Tag: Srirampura

ಶ್ರೀರಾಂಪುರ ದೊಡ್ಡ ಮೋರಿ ಪರಿಶೀಸಿದ ಪಾಲಿಕೆ ಅಧಿಕಾರಿಗಳು
ಮೈಸೂರು

ಶ್ರೀರಾಂಪುರ ದೊಡ್ಡ ಮೋರಿ ಪರಿಶೀಸಿದ ಪಾಲಿಕೆ ಅಧಿಕಾರಿಗಳು

June 13, 2019

ಮೈಸೂರು: ಶ್ರೀರಾಂಪುರ ಬಡಾವಣೆಯಲ್ಲಿ ಹಾದು ಹೋಗಿರುವ ದೊಡ್ಡ ಮೋರಿಯಿಂದ ಮಳೆಯ ನೀರು ಮಾನಂದವಾಡಿ ಸೇತುವೆ ಬಳಿ ಸರಾಗವಾಗಿ ಹೋಗದೆ ವಾಪಸಾಗುವ ಹಿನ್ನೆಲೆಯಲ್ಲಿ ಬಡಾವಣೆಯ ಜನ ಮೋಡ ಕಂಡರೆ ಆತಂಕ್ಕೀಡಾಗಿರುವ ಬಗ್ಗೆ ಜೂ.12ರ `ಮೈಸೂರು ಮಿತ್ರ’ನ ವರದಿ ಹಿನ್ನೆಲೆಯಲ್ಲಿ ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್ ಅವರು ಸಮಸ್ಯೆಯನ್ನು ಬೇಗ ಪರಿಹರಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆ ಯಲ್ಲಿ ಮೈಸೂರು ನಗರಪಾಲಿಕೆ ಅಧಿಕಾರಿ ಗಳು ಮತ್ತು ಪಾಲಿಕೆ ಸದಸ್ಯರನ್ನು ಒಳಗೊಂಡ ತಂಡ ಬುಧವಾರ ಸ್ಥಳ ಪರಿಶೀಲನೆ ನಡೆಸಿತು. ಮಳೆ ಬಂದರೆ ದೊಡ್ಡ…

ನಾಲ್ಕು ಕುರಿಗಳ ಕಳವು
ಮೈಸೂರು

ನಾಲ್ಕು ಕುರಿಗಳ ಕಳವು

August 2, 2018

ಮೈಸೂರು:  ಶೆಡ್‍ನಲ್ಲಿ ಕಟ್ಟಿದ್ದ ನಾಲ್ಕು ಕುರಿಗಳನ್ನು ಕಳವು ಮಾಡಿರುವ ಘಟನೆ ಶ್ರೀರಾಂಪುರ 2ನೇ ಹಂತದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಹದೇವಪುರ ನಿವಾಸಿ ರಾಮ್‍ಕುಮಾರ್ ಎಂಬುವರು ಸೋಮವಾರ ರಾತ್ರಿ ಹಳೆ ಮಾನಂದವಾಡಿ ರಸ್ತೆಯ ಶ್ರೀರಾಂಪುರದ ತಮ್ಮ ಶೆಡ್‍ನಲ್ಲಿ ಹಸು ಮತ್ತು ನಾಲ್ಕು ಕುರಿಗಳನ್ನು ಕಟ್ಟಿ, ಮಹದೇವಪುರದ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಬಂದು ಶೆಡ್ ತೆರೆದಾಗ ಕಟ್ಟಿದ್ದ ಕುರಿಗಳನ್ನು ಅಪರಿಚಿತರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರ್ವಿಸ್ ರಸ್ತೆಯಲ್ಲೇ ಅನಧಿಕೃತ ಮಳಿಗೆ ನಿರ್ಮಾಣ
ಮೈಸೂರು

ಸರ್ವಿಸ್ ರಸ್ತೆಯಲ್ಲೇ ಅನಧಿಕೃತ ಮಳಿಗೆ ನಿರ್ಮಾಣ

July 24, 2018

ಮೈಸೂರು: ಮೈಸೂರು ವಿವಿಯಿಂದ, ಕುದುರೆಮಾಳ, ಸರಸ್ವತಿಪುರಂ, ಶ್ರೀರಾಂಪುರ 2ನೇ ಹಂತದ ಮೂಲಕ ಮುಂದಕ್ಕೆ ಸಾಗುವ ಬೃಹತ್ ರಾಜಕಾಲುವೆಯ ಮಾರ್ಗದ ಮಧ್ಯದ ಕಿರಿದಾದ ಕಾಲುವೆಯನ್ನು ದುರಸ್ತಿ (ಕೃಷ್ಣಧಾಮದಿಂದ 353/ಎ ನಂಬರಿನ ಮನೆಯವರೆಗೆ) ಮಾಡಬೇಕೆಂದು ವಲಯ ಕಚೇರಿ-3ರ ಸಹಾಯಕ ಇಂಜಿನಿಯರ್ ನೀಡಿದ್ದ ವರದಿಯನ್ನು ತಿದ್ದಿದವರು ಯಾರು ಎಂದು ಸ್ಥಳೀಯ ನಿವಾಸಿಗಳು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಮೈಸೂರಿನ ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂ ಕೃಷ್ಣಧಾಮ ಮಂದಿರದ ಎದುರಿನ ಎಸ್‍ಬಿಐ ಪ್ರಾದೇಶಿಕ ಕಚೇರಿ ಪಕ್ಕದಲ್ಲಿನ ಸರ್ವಿಸ್ ರಸ್ತೆ ಮತ್ತೆ ಸಾರ್ವಜನಿಕರ ಕೈ ತಪ್ಪುವಂತಿದೆ….

ಶಾಸಕ ರಾಮದಾಸ್‍ರಿಂದ ಪಾದಯಾತ್ರೆ ಶ್ರೀರಾಮಪುರದಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ಭರವಸೆ
ಮೈಸೂರು

ಶಾಸಕ ರಾಮದಾಸ್‍ರಿಂದ ಪಾದಯಾತ್ರೆ ಶ್ರೀರಾಮಪುರದಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ಭರವಸೆ

June 23, 2018

ಮೈಸೂರು: ಮೈಸೂರಿನ ಕೆ.ಆರ್. ಕ್ಷೇತ್ರ ವ್ಯಾಪ್ತಿಯ ಪಾಲಿಕೆ 13ನೇ ವಾರ್ಡ್‍ನಲ್ಲಿ ಶುಕ್ರವಾರ ಶಾಸಕ ಎಸ್.ಎ.ರಾಮದಾಸ್, ಪಾದಯಾತ್ರೆ ನಡೆಸಿ ಸ್ಥಳೀಯರ ಅಹವಾಲು ಆಲಿಸಿದರಲ್ಲದೆ, ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಪಾದಯಾತ್ರೆ ಆರಂಭಿಸಿದ ಎಸ್.ಎ.ರಾಮದಾಸ್ ಅವರು 13ನೇ ವಾರ್ಡ್ ವ್ಯಾಪ್ತಿಗೆ ಬರುವ ಶ್ರೀರಾಮಪುರ ಬಡಾವಣೆಯಲ್ಲೂ ಅಹವಾಲು ಆಲಿಸಿದರು. ಈ ವೇಳೆ ರಸ್ತೆ, ಚರಂಡಿ, ಒಳಚರಂಡಿ, ಬೀದಿದೀಪ, ಕುಡಿಯುವ ನೀರಿನ ಅಸಮರ್ಪಕ ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ದೂರುಗಳು ಸಲ್ಲಿಕೆಯಾದವು….

Translate »