ಹಾಸಿಗೆ ಹಿಡಿದ ಅವಳಿ ಮಕ್ಕಳೊಂದಿಗೆ ವಿಧವೆ ಪರದಾಟ
ಕೊಡಗು

ಹಾಸಿಗೆ ಹಿಡಿದ ಅವಳಿ ಮಕ್ಕಳೊಂದಿಗೆ ವಿಧವೆ ಪರದಾಟ

August 2, 2018
  • ಅಪಘಾತದಲ್ಲಿ ಅಸುನೀಗಿದ ಪತಿ
  • ಜೀವನ ನಿರ್ವಹಣೆಗೆ ದಾರಿ ಕಾಣದೆ ಕಂಗಾಲು
  • ಮೈಸೂರು ರೋಟರಿ ಮಿಡ್‍ಟೌನ್‍ನಿಂದ ನೆರವು

ಮೈಸೂರು: ಇದು ವಿಧವೆ ತಾಯಿಯೊಬ್ಬಳ ಕರುಣಾಜನಕ ಹಾಗೂ ಕಲ್ಲು ಹೃದಯವನ್ನು ಕರಗಿಸುವಂತಹ ಚಿಂತಾಜನಕ ಕಥೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ವಿಧವೆಯೊಬ್ಬರು ತನ್ನ ಇಬ್ಬರು ಹಾಸಿಗೆ ಹಿಡಿದ ಅವಳಿ ಜವಳಿ ಹೆಣ್ಣು ಮಕ್ಕಳೊಂದಿಗೆ ಯಾವುದೇ ರೀತಿಯ ಆದಾಯವಿ ಲ್ಲದೆ ಜೀವನ ನಿರ್ವಹಣೆಗೆ ಪರಿಪಾಟಲು ಪಡುತ್ತಿರುವ ಮನಕರಗುವಂತಹ ಸ್ಥಿತಿ ಯಲ್ಲಿರುವುದು ವರದಿಯಾಗಿದೆ.

ಈಕೆಯ ಪತಿ, ಆಟೋ ಚಾಲಕನಾ ಗಿದ್ದು, ಕಳೆದ ಎರಡು ತಿಂಗಳ ಹಿಂದೆಯಷ್ಟೇ ನಡೆದ ಅಪಘಾತದಲ್ಲಿ ನಿಧನ ಹೊಂದಿದ್ದು, ಕುಟುಂಬದ ಊಟ ತಿಂಡಿ ನೋಡಿಕೊಳ್ಳಲು ಇದ್ದ ಒಂದೇ ಒಂದು ಆದಾಯವನ್ನು ಕಳೆದುಕೊಳ್ಳುವಂತಾ ಯಿತು ಎಂದು ವಿಧವೆ ತಾಯಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇಂತಹ ಹೃದಯ ವಿದ್ರಾವಕ ಘಟನೆ ಸೋಮವಾರಪೇಟೆ ತಾಲೂಕು ಹೊಸ ತೋಟದ ಒಂದು ಸಣ್ಣ ಗ್ರಾಮದಿಂದ ಬೆಳಕಿಗೆ ಬಂದಿದೆ. ಗಣೇಶ ಮತ್ತು ಪತ್ನಿ ಕೆ.ಟಿ. ಸವಿತಾ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಆಟೋ ಚಾಲನೆಯಿಂದ ಬಂದ ಆದಾಯದಿಂದ ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದರು.

ಗಣೇಶ್ ಮತ್ತು ಕೆ.ಟಿ.ಸವಿತಾ ದಂಪ ತಿಗೆ ಸುಮಾರು 10 ವರ್ಷಗಳ ಹಿಂದೆ ಮದುವೆಯಾಗಿತ್ತು. ಸವಿತಾ ಅವರು ಅವಳಿ ಜವಳಿ ಮಕ್ಕಳಿಗೆ ಗರ್ಭ ಧರಿಸಿದ್ದರು. ಅವರು ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಸಿಸೇರಿಯನ್ ಮೂಲಕ ಹಾಸನದ ಆಸ್ಪತ್ರೆಯಲ್ಲಿ ಜನ್ಮ ನೀಡಿದರು.

ಪ್ರಾರಂಭದಲ್ಲಿ ಗಣೇಶ ಮತ್ತು ಸವಿತಾ ದಂಪತಿಗಳಿಗೆ ಮಕ್ಕಳ ಬಗ್ಗೆ ಅನುಮಾನ ಬಂದಿತ್ತು. ಕಾರಣ ಈ ಮಕ್ಕಳು ಸಾಮಾನ್ಯ ಮಕ್ಕಳ ರೀತಿ ಅರಚುವುದಾಗಲಿ ಅಥವಾ ವರ್ತನೆಯೂ ಇರಲಿಲ್ಲ. ಕ್ರಮೇಣ ಮಕ್ಕಳು ಅಸಭ್ಯವಾಗಿ ವರ್ತಿಸುತ್ತಿದ್ದವು. ಇದರಿಂದಾಗಿ ದಂಪತಿ ಮಕ್ಕಳನ್ನು ಹಾಸನದ ವೈದ್ಯರ ಬಳಿ ಕರೆದೊಯ್ದಾಗ ಅವಳಿ ಪುತ್ರಿಯರಾದ ರಮ್ಯ ಮತ್ತು ರಶ್ಮಿ ಬುದ್ಧಿಮಾಂಧ್ಯರಾಗಿರುವುದು ತಿಳಿಯಿತು. ಈ ಮಕ್ಕಳು ಸಾಮಾನ್ಯ ಮಕ್ಕಳಂತೆ ಜೀವನ ನಡೆಸುವುದು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದರು.

ಗಣೇಶ ಮತ್ತು ಸವಿತಾ ತಜ್ಞ ವೈದ್ಯರ ಸಲಹೆ ಪಡೆಯಲು ನಿರ್ಧರಿಸಿ, ಮಕ್ಕಳನ್ನು ಬೆಂಗಳೂರಿಗೆ ಕರೆದೊಯ್ದರು. ಅಲ್ಲಿಯೂ ಕೂಡ ವೈದ್ಯರು ಖಾಯಂ ಆಗಿ ಮಕ್ಕಳಿಗೆ ಅಂಗವಿಕಲತೆ ಇರುವುದನ್ನು ಖಾತರಿಪಡಿಸಿ ದರು. ಅಂದಿನಿಂದ, ಮಕ್ಕಳು ಹಾಸಿಗೆ ಹಿಡಿ ದರು. ಹೊರಗೆ ಹೋಗಲು ಸಾಧ್ಯವಾಗದ ಸ್ಥಿತಿ ತಲುಪಿದರು. ನಿಜ ಹೇಳಬೇಕೆಂದರೆ ಅವರಿಗೆ ತಮ್ಮ ದೈನಂದಿನ ಕ್ರಿಯೆಗಳನ್ನು ಮಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಗಣೇಶ ಮತ್ತು ಸವಿತಾ ದಂಪತಿ ತಮ್ಮ ಅಂಗವಿಕಲ ಮಕ್ಕಳನ್ನು ಅಂಗವಿಕಲ ವಿದ್ಯಾರ್ಥಿ ನಿಲಯಕ್ಕೆ ಸೇರಿಸಲು ನಿರ್ಧ ರಿಸಿದರು. ಆದರೆ ಅಲ್ಲಿನ ಸಿಬ್ಬಂದಿ ಮಕ್ಕಳು ಕನಿಷ್ಠ ಪಕ್ಷ ನಡೆದಾಡಿದರೆ ಮತ್ತು ಸ್ಪಂದಿಸಿ ದರೆ ಮಾತ್ರ ಸೇರಿಸಿಕೊಳ್ಳುವುದಾಗಿ ತಿಳಿಸಿದರು.

ವೈದ್ಯರು ಇಬ್ಬರು ಮಕ್ಕಳು ಖಾಯಂ ಅಂಗವಿಕಲತೆ ಬಳಲುತ್ತಿದ್ದಾರೆ ಎಂದು ಹೇಳಿ ದ್ದರೂ, ಈ ಇಬ್ಬರಲ್ಲಿ ಒಬ್ಬಳು ಮಾತನಾಡ ಬಲ್ಲಳು. ಈ ದಂಪತಿಗಳಿಗೆ ಕೆಲವು ವರ್ಷಗಳ ನಂತರ ಮತ್ತೊಂದು ಹೆಣ್ಣು ಮಗು ಜನಿಸಿತು. ಈಗ ಆ ಮಗುವಿಗೆ 8 ವರ್ಷವಾಗಿದ್ದು, ಮೂರನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಗಣೇಶ ಅವರು ತಮ್ಮ ಎಲ್ಲಾ ಮಕ್ಕಳನ್ನು ಒಂದೇ ರೀತಿಯಾಗಿ ನೋಡಿಕೊಳ್ಳುತ್ತಿದ್ದರು. ಪ್ರತಿದಿನ ಮಕ್ಕಳಿಗೆ ಹಣ್ಣು ಮತ್ತು ಚಾಕೋ ಲೇಟ್ ನೀಡುತ್ತಿದ್ದರು. ದಂಪತಿ ಕಿರಿಯ ಮಗಳು ಭೂಮಿಕಾ ಶಾಲೆಗೆ ಹೋಗು ತ್ತಿದ್ದು, ಸವಿತಾ ದಿನವಿಡೀ ಮಕ್ಕಳ ಪೋಷ ಣೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ವಾಸಿಸುವಂತಾಗಿದೆ.

ಗಣೇಶನ ಆದಾಯದಿಂದ ಹೇಗೋ ಜೀವನ ನಿರ್ವಹಣೆ ನಡೆಯುತ್ತಿತ್ತು. ಗಣೇಶ ಈ ವರ್ಷ ಮೇ 31 ರಂದು ವೇಗವಾಗಿ ಬಂದ ಬೋಲೇರೋ ವಾಹನ ಆಟೋಗೆ ಮುಖಾಮುಖಿ ಡಿಕ್ಕಿಯಾಗಿ ತೀವ್ರ ಗಾಯ ಗೊಂಡರು. ಅತೀ ರಕ್ತಸ್ರಾವಗೊಂಡಿದ್ದ ಅವರನ್ನು ಆಸ್ಪತ್ರೆ ಸೇರಿಸಲಾಯಿತಾದರೂ ಬಳಿಕ ಅವರು ಸಾವನ್ನಪ್ಪಿದರು. ಸವಿತಾ ತನ್ನ ಮೂವರು ಮಕ್ಕಳೊಂದಿಗೆ ಯಾವುದೇ ಆದಾಯವಿಲ್ಲದೆ ಜೀವನ ದುಸ್ತರವಾಯಿತು. ಮೂರು ಹೊತ್ತಿನ ಊಟಕ್ಕೆ ಕಷ್ಟಪಡುವಂತಾಯಿತು. ಇದರ ಮಧ್ಯೆ ತಾನು ವಾಸಿಸುತ್ತಿರುವ ಮನೆ ದುಸ್ಥಿತಿಯಲ್ಲಿದ್ದು, ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತದೆ.

ಸವಿತಾಳಿಗೆ ಮಕ್ಕಳನ್ನು ಬಿಟ್ಟು ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ನೋಡಿದ ಗಣೇಶನ ಸ್ನೇಹಿತರು ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚುವ ಮೂಲಕ ಸಹಾಯ ಹಸ್ತ ಬೇಡಿದರು. ಕೊಡಗು ಜಿಲ್ಲಾಡಳಿತ ಮತ್ತು ಸರ್ಕಾರ ಮಧ್ಯೆ ಪ್ರವೇಶಿಸಿ ಈ ಕುಟುಂಬದ ಜೀವನೋಪಾಯಕ್ಕೆ ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ಗಣೇಶನ ಸ್ನೇಹಿತರು ಇಟ್ಟುಕೊಂಡಿದ್ದಾರೆ.

KT Savitha
Account No: 125801011001617,
Vijaya Bank, Aigoor Branch
IFSC Code: VIJB0001258

ರೋಟರಿಯಿಂದ ಸಹಾಯ: ರೋಟರಿ ಮೈಸೂರ್ ಮಿಡ್‍ಟೌನ್‍ನ ಕೆಲವು ಸದಸ್ಯರು ಇತ್ತೀಚೆಗೆ ಸೋಮವಾರಪೇಟೆಯಲ್ಲಿರುವ ಸವಿತಾ ನಿವಾಸಕ್ಕೆ ಭೇಟಿ ನೀಡಿ ತಕ್ಷಣದ ಅಗತ್ಯಗಳನ್ನು ನೀಗಿಸಲು 25,000 ರೂ.ಗಳ ಚೆಕ್ ಅನ್ನು ನೀಡಿದರು. ಇದಲ್ಲದೆ, ಮೈಸೂರಿನ ಕಾಂಪುಟೆಕ್ ಸಂಸ್ಥೆಯ ಪ್ರದೀಪ್ 5,000 ರೂ.ಗಳನ್ನು ನೀಡಿದ್ದಾರೆ. ರೋ. ರಾಜು ಬಾಳಿಗ ಅವರು ಅವಳಿ ಮಕ್ಕಳಿಗೆ ಮೈಸೂರಿನ ವಿಶೇಷ ಮಕ್ಕಳ ಶಾಲೆಯಲ್ಲಿ ಪ್ರವೇಶಾತಿ ಕಲ್ಪಿಸುವು ದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಮಕ್ಕಳ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾತಿಗಳನ್ನು ನೀಡುವಂತೆ ಸವಿತಾ ಅವರಿಗೆ ಹೇಳಿದ್ದಾರೆ.

ಸೋಮವಾರಪೇಟೆಯ ಸಂದೀಪಾನಿ ಶಾಲೆಯನ್ನು ನಡೆಸುತ್ತಿರುವ ರೋ. ಲಿಕಿತ್ ದಾಮೋದರ್ ಅವರು ತಮ್ಮ ಶಾಲೆಯಲ್ಲೇ ವ್ಯಾಸಂಗ ಮಾಡುತ್ತಿರುವ ಭೂಮಿಕಾಳ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಒಪ್ಪಿ ಕೊಂಡಿದ್ದಾರೆ. ಈ ವೇಳೆ ರೋಟರಿ ಮಿಡ್ ಟೌನ್‍ನ ಇತರ ಸದಸ್ಯರಾದ ಎ.ಎನ್. ಅಯ್ಯಣ್ಣ ಮತ್ತು ಸಂಜಯ್, ಸೋಮ ವಾರಪೇಟೆ ರೋಟರಿ ಕ್ಲಬ್ ಸದಸ್ಯರಾದ ಭರತ್ ಭೀಮಯ್ಯ, ಮೋಹನ್ ರಾಮ್, ಪ್ರಕಾಶ್ ಮತ್ತು ನಾಗೇಶ್ ಹಾಜರಿದ್ದರು.

Translate »