ವಸ್ತು ಪ್ರದರ್ಶನ ಮೈದಾನ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್
ಮೈಸೂರು

ವಸ್ತು ಪ್ರದರ್ಶನ ಮೈದಾನ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್

June 13, 2019

ಮೈಸೂರು: ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರಿನ ದಸರಾ ವಸ್ತು ಪ್ರದ ರ್ಶನ ಮೈದಾನದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್ (ಅಬ್ದುಲ್ಲಾ) ಬುಧವಾರ ಪರಿಶೀಲನೆ ನಡೆಸಿದರು.

ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ಹೊಂದಿಕೊಂಡಿರುವ ದೊಡ್ಡ ಮೋರಿಯ ಹೂಳು ತೆಗೆಸುವುದು, ಬೆಳೆದು ನಿಂತಿರುವ ಗಿಡ-ಗಂಟಿಗಳನ್ನು ತೆರವುಗೊಳಿಸಿ ಮಳಿಗೆ ಗಳ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸು ವುದು ಸೇರಿದಂತೆ ದಸರಾ ವಸ್ತು ಪ್ರದ ರ್ಶನ ಆಯೋಜನೆ ಹಿನ್ನೆಲೆಯಲ್ಲಿ ಆಗ ಬೇಕಿರುವ ಕೆಲಸ-ಕಾರ್ಯಗಳ ಸಂಬಂಧ ಪರಿಶೀಲನೆ ನಡೆಸಿದರು.

ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಷಫಿ ಅಹಮ್ಮದ್, ಪ್ರಾಧಿಕಾರದ ಸಿಇಓ ಬಿ.ಆರ್.ಗಿರೀಶ್, ವ್ಯವಸ್ಥಾಪಕ ರೆಡ್ಡಪ್ಪ ಸೇರಿದಂತೆ ನಗರ ಪಾಲಿಕೆ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಿದ ಅಬ್ದುಲ್ಲಾ, ದಸರಾ ವಸ್ತು ಪ್ರದ ರ್ಶನಕ್ಕೆ ಯಾವುದೇ ತೊಡಕು ಉಂಟಾಗ ದಂತೆ ಸಕಾಲದಲ್ಲಿ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅಬ್ದುಲ್ಲಾ ಅವರು, ವಸ್ತು ಪ್ರದರ್ಶನ ಮೈದಾನದ ಮಳೆ ನೀರಿನ ದೊಡ್ಡ ಮೋರಿ (ಕುಸ್ತಿ ಅಖಾಡಕ್ಕೆ ಹೊಂದು ಕೊಂಡಂತೆ ಇರುವ ಮೋರಿ) ಹೂಳು ತೆಗೆಸುವ ಕಾಮಗಾರಿ ಈಗಾಗಲೇ ಅರ್ಧ ದಷ್ಟು ಪಾಲಿಕೆಯಿಂದ ನಡೆಸಲಾಗಿದೆ. ಬಾಕಿ ಉಳಿದಿರುವ ಮೋರಿಯ ಹೂಳೆ ತ್ತುವ ಕೆಲಸ ಸೇರಿದಂತೆ ಸ್ವಚ್ಛತೆ ಕಾಮ ಗಾರಿ ಸಂಬಂಧ ಮೇಯರ್ ಅವರ ಸಮ್ಮುಖದಲ್ಲಿ ಪರಿಶೀಲಿಸಿ, ಮೇಯರ್ ಅವರಿಗೆ ಬಾಕಿ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಮೈದಾನದ ಎಲ್ಲಾ ಚರಂಡಿ ಮಾರ್ಗಗಳನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಮೈದಾನದಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಲು ಅವ ಕಾಶವಿಲ್ಲ. ಈ ಸಾಲಿನಲ್ಲಿ ಸಕಾಲದಲ್ಲಿ ಮಳಿಗೆಗಳನ್ನು ತೆರೆಯಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ವಸ್ತು ಪ್ರದರ್ಶನ ಮೈದಾ ನದ ಮಳೆ ನೀರು ಮೋರಿಯ ಹೂಳು ತೆಗೆಯುವುದನ್ನು ಪಾಲಿಕೆ ವತಿಯಿಂದ ನಾಲ್ಕೈದು ದಿನಗಳಲ್ಲಿ ಪೂರ್ಣಗೊಳಿಸ ಲಾಗುವುದು. ಅದೇ ರೀತಿ ಮೈಸೂರಿನಲ್ಲಿ ಮಳೆ ನೀರು ಚರಂಡಿಗಳ ಹೂಳೆತ್ತುವ ಕಾರ್ಯವನ್ನು ಪಾಲಿಕೆ ಈಗಾಗಲೇ ಶೇ.70ರಷ್ಟು ಮುಗಿಸಿದೆ. ಬಾಕಿ ಇರುವು ದನ್ನು ಶೀಘ್ರವಾಗಿ ಪೂರ್ಣಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಬ್ದುಲ್ಲಾಗೆ ಅಭಿನಂದನೆ: ಪರಿಶೀಲನೆಗೂ ಮುನ್ನ ಅಬ್ದುಲ್ ಅಜೀಜ್ ಅವರನ್ನು ವಿವಿಧ ರಾಜ್ಯಗಳ ಇಸ್ಲಾಂ ಧರ್ಮಗುರು ಗಳು ಅಭಿನಂದಿಸಿದರು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಇಂದು ದಸರಾ ವಸ್ತು ಪ್ರದರ್ಶನ ಮೈದಾನದ ಅವರ ಕೊಠಡಿಯಲ್ಲಿ ಹೂಗುಚ್ಛ ನೀಡಿ ಅಭಿನಂದಿಸಲಾಯಿತು. ಉತ್ತರ ಪ್ರದೇಶದ ಮುಜಾಫರ್‍ನಗರದ ಹಜರತ್ ಸಾಜಾದ್ ನೌಷಿನ್ ಸೂಫಿ ಫೀರ್ ತಾರೀಖ್ ಖಾಜು ಜಾವಾದ್ ಅಹಮ್ಮದ್ ಕುಷಾಲಿ ಸೇರಿದಂತೆ ಅನೇಕ ಧರ್ಮಗುರುಗಳು ಅಭಿನಂದಿಸಿದರು. ಎನ್‍ಆರ್ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ.ಎನ್.ರಾಮು, ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್, ಸಯ್ಯದ್ ರೆಹಮತ್‍ಉಲ್ಲಾ ಮತ್ತಿತರರು ಹಾಜರಿದ್ದರು.

Translate »