ಮೈಸೂರು: ವಾಸ್ತ ವತೆಯಿಂದ ದೂರ ಉಳಿದು ಭ್ರಮೆ ಹಾಗೂ ಅರ್ಥವಿಲ್ಲದ ನಂಬಿಕೆಗಳೊಂದಿಗೆ ಬಳ ಲುವ ಲಕ್ಷಣವುಳ್ಳ `ಸ್ಕಿಜೋಫ್ರೀನಿಯಾ (ಛಿದ್ರ ಮನಸ್ಕತೆ)’ ಮಾನಸಿಕ ಕಾಯಿಲೆ ಕುರಿತಂತೆ ಗುರುವಾರ ಜಾಗೃತಿ ಜಾಥಾ ನಡೆಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯ ಕ್ರಮ ವಿಭಾಗ, ಕಾವೇರಿ ನರ್ಸಿಂಗ್ ಶಾಲೆ ಮತ್ತು ಕಾಲೇಜು ಹಾಗೂ ಶಾಂತವೇರಿ ಗೋಪಾಲಗೌಡ ನರ್ಸಿಂಗ್ ಶಾಲೆ ಮತ್ತು ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಜಾಥಾದಲ್ಲಿ `ಸ್ಕಿಜೋಫ್ರೀನಿಯಾ’ ಮಾನ ಸಿಕ ಕಾಯಿಲೆಗೆ…
ಶ್ರೀರಾಂಪುರ ಈಗ `ಕಸದ ಪುರ’!
May 31, 2019ಮೈಸೂರು: ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಹಾಗೂ ಪರಸಯ್ಯನ ಹುಂಡಿ ಗ್ರಾಮಗಳಲ್ಲಿ ಕಸದ ರಾಶಿ ಬಿದ್ದಿ ದ್ದರೂ ವಿಲೇವಾರಿ ಮಾಡದೇ ನಿರ್ಲಕ್ಷ್ಯ ಮಾಡಲಾಗಿದೆ. ಈ ತ್ಯಾಜ್ಯದಲ್ಲಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಕಸವೇ ಬಹು ತೇಕ ಇದ್ದು, ಹೀಗಿದ್ದರೂ ಸ್ಥಳೀಯ ಆಡಳಿತ ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದೆ. ಈ ಗ್ರಾಮಗಳ ರಸ್ತೆಬದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಮಳೆ ನೀರಿನೊಂದಿಗೆ ಅನೈ ರ್ಮಲ್ಯ ತಾಂಡವವಾಡುತ್ತಿದೆ. ಇದರಿಂದ ರೋಗ-ರುಜಿನ ಹರಡುವ ಭೀತಿಯೂ ಎದುರಾಗಿದೆ. ಹೀಗಿದ್ದರೂ ಸಂಬಂಧಿಸಿ ದವರು ವಿಲೇವಾರಿಗೆ ಮುಂದಾಗುತ್ತಿಲ್ಲ…
ಮಂಡ್ಯದಲ್ಲಿ ಗೆದ್ದದ್ದು ಹಣವಲ್ಲ ಸ್ವಾಭಿಮಾನ
May 30, 2019ಮಂಡ್ಯ:ಮಂಡ್ಯದ ಚುನಾವಣೆಯನ್ನು ಇಡೀ ಇಂಡಿಯಾವೇ ಎದುರು ನೋಡುತ್ತಿತ್ತು. ಇಲ್ಲಿ ಗೆದ್ದದ್ದು ಹಣವಲ್ಲ, ಸ್ವಾಭಿಮಾನ ಎಂಬುದನ್ನು ಮಂಡ್ಯದ ಜನರು ಇಂಡಿಯಾಗೆ ತೋರಿಸಿದ್ದಾರೆ ಎಂದು ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಇಂದಿಲ್ಲಿ ಹೇಳಿದರು. ಇಲ್ಲಿನ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಇಂದು ಏರ್ಪ ಡಿಸಲಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ ಹಾಗೂ ಮತದಾರರಿಗೆ ಕೃತಜ್ಞತಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾಭಿಮಾನದ ಮಂಡ್ಯ ಜನತೆಗೆ ಅನಂತ ಕೋಟಿ ವಂದನೆ ಎಂದು ಮಾತು ಪ್ರಾರಂಭಿಸಿದ ಸುಮಲತಾ, ನಾನು ದೆಹಲಿಗೆ ಹೋಗಿ ಪ್ರಮಾಣ…
ಎರಡನೇ ಬಾರಿಗೆ ಪ್ರಧಾನಿಯಾಗಿ ಮೋದಿ ಇಂದು ಪ್ರಮಾಣ ವಚನ
May 30, 2019ನವದೆಹಲಿ: ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗುವ ಕ್ಷಣಕ್ಕೆ ಸಾಕ್ಷಿ ಯಾಗಲು ರಾಷ್ಟ್ರಪತಿ ಭವನ ಸಜ್ಜಾಗಿದೆ. ರಾಷ್ಟ್ರಪತಿ ಭವನದ ಹೊರಾಂಗಣದಲ್ಲಿ ಮೋದಿ ದೇಶದ ಪ್ರಧಾನಿಯಾಗಿ ನಾಳೆ ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ರೀತಿ ಹೊರಾಂಗಣ ದಲ್ಲಿ ಪ್ರಮಾಣ ಸ್ವೀಕರಿಸುತ್ತಿರುವ ಮೂರನೇ ಪ್ರಧಾನಿ ಎಂಬ ಗರಿಮೆಗೆ ಮೋದಿ ಪಾತ್ರರಾಗುತ್ತಿದ್ದಾರೆ. ಮೊದಲು ನೆಹರು, ಚಂದ್ರಶೇಖರ್ ರಾಷ್ಟ್ರಪತಿ ಭವನದ ಹೊರಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಾಮಾನ್ಯವಾಗಿ ಪ್ರಧಾನಮಂತ್ರಿಗಳ ಪ್ರಮಾಣ ವಚನ ದರ್ಬಾರ್ ಹಾಲ್‍ನಲ್ಲಿ ನಡೆಯು ತ್ತದೆ….
ಶಾಸಕರು, ಮುಖಂಡರೊಂದಿಗೆ ಚರ್ಚಿಸಿದ ನಂತರವೇ ಸಂಪುಟ ವಿಸ್ತರಣೆ ಇಲ್ಲವೇ ಪುನರ್ರಚನೆ
May 30, 2019ಬೆಂಗಳೂರು: ಪಕ್ಷದ ಶಾಸಕರು, ಮುಖಂಡರ ಜೊತೆ ಸಮಾಲೋಚನೆ ನಡೆಸಿದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆಯ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಸಮ್ಮುಖದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಒಂದು ವೇಳೆ ಅಗತ್ಯ ಕಂಡುಬಂದರೆ ಕಾಮರಾಜ್ ಸೂತ್ರ ಅನುಸರಿಸಲೂ ಹಿಂಜರಿಯ ಬಾರದು, ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹಾಗೂ…
ಚುನಾವಣಾ ರಾಜಕೀಯಕ್ಕೆ ಗುಡ್‍ಬೈ ಹೇಳಲು ಸಿದ್ದರಾಮಯ್ಯ ಚಿಂತನೆ
May 30, 2019ಬೆಂಗಳೂರು: ಇತ್ತೀಚಿನ ರಾಷ್ಟ್ರ ಮಟ್ಟದ ರಾಜಕೀಯ ವಿದ್ಯಮಾನದಲ್ಲಿ ರಾಜಕಾರಣ ಮಾಡುವುದು ಕಷ್ಟ ಎಂಬ ನಿಲುವಿಗೆ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ರಾಜಕೀಯಕ್ಕೆ ಗುಡ್‍ಬೈ ಹೇಳಲು ಚಿಂತನೆ ನಡೆಸಿದ್ದಾರೆ. ರಾಜ್ಯ ವಿಧಾನಸಭೆಗೆ ನಾಲ್ಕು ವರ್ಷಗಳ ನಂತರ ಚುನಾವಣೆ ಬಂದರೂ ಒಂದೇ, ಮಧ್ಯಂತರ ಚುನಾವಣೆ ಬಂದರೂ ಒಂದೇ, ಚುನಾವಣಾ ರಾಜಕೀಯದಲ್ಲಿ ನನಗೆ ಆಸಕ್ತಿ ಉಳಿದಿಲ್ಲ ಎಂದು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ. ಪ್ರಸಕ್ತ ವಿಧಾನಸಭೆಯ ಅವಧಿ ಮುಗಿದ ಕೂಡಲೇ ಚುನಾ ವಣಾ ರಾಜಕೀಯದಿಂದ ಹಿಂದೆ ಸರಿಯು ತ್ತೇನೆ, ಸೈದ್ಧಾಂತಿಕ…
ಶೂಟೌಟ್ ಪ್ರಕರಣ: ಸದ್ಯದಲ್ಲೇ ಸರ್ಕಾರಕ್ಕೆ ಸಿಐಡಿ ತಂಡ ವರದಿ
May 30, 2019ಮೈಸೂರು: ಮೇ 16ರಂದು ಮೈಸೂರಲ್ಲಿ ನಡೆದ ಶೂಟೌಟ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಸದ್ಯದಲ್ಲೇ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದ್ದಾರೆ. ಶೂಟೌಟ್‍ನಲ್ಲಿ ಪಂಜಾಬ್ ಮೂಲದ ಸುಕ್ವಿಂ ದರ್ ಸಿಂಗ್ ಸಾವಿಗೀಡಾಗಿದ್ದ. ವಿಜಯನಗರ ಠಾಣೆಯ ಮಾಜಿ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಶೂಟೌಟ್ ಮಾಡಿದ್ದರು. ಇನ್ಸ್‍ಪೆಕ್ಟರ್ ಸೇರಿದಂತೆ ಆ ವೇಳೆ ಸ್ಥಳದಲ್ಲಿದ್ದ ಇತರ ಐವರು ಸಿಬ್ಬಂದಿಗಳನ್ನೂ ತೀವ್ರ ವಿಚಾರಣೆಗೊಳಪಡಿಸಿರುವ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ಸಿಐಡಿ ತಂಡವು ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸುತ್ತಿದೆ. ಘಟನೆ ನಡೆದ ದಿನ ಕೃತ್ಯವೆಸಗಿದ ಇನ್ಸ್‍ಪೆಕ್ಟರ್ ಬಿ.ಜಿ….
ಜುಲೈನಲ್ಲಿ ರಾಯಲ್ ಕಲಾ ಗ್ಯಾಲರಿ ಪ್ರವಾಸಿಗರ ವೀಕ್ಷಣೆಗೆ ಮುಕ್ತ
May 30, 2019ಮೈಸೂರು: ನವೀಕೃತಗೊಂಡಿರುವ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಲಾ ಗ್ಯಾಲರಿಯು ಜುಲೈನಲ್ಲಿ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಜಗನ್ಮೋಹನ ಅರಮನೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆ ಯರ್ ಅವರು, ರಿಪೇರಿ, ನವೀ ಕರಣಕ್ಕಾಗಿ ಜಗನ್ಮೋಹನ ಅರ ಮನೆಯ ಶ್ರೀ ಜಯಚಾಮ ರಾಜೇಂದ್ರ ಆರ್ಟ್ ಗ್ಯಾಲರಿಯನ್ನು ಕಳೆದ 8 ತಿಂಗಳ ಹಿಂದೆ ಬಂದ್ ಮಾಡಲಾಗಿತ್ತು. ಈಗ ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ ಎಂದರು. ಇನ್ನೂ ನವೀಕರಣ ಕೆಲಸ ನಡೆ ಯುತ್ತಿದ್ದು, 1861ರಲ್ಲಿ ನಿರ್ಮಾಣ ಗೊಂಡ ಅತೀ…
ಬೇಸಿಗೆ ರಜೆ ಕಳೆದು ಉತ್ಸಾಹದಿಂದ ಶಾಲೆಗೆ ಬಂದ ಮಕ್ಕಳಿಗೆ ಪ್ರವೇಶ ಬಂದ್!
May 30, 2019ಮೈಸೂರು: ಇಂದಿನಿಂದ ಶಾಲೆಗಳು ಆರಂಭವಾದವು. ಬೇಸಿಗೆ ರಜೆ ಕಳೆದು ಮಕ್ಕಳು ಸಂತೋಷದಿಂದ ಬ್ಯಾಗನ್ನು ಬೆನ್ನಿಗೇರಿಸಿಕೊಂಡು ಶಾಲೆಗಳಿಗೆ ತೆರಳಿದರೆ, ಇತ್ತ ಮೈಸೂರಿನ ಮಹದೇವಪುರ ಸರ್ಕಾರಿ ಅನುದಾನಿತ ಶಾಲೆಯೊಂದರ ಮಕ್ಕಳು ಮಾತ್ರ ಮೊದಲ ದಿನವೇ ಶಾಲೆ ಪ್ರವೇಶಿಸಲು ಹರಸಾಹಸ ಹಾಗೂ ಕೊನೆಗೆ ಪ್ರಯಾಸ ಪಡಬೇಕಾಯಿತು. ಮಹದೇವಪುರ ಎನೆಡ್ಸಾ ಹಿರಿಯ ಪ್ರಾಥ ಮಿಕ ಶಾಲೆಯ ಮಕ್ಕಳು ರಜೆಯ ಮಜಾ ಕಳೆದು ನಗುಮೊಗದೊಂದಿಗೆ ಮೊದಲ ದಿನ ಶಾಲೆಗೆ ಬಂದರೆ ಶಾಲೆಗೆ ಬೀಗ ಹಾಕ ಲಾಗಿತ್ತು. ಉತ್ಸಾಹದಿಂದ ಬಂದ ಮಕ್ಕಳಿಗೆ ಏಕಾಏಕಿ ಬೇಸರ ಉಂಟಾಯಿತು….
ಮಾವು ಮೇಳದಲ್ಲಿ ಈ ಬಾರಿ 2.06 ಲಕ್ಷ ಕೆಜಿ ಮಾವು ಮಾರಾಟ
May 30, 2019ಮೈಸೂರು: ಮೈಸೂರಿನ ಕರ್ಜನ್ ಪಾರ್ಕ್ ಆವರಣದಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಐದೇ ದಿನದಲ್ಲಿ 2,06,773 ಕೆಜಿ ಮಾವಿನ ಹಣ್ಣು ಮಾರಾಟವಾಗಿದೆ. ನೈಸರ್ಗಿಕ ಪದ್ಧತಿಯಲ್ಲಿ ಮಾಗಿಸಿದ ಮಾವಿನಹಣ್ಣನ್ನು ರೈತರಿಂದ ನೇರವಾಗಿ ಗ್ರಾಹಕ ರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಿತ್ತು. ಈ ಮೇಳದಲ್ಲಿ 40 ಮಳಿಗೆಗಳಲ್ಲಿ ಮಾವಿನಹಣ್ಣು ಮಾರಾಟ, 2 ಮಳಿಗೆಯಲ್ಲಿ ಹಲಸು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನದಿಂದಲೇ ಮೇಳದಲ್ಲಿ ಭರ್ಜರಿ ಮಾರಾಟ ನಡೆದಿತ್ತು. ಈ 5…










