಟೋಕನ್‍ಗಳನ್ನು ನೀಡಿ ಆ ದಿನದಂದೇ ದಾಖಲಾತಿಗಳೊಂದಿಗೆ ಬಂದು ಕಾರ್ಡ್ ಮಾಡಿಸಿಕೊಳ್ಳುತ್ತೇವೆ. ಅದನ್ನು ಬಿಟ್ಟು ನಿತ್ಯ ಈ ರೀತಿ ನಮ್ಮನ್ನು ಅಲೆ ದಾಡಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗದ್ದಲ-ಗೊಂದಲ: ಪ್ರತಿಭಟನೆ ನಡೆಸು ತ್ತಿದ್ದ ಸಾರ್ವಜನಿಕರು ಕರ್ನಾಟಕ ಒನ್ ಕೇಂದ್ರದ ಸಿಬ್ಬಂದಿ ಮನವಿಗೂ ಸ್ಪಂದಿಸದೇ ತಮ್ಮ ಹೋರಾಟ ಮುಂದುವರೆಸಿದರು. ಇದರಿಂದ ಕೇಂದ್ರದಲ್ಲಿ ಯಾವುದೇ ಕೆಲಸ ಗಳು ನಡೆಸಲಾಗದ ಪರಿಸ್ಥಿತಿ ನಿರ್ಮಾಣ ವಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿ ಸಿದ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯ ಎಎಸ್‍ಐಗಳಾದ ಎಂ.ಬಸವರಾಜು, ಗುರುಸ್ವಾಮಿ ಮತ್ತು ಸಿಬ್ಬಂದಿ ಸಾರ್ವಜ ನಿಕರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಕೊನೆಗೆ ಆಧಾರ್ ಕಾರ್ಡ್ ಮಾಡಲಿಚ್ಛಿ ಸುವ ಎಲ್ಲರಿಗೂ ದಿನಾಂಕ ನಿಗದಿ ಮಾಡಿ ಟೋಕನ್ ನೀಡಲು ನಿರ್ಧರಿಸಲಾಯಿ ತಾದರೂ ಸಾರ್ವಜನಿಕರು ಸಾಲಾಗಿ ನಿಲ್ಲುವ ಬದಲು ತಾ ಮುಂದು ನಾ ಮುಂದು ಎಂದು ಒಮ್ಮೆಲೇ ಕೇಂದ್ರದೊ ಳಕ್ಕೆ ನುಗ್ಗಲಾರಂಭಿಸಿದರು. ಇದರಿಂದ ಏನು ಮಾಡಬೇಕೆಂದು ಗೊತ್ತಾಗದೇ ಗೊಂದಲಕ್ಕೀಡಾದ ಕೇಂದ್ರದ ಸಿಬ್ಬಂದಿ ಪೊಲೀಸರ ನೆರವಿನಿಂದ ಎಲ್ಲರನ್ನು ಹೊರ ಕಳುಹಿಸಿ ಕೇಂದ್ರದ ಬಾಗಿಲು ಮುಚ್ಚಿದರು. ಬಳಿಕ ಸಾರ್ವಜನಿಕರ ಮನವೊಲಿಸಿ ಸಾಲಾಗಿ ನಿಲ್ಲಿಸಿದ ಪೊಲೀಸರು, ಎಲ್ಲ ರಿಗೂ ಟೋಕನ್ ನೀಡುವ ವ್ಯವಸ್ಥೆ ಮಾಡಿದರು. ಈ ಹಿನ್ನೆಲೆಯಲ್ಲಿ ಸದರಿ ಕೇಂದ್ರದಲ್ಲಿ ಬುಧವಾರ ತಲೆದೋರಿದ್ದ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದ್ದು, ಆಧಾರ್ ಕಾರ್ಡ್ ಕೌಂಟರ್‍ಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳದಿದ್ದರೆ ಇದು ನಿತ್ಯ ಸಮಸ್ಯೆ ಯಾಗಿಯೇ ಉಳಿಯಲಿದೆ.

ಸಿಬ್ಬಂದಿ ಅಳಲು: ‘ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಶೇಷಾದ್ರಿ ಐಯ್ಯರ್ ರಸ್ತೆಯಲ್ಲಿರುವ ಕರ್ನಾಟಕ ಓನ್ ಕೇಂದ್ರದ ಆಧಾರ್ ಕೌಂಟರ್‍ನ ಆಪರೇಟರ್ ಮಂಜುನಾಥ್, ದಿನಕ್ಕೆ 50 ಅರ್ಜಿಗಳನ್ನು ನೀಡುತ್ತಿದ್ದೇವೆ. ಆದಾಗ್ಯೂ ಗರ್ಭಿಣಿಯರು, ವಿಕಲಚೇತನರು ಹಾಗೂ ಹಿರಿಯ ನಾಗರಿ ಕರಿಗೆ ಆದ್ಯತೆ ನೀಡಲಾಗುತ್ತಿದೆ. ಒಬ್ಬರ ಆಧಾರ್ ಕಾರ್ಡ್ ಸಿದ್ಧಪಡಿಸುವ ಪ್ರಕ್ರಿಯೆಗೆ ಕನಿಷ್ಠ 15 ನಿಮಿಷಬೇಕು. ಮೈಸೂರಿನಲ್ಲಿ 6 ಕರ್ನಾಟಕ ಒನ್ ಕೇಂದ್ರಗಳಲ್ಲಿ ತಲಾ ಒಂದು ಆಧಾರ್ ಕೌಂಟರ್‍ಗೆ ವ್ಯವಸ್ಥೆ ಮಾಡಿದ್ದು, ಕೌಂಟರ್ ಒಂದಕ್ಕೆ ಒಬ್ಬರೇ ಸಿಬ್ಬಂದಿ. ಹೀಗಾಗಿ ಹೆಚ್ಚುವರಿ ಅರ್ಜಿಗಳನ್ನು ವಿತರಣೆ ಮಾಡಲಾಗದು. ಆದರೆ ಸಾರ್ವ ಜನಿಕರು ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊ ಳ್ಳುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಅಂಚೆ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಆಧಾರ್ ಏಜೆನ್ಸಿ ಪಡೆದ ಬ್ಯಾಂಕು ಗಳಲ್ಲೂ ಆಧಾರ್ ಕಾರ್ಡ್ ಮಾಡಲಾ ಗುತ್ತದೆ. ಆದರೆ ಸಾರ್ವಜನಿಕರು ಹೆಚ್ಚಾಗಿ ಕರ್ನಾಟಕ ಒನ್ ಕೇಂದ್ರಗಳತ್ತ ಬರುತ್ತಿ ದ್ದಾರೆ ಎನ್ನಿಸುತ್ತಿದ್ದು, ಇದರಿಂದ ಈ ರೀತಿ ಸಮಸ್ಯೆಯಾಗಿರಬಹುದು ಎಂದು ಮಂಜುನಾಥ್ ತಿಳಿಸಿದರು.

Translate »