ಮೈಸೂರು ವಿಜಯನಗರದಲ್ಲಿ ಮುಡಾದಿಂದ ಒತ್ತುವರಿ ತೆರವು
ಮೈಸೂರು

ಮೈಸೂರು ವಿಜಯನಗರದಲ್ಲಿ ಮುಡಾದಿಂದ ಒತ್ತುವರಿ ತೆರವು

June 13, 2019

ಮೈಸೂರು: ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಖಾಲಿ ಜಾಗದಲ್ಲಿ ಅನಧಿ ಕೃತವಾಗಿ ನಿರ್ಮಿಸಿದ್ದ ಕಾಂಪೌಂಡ್ ಮತ್ತು ಶೆಡ್ ಅನ್ನು ಇಂದು ಬೆಳಿಗ್ಗೆ ಮುಡಾ ಅಧಿಕಾರಿಗಳು ತೆರವುಗೊಳಿಸಿದರು.

80 ಅಡಿ ರಸ್ತೆಯಲ್ಲಿ ಮುಡಾಗೆ ಸೇರಿದ ಜಾಗದಲ್ಲಿ ಕೆಲ ವ್ಯಕ್ತಿಗಳು ಕಾಂಪೌಂಡ್ ಕಟ್ಟಿಕೊಂಡು ಅಲ್ಲಿ ಶೆಡ್ ನಿರ್ಮಿಸಿ ಕೊಂಡಿದ್ದರು. ಹಲವು ಭಾರಿ ನೋಟೀಸ್ ನೀಡಿದರೂ ತೆರವುಗೊಳಿಸಿರಲಿಲ್ಲ. ಸದರಿ ಜಾಗವನ್ನು ವಕೀಲರೊಬ್ಬರಿಗೆ ಮಂಜೂರು ಮಾಡಲಾಗಿತ್ತಾದರೂ, ಅವರಿಗೆ ಅವಕಾಶ ಕೊಡದೆ ತೊಂದರೆ ಕೊಡು ತ್ತಿದ್ದರು ಎಂದು ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ತಿಳಿಸಿದರು.

ಇಂದು ಬೆಳಿಗ್ಗೆ ಪೊಲೀಸ್ ಭದ್ರತೆ ಯೊಂದಿಗೆ ತೆರಳಿ ಜೆಸಿಬಿ ಮೂಲಕ ಕಾಂಪೌಂಡ್ ಮತ್ತು ಶೆಡ್ ಅನ್ನು ನೆಲ ಸಮಗೊಳಿಸಿ ಒತ್ತುವರಿ ತೆರವುಗೊಳಿಸ ಲಾಯಿತು. ಕಾರ್ಯಾಚರಣೆ ವೇಳೆ ತಾವು ಭೂಮಿ ಕಳೆದುಕೊಂಡವರೆಂದು ಹೇಳಿಕೊಂಡು ಕೆಲವರು ಬಂದು ವಾಗ್ವಾದ ಮಾಡಿದರಾದರೂ, ದಾಖಲಾತಿಗಳಿಲ್ಲದ ಕಾರಣ ಅವರಿಗೆ ಅದು ಮುಡಾ ಸ್ವತ್ತು ಎಂಬುದು ಅರಿವಾಯಿತು ಎಂದು ಆಯು ಕ್ತರು ತಿಳಿಸಿದರು. ಸುಮಾರು 5 ಗುಂಟೆ ಇರುವ ಮುಡಾ ಜಾಗಕ್ಕೆ ತಕ್ಷಣವೇ ತಂತಿಬೇಲಿ ಹಾಕಿಸಿ ಸೂಚನಾ ಫಲಕ ಅಳ ವಡಿಸಿ ಪ್ರಾಧಿಕಾರದ ಸ್ವತ್ತನ್ನು ರಕ್ಷಿಸುತ್ತೇವೆ ಎಂದೂ ಕಾಂತರಾಜ್ ತಿಳಿಸಿದರು. ಮುಡಾ ವಲಯಾಧಿಕಾರಿ ಸುರೇಶ್‍ಬಾಬು, ಅಸಿ ಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಜೋಷಿ ಸೇರಿದಂತೆ ಹಲವರು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯನಗರ ಠಾಣೆ ಪ್ರಭಾರ ಇನ್ಸ್‍ಪೆಕ್ಟರ್ ಸುರೇಶ್‍ಕುಮಾರ್ ನೇತೃತ್ವ ದಲ್ಲಿ 25 ಮಂದಿ ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿತ್ತು.

 

 

Translate »