ಮೈಸೂರು

ಮೈಸೂರು ಬ್ರಾಹ್ಮಣ ಸಂಘದಿಂದ ಸಂಸದ ಪ್ರತಾಪ್ ಸಿಂಹರಿಗೆ ಅಭಿನಂದನೆ
ಮೈಸೂರು

ಮೈಸೂರು ಬ್ರಾಹ್ಮಣ ಸಂಘದಿಂದ ಸಂಸದ ಪ್ರತಾಪ್ ಸಿಂಹರಿಗೆ ಅಭಿನಂದನೆ

May 30, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪುನ ರಾಯ್ಕೆಯಾದ ಸಂಸದ ಪ್ರತಾಪ್ ಸಿಂಹ ಅವರನ್ನು ಮೈಸೂರು ಬ್ರಾಹ್ಮಣ ಸಂಘದ ವತಿಯಿಂದ ಅಭಿನಂದಿಸಲಾಯಿತು. ಮೈಸೂರಿನ ವಿಜಯನಗರದ ನಿವಾ ಸಕ್ಕೆ, ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ಭೇಟಿ ನೀಡಿದ ಪದಾಧಿಕಾರಿ ಗಳು ಸಂಸದ ಪ್ರತಾಪ್ ಸಿಂಹ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಡಿ.ಟಿ.ಪ್ರಕಾಶ್, ಮೈಸೂರಿನ ಅಭಿವೃದ್ಧಿ ನಿಟ್ಟಿನಲ್ಲಿ ಬಹಳಷ್ಟು ಯೋಜನೆಗಳನ್ನು ತಂದಿದ್ದಾರೆ. ನೂತನ ರೈಲು ಸಂಚಾರ, ವಿಮಾನಯಾನ ಸೇವೆ ವಿಸ್ತರಣೆಯಿಂದ ಪ್ರವಾಸೋದ್ಯಮಕ್ಕೆ ಸಹ ಕಾರಿಯಾಗಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳಿಗೆ ಕೇಂದ್ರ…

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಪಂ ನೌಕರರ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಪಂ ನೌಕರರ ಪ್ರತಿಭಟನೆ

May 30, 2019

ಮೈಸೂರು: ಬಾಕಿ ಇರುವ ವೇತನ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಸದಸ್ಯರು ಮೈಸೂರಿನಲ್ಲಿ ಬುಧವಾರ ಬೃಹತ್ ಪ್ರತಿ ಭಟನಾ ಮೆರವಣಿಗೆ ನಡೆಸಿದರು. ಮೈಸೂರಿನ ಗನ್‍ಹೌಸ್ ವೃತ್ತದಿಂದ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಗ್ರಾ.ಪಂ ನೌಕರರು ಚಾಮರಾಜ ಜೋಡಿ ರಸ್ತೆ, ರಾಮ ಸ್ವಾಮಿ ವೃತ್ತದ ಮೂಲಕ ಜಿ.ಪಂ ಕಚೇರಿಗೆ ತೆರಳಿ ಕೆಲಕಾಲ ಧರಣಿ ನಡೆಸಿ, ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ 61 ಸಾವಿರ ಗ್ರಾ.ಪಂ…

ಮೈಸೂರಲ್ಲಿ ನಾಯಕ ಸಂಘ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ನಾಯಕ ಸಂಘ ಪ್ರತಿಭಟನೆ

May 30, 2019

ಮೈಸೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೋಲನುಭವಿಸಿದ ಹಿನ್ನೆಲೆಯಲ್ಲಿ ನಾಯಕ ಸಮು ದಾಯ ಹಿರಿಯ ಮುಖಂಡರಾದ ಕೆ.ಎನ್.ರಾಜಣ್ಣ ಅಧ್ಯಕ್ಷರಾಗಿರುವ ಅಪೆಕ್ಸ್ ಬ್ಯಾಂಕ್ ಸೂಪರ್ ಸೀಡ್ ಮಾಡಿ ಸೇಡು ತೀರಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಮೈಸೂರು ನಾಯಕ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದ ನಾಯಕ ಸಮುದಾಯ ಸದಸ್ಯರು, ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ…

ಕುಕ್ಕರಹಳ್ಳಿ ಕೆರೆಯಲ್ಲಿ ಹಂದಿ ಬೇಟೆ
ಮೈಸೂರು

ಕುಕ್ಕರಹಳ್ಳಿ ಕೆರೆಯಲ್ಲಿ ಹಂದಿ ಬೇಟೆ

May 30, 2019

ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಹಲವು ವಾಯು ವಿಹಾರಿಗಳ ಸಮ್ಮುಖದಲ್ಲಿಯೇ ನಾಲ್ವರು ಯುವಕರ ತಂಡವೊಂದು ಹಂದಿಯೊಂದನ್ನು ಹಿಡಿದು ಡೋಲಿಯಲ್ಲಿ ಹೊತ್ತೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳ ವಾರ ಸಂಜೆ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಹಲವಾರು ಮಂದಿ ವಾಯುವಿಹಾರ ಮಾಡುತ್ತಿ ರುವ ಸಂದರ್ಭದಲ್ಲಿಯೇ ನಾಲ್ವರು ಯುವಕರು ಕೆರೆ ಆವರಣದಿಂದ ದೊಡ್ಡ ಗಾತ್ರದ ಹಂದಿ ಯೊಂದನ್ನು ಹಿಡಿದು ಬೊಂಬನ್ನು ಬಳಸಿ ಡೋಲಿ ಮಾಡಿಕೊಂಡು ಹೊತ್ತೊಯ್ದಿದ್ದಾರೆ. ಅನಿರೀಕ್ಷಿತವಾಗಿ ಹಂದಿಯೊಂದಿಗೆ ಎದುರಾದ ಯುವಕ ರನ್ನು ವಾಯುವಿಹಾರಿಗಳು ಗಮನಿಸಿದ್ದರಾದರೂ ಪ್ರಶ್ನೆ ಮಾಡದೆ…

ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ.. ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ…
ಮೈಸೂರು

ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ.. ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ…

May 30, 2019

ಮೈಸೂರು: ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ, ಛಲ ಬೇಕು ಶರಣಂಗೆ ಪರಸತಿಯನೊಲ್ಲೆ ನೆಂಬ, ಛಲ ಬೇಕು ಶರಣಂಗೆ ಪರದೈವನೊಲ್ಲೆನೆಂಬ, ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೇ ಎಂಬ, ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ, ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮದೇವ. ಇವನಾರವ.. ಇವನಾರವ, ಇವ ನಮ್ಮವ.. ಇವ ನಮ್ಮವ. ಬಸವಣ್ಣನವರ ಈ ಸಿದ್ಧಾಂತವನ್ನು ನೀವು ಒಪ್ಪಿದ್ದರೆ ಬಸವ ಜಯಂತಿ ಆಚರಿಸಿ, ಇಲ್ಲವಾದರೆ ಅದಕ್ಕೆ ವಿರುದ್ಧವಾಗಿ ಬಸವ ಜಯಂತಿ ಆಚರಿಸಿ, ಅವರಿಗೆ ಅಪಮಾನ ಮಾಡ ಬೇಡಿ. ಬಸವ…

ಸಂಚಾರ ಪೊಲೀಸರಿಗೆ ವಿನೂತನ ಮಾಸ್ಕ್
ಮೈಸೂರು

ಸಂಚಾರ ಪೊಲೀಸರಿಗೆ ವಿನೂತನ ಮಾಸ್ಕ್

May 30, 2019

ಮೈಸೂರು: ಸರ್ಕಲ್‍ಗಳು, ಜಂಕ್ಷನ್‍ಗಳು ಹಾಗೂ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮೈಸೂರಿನ ಸಂಚಾರ ಠಾಣೆಗಳ ಪೊಲೀಸ್ ಸಿಬ್ಬಂದಿಗೆ ಧೂಳು, ವಾಯುಮಾಲಿನ್ಯದಿಂದ ಪಾರು ಮಾಡಲು ವಿನೂತನ ಮಾದರಿಯ ಉಸಿರಾಟದ ಮಾಸ್ಕ್‍ಗಳನ್ನು ವಿತರಿಸಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಗೆ ಎರಡರಂತೆ ಮೈಸೂರು ನಗರದ ಎಲ್ಲಾ 5 ಸಂಚಾರ ಠಾಣೆಗಳ 350 ಸಿಬ್ಬಂದಿಗೂ ಉಸಿರಾಟದ ಮಾಸ್ಕ್ (ಖesಠಿiಡಿಚಿಣಚಿಡಿಥಿ ಒಚಿsಞ)ಗಳನ್ನು ಪೊಲೀಸ್ ಇಲಾಖೆಯು ನೀಡಿದೆ. ಈ ಹೊಸ ಮಾಸ್ಕ್‍ಗಳು ಬೂದು ಬಣ್ಣದ್ದಾಗಿದ್ದು, ಬಲು ಬೇಗ ಕೊಳೆ ಆಗುವು ದಿಲ್ಲ ಹಾಗೂ ಮೂಗು ಮತ್ತು ಬಾಯಿಗೆ ಧೂಳಿನಿಂದ ಸಂಪೂರ್ಣ…

ಮೈಸೂರಿನಲ್ಲಿ ಹಸಿರು ಸೇನೆ, ಕನ್ನಡ ವೇದಿಕೆಯಿಂದಲೂ ಪ್ರತಿಭಟನೆ
ಮೈಸೂರು

ಮೈಸೂರಿನಲ್ಲಿ ಹಸಿರು ಸೇನೆ, ಕನ್ನಡ ವೇದಿಕೆಯಿಂದಲೂ ಪ್ರತಿಭಟನೆ

May 30, 2019

ಮೈಸೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಕೆಆರ್‍ಎಸ್ ಜಲಾಶಯ ದಿಂದ 9.19 ಟಿಎಂಸಿ ನೀರು ಬಿಡಲು ಆದೇಶಿರುವುದನ್ನು ಖಂಡಿಸಿ ಮೈಸೂರಿ ನಲ್ಲಿ ಬುಧವಾರ ರಾಜ್ಯ ರೈತಸಂಘ ಹಾಗೂ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ರೈತಸಂಘ ಹಾಗೂ ಹಸಿರು ಸೇನೆ: ಮೈಸೂರಿನ ನ್ಯಾಯಾಲಯದ ಮುಂದೆ ಇರುವ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾವೇರಿ ನೀರು ನಿರ್ವಹಣಾ…

ರೈಲಿಗೆ ಸಿಲುಕಿ ಮೊಟ್ಟೆ ವ್ಯಾಪಾರಿ ಮಹಿಳೆ ಸಾವು
ಮೈಸೂರು

ರೈಲಿಗೆ ಸಿಲುಕಿ ಮೊಟ್ಟೆ ವ್ಯಾಪಾರಿ ಮಹಿಳೆ ಸಾವು

May 30, 2019

ಮೈಸೂರು: ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ನಾಟಿಕೋಳಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಬುಧವಾರ ಮೈಸೂರಿನ ಜೆ.ಪಿ.ನಗರದ ಬಳಿ ನಡೆದಿದೆ. ಮೈಸೂರು ತಾಲೂಕು ಹೊಸಹುಂಡಿ (ಕೆಂಪೇಗೌಡನಹುಂಡಿ) ಗ್ರಾಮದ ನಿವಾಸಿ ಲೇಟ್ ಸಿದ್ದೇಗೌಡರ ಪತ್ನಿ ಸಣ್ಣಮ್ಮ(65) ಎಂಬುವರೆ ರೈಲಿಗೆ ಸಿಲುಕಿ ಮೃತಪಟ್ಟವರು. ಸಣ್ಣಮ್ಮ ಪ್ರತಿದಿನ ನಾಟಿಕೋಳಿ ಮೊಟ್ಟೆಯನ್ನು ಮೈಸೂರಿನ ಜೆ.ಪಿ. ನಗರ, ಶ್ರೀರಾಮಪುರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಮಾರಾಟ ಮಾಡುತ್ತಿದ್ದರು. ಎಂದಿನಂತೆ ಬುಧವಾರ ಬೆಳಿಗ್ಗೆ 6 ಗಂಟೆಗೆ ಹೊಸಹುಂಡಿಯಿಂದ ಮೈಸೂರಿಗೆ ಮೊಟ್ಟೆ…

ಜಿಂದಾಲ್‍ಗೆ ಭೂಮಿ ನೀಡುವುದರ ವಿರುದ್ಧ ವಾಟಾಳ್ ಪ್ರತಿಭಟನೆ
ಮೈಸೂರು

ಜಿಂದಾಲ್‍ಗೆ ಭೂಮಿ ನೀಡುವುದರ ವಿರುದ್ಧ ವಾಟಾಳ್ ಪ್ರತಿಭಟನೆ

May 30, 2019

ಮೈಸೂರು: ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ ಸರ್ಕಾರ 3,666 ಎಕರೆ ಭೂಮಿ ಪರಭಾರೆ ಮಾಡಲು ಮುಂದಾಗಿರುವು ದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ರೈಲ್ವೆ ನಿಲ್ದಾಣದ ಮುಖ್ಯ ದ್ವಾರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಅಂಗಾತ ಮಲಗಿ ಸರ್ಕಾ ರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ರಾಜ್ಯ ಸರ್ಕಾರದ ನೀತಿಯಿಂ ದಾಗಿ ರಾಜ್ಯ…

ಕಳೆಯಿತು ಬೇಸಿಗೆ ಮರಳಿದವು ಮಕ್ಕಳು ಶಾಲೆಗೆ
ಮೈಸೂರು

ಕಳೆಯಿತು ಬೇಸಿಗೆ ಮರಳಿದವು ಮಕ್ಕಳು ಶಾಲೆಗೆ

May 30, 2019

ಮೈಸೂರು: ಇಂದಿನಿಂದ ಪ್ರಾಥ ಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿದ್ದು, ಬೇಸಿಗೆ ರಜೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮುಳುಗಿದ್ದ ಮಕ್ಕ ಳೀಗ ತಮ್ಮ ಶಾಲೆಗಳತ್ತ ಮರಳಿದ್ದಾರೆ. ಎರಡು ತಿಂಗಳಿಂದ ರಜೆಯ ಸಂಭ್ರಮದಲ್ಲಿ ಕಾಲ ಕಳೆದಿದ್ದ ಮಕ್ಕಳೀಗ ಮಣ ಭಾರದ ಬ್ಯಾಗ್‍ಗಳನ್ನು ಹೊತ್ತು ಶಾಲೆಗಳತ್ತ ಮುಖ ಮಾಡಿದರು. ಸರ್ಕಾರಿ, ಅನುದಾನಿತ, ಖಾಸಗಿ, ಸಮಾಜ ಕಲ್ಯಾಣ ಹಾಗೂ ಕೇಂದ್ರೀಯ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 3,457 (ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿಯಂತೆ) ಶಾಲೆಗಳಿದ್ದು, ಬುಧವಾರದಿಂದ ಈ ಶಾಲೆಗಳಲ್ಲಿ…

1 969 970 971 972 973 1,611
Translate »