ಶ್ರೀರಾಂಪುರ ದೊಡ್ಡ ಮೋರಿ ಪರಿಶೀಸಿದ ಪಾಲಿಕೆ ಅಧಿಕಾರಿಗಳು
ಮೈಸೂರು

ಶ್ರೀರಾಂಪುರ ದೊಡ್ಡ ಮೋರಿ ಪರಿಶೀಸಿದ ಪಾಲಿಕೆ ಅಧಿಕಾರಿಗಳು

June 13, 2019

ಮೈಸೂರು: ಶ್ರೀರಾಂಪುರ ಬಡಾವಣೆಯಲ್ಲಿ ಹಾದು ಹೋಗಿರುವ ದೊಡ್ಡ ಮೋರಿಯಿಂದ ಮಳೆಯ ನೀರು ಮಾನಂದವಾಡಿ ಸೇತುವೆ ಬಳಿ ಸರಾಗವಾಗಿ ಹೋಗದೆ ವಾಪಸಾಗುವ ಹಿನ್ನೆಲೆಯಲ್ಲಿ ಬಡಾವಣೆಯ ಜನ ಮೋಡ ಕಂಡರೆ ಆತಂಕ್ಕೀಡಾಗಿರುವ ಬಗ್ಗೆ ಜೂ.12ರ `ಮೈಸೂರು ಮಿತ್ರ’ನ ವರದಿ ಹಿನ್ನೆಲೆಯಲ್ಲಿ ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್ ಅವರು ಸಮಸ್ಯೆಯನ್ನು ಬೇಗ ಪರಿಹರಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆ ಯಲ್ಲಿ ಮೈಸೂರು ನಗರಪಾಲಿಕೆ ಅಧಿಕಾರಿ ಗಳು ಮತ್ತು ಪಾಲಿಕೆ ಸದಸ್ಯರನ್ನು ಒಳಗೊಂಡ ತಂಡ ಬುಧವಾರ ಸ್ಥಳ ಪರಿಶೀಲನೆ ನಡೆಸಿತು.

ಮಳೆ ಬಂದರೆ ದೊಡ್ಡ ಮೋರಿ ತುಂಬಿ ಹರಿದು ಮಾನಂದವಾಡಿ ರಸ್ತೆ ಸೇತುವೆ ಯಿಂದ ಮುಂದಕ್ಕೆ ಹೂಳು ತುಂಬಿರುವು ದರಿಂದ ನೀರು ಸರಾಗವಾಗಿ ಹರಿಯದೇ ವಾಪಸು ಬರುತ್ತಿದೆ. ಹೀಗಾಗಿ ಸಹಜವಾಗಿ ಈ ಭಾಗದ ನಿವಾಸಿಗಳಿಗೆ ಭಯ, ಆತಂಕ ಕಾಡುತ್ತಿದೆ. ಎರಡು ವರ್ಷದ ಹಿಂದೆ ಮಳೆಯಿಂದ ಮೋರಿ ಉಕ್ಕಿ ಹರಿದು 150ಕ್ಕೂ ಹೆಚ್ಚು ಮನೆಗಳು ನೀರಿನಿಂದ ಜಲಾವೃತ ವಾಗಿತ್ತು. ನಿವಾಸಿಗಳಿಗೆ ಲಕ್ಷಾಂತರ ರೂ.ಗಳಷ್ಟು ನಷ್ಟ ಉಂಟಾಗಿತ್ತು.

ಅಂದು ಮುಡಾ ಮತ್ತು ನಗರಪಾಲಿಕೆ ಅಧಿಕಾರಿಗಳು ತಕ್ಷಣಕ್ಕೆ ಅಗತ್ಯ ಕಾಮಗಾರಿ ಕೈಗೊಂಡಿದ್ದರು. ಆದರೆ ಮಾನಂದವಾಡಿ ರಸ್ತೆ ಸೇತುವೆಯಿಂದ ಮುಂದಕ್ಕೆ ಮೋರಿಯ ಹೂಳು ತೆಗೆಯದೆ ಬಿಡಲಾಗಿತ್ತು. ಇದೀಗ ಹೂಳು ಎತ್ತರಕ್ಕೆ ಬೆಳೆದು ಮಳೆ ನೀರು ಸರಾಗವಾಗಿ ಹೋಗುತ್ತಿಲ್ಲ. ಅಲ್ಲದೆ ಅಲ್ಲಿಂದ ಮುಂದೆ ದೊಡ್ಡ ಮೋರಿ ಒತ್ತು ವರಿಯಾಗಿ ಕಿರಿದಾದ ಮೋರಿಯಂತಾಗಿದೆ. ಇದು ನಿವಾಸಿಗಳಲ್ಲಿ ಆತಂಕಕ್ಕೆ ಕಾರಣ ವಾಗಿತ್ತು. ಈ ಬಗ್ಗೆ `ಮೈಸೂರು ಮಿತ್ರ’ ಜೂ.12ರಂದು ಬೆಳಕು ಚೆಲ್ಲಿತ್ತು.

ಶಾಸಕ ರಾಮದಾಸ್ ಅವರ ಆದೇಶ ದಂತೆ ಪಾಲಿಕೆ ಅಧಿಕಾರಿಗಳು ವಲಯ 2ರ ಸಹಾಯಕ ಆಯುಕ್ತ ಕುಮಾರ್ ನಾಯಕ್, ಅಭಿವೃದ್ಧಿ ಅಧಿಕಾರಿ ಓಂಕಾ ರಪ್ಪ, ವಾರ್ಡ್ ಇಂಜಿನಿಯರ್ ರವಿಕುಮಾರ್, ನಗರಪಾಲಿಕೆ  ಸದಸ್ಯೆ ಗೀತಾಶ್ರೀ ಯೋಗಾ ನಂದ, ಆರೋಗ್ಯ ಪರಿವೀಕ್ಷಕ ಬಸವರಾಜು, ಬಿಜೆಪಿ ವಾರ್ಡ್ ಅಧ್ಯಕ್ಷ ಗಿರೀಶ್ ಸೇರಿ ದಂತೆ ಹಲವು ಅಧಿಕಾರಿಗಳು ಸ್ಥಳ ಪರಿ ಶೀಲನೆ ನಡೆಸಿದರು. ಮೋರಿಯಲ್ಲಿ ತುಂಬಿ ರುವ ಹೂಳು ತೆಗೆಯಲು ನಿರ್ಧರಿಸಿದ್ದು, ಹೂಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜೆಬಿಸಿ ಯಿಂದ ಸಾಧ್ಯವಿಲ್ಲ. ಆದರ ಬದಲಿಗೆ ಹಿಟಾಚಿ ಮೂಲಕ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗು ವಂತೆ ಮಾಡಲಾಗುವುದು ಎಂದು ವಲಯ 2ರ ಸಹಾಯಕ ಆಯುಕ್ತ ಕುಮಾರ ನಾಯಕ್ ‘ಮೈಸೂರು ಮಿತ್ರ’ನಿಗೆ ತಿಳಿಸಿ ದರು. ಈ ಸಂಬಂಧ ನಾಳೆಯಿಂದಲೇ ಕಾಮಗಾರಿ ಕೈಗೆತ್ತಿಕೊಂಡು ಶೀಘ್ರ ಕಾಮ ಗಾರಿ ಪೂರ್ಣಗೊಳಿಸುವಂತೆ ಅಭಿವೃದ್ಧಿ ಅಧಿಕಾರಿ ಓಂಕಾರಪ್ಪ ಅವರಿಗೆ ಸೂಚಿಸ ಲಾಗಿದೆ ಎಂದು ತಿಳಿಸಿದರು.

Translate »