ನಾಲ್ಕು ಕುರಿಗಳ ಕಳವು
ಮೈಸೂರು

ನಾಲ್ಕು ಕುರಿಗಳ ಕಳವು

August 2, 2018

ಮೈಸೂರು:  ಶೆಡ್‍ನಲ್ಲಿ ಕಟ್ಟಿದ್ದ ನಾಲ್ಕು ಕುರಿಗಳನ್ನು ಕಳವು ಮಾಡಿರುವ ಘಟನೆ ಶ್ರೀರಾಂಪುರ 2ನೇ ಹಂತದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಹದೇವಪುರ ನಿವಾಸಿ ರಾಮ್‍ಕುಮಾರ್ ಎಂಬುವರು ಸೋಮವಾರ ರಾತ್ರಿ ಹಳೆ ಮಾನಂದವಾಡಿ ರಸ್ತೆಯ ಶ್ರೀರಾಂಪುರದ ತಮ್ಮ ಶೆಡ್‍ನಲ್ಲಿ ಹಸು ಮತ್ತು ನಾಲ್ಕು ಕುರಿಗಳನ್ನು ಕಟ್ಟಿ, ಮಹದೇವಪುರದ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಬಂದು ಶೆಡ್ ತೆರೆದಾಗ ಕಟ್ಟಿದ್ದ ಕುರಿಗಳನ್ನು ಅಪರಿಚಿತರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »