ಮೈಸೂರು

ಸಾಮೂಹಿಕ ಯೋಗ ಪ್ರದರ್ಶನಜೂ.4ಕ್ಕೆ ಮೈಸೂರಲ್ಲಿ ಮಹತ್ವದ ಸಭೆ
ಮೈಸೂರು

ಸಾಮೂಹಿಕ ಯೋಗ ಪ್ರದರ್ಶನಜೂ.4ಕ್ಕೆ ಮೈಸೂರಲ್ಲಿ ಮಹತ್ವದ ಸಭೆ

June 1, 2019

ಮೈಸೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂಬಂಧ ಸಿದ್ಧತೆಗಾಗಿ ಜೂನ್ 4ರಂದು ಮೈಸೂರಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಪ್ರತಾಪ್ ಸಿಂಹ, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಶಾಲಾ-ಕಾಲೇಜು ಮುಖ್ಯಸ್ಥರು, ಯೋಗ ತರಬೇತಿ ಸಂಸ್ಥೆ ಪ್ರಮುಖರು, ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಸಭೆಯಲ್ಲಿ ಹಾಜರಿರುವರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಮೈಸೂರು ರೇಸ್…

ನಾಳೆ ಪೌರ ಕಾರ್ಮಿಕರಿಂದ ಗಣಪತಿ ಸಚ್ಚಿದಾನಂದ ಶ್ರೀಗಳ ಜನ್ಮ ದಿನಾಚರಣೆ
ಮೈಸೂರು

ನಾಳೆ ಪೌರ ಕಾರ್ಮಿಕರಿಂದ ಗಣಪತಿ ಸಚ್ಚಿದಾನಂದ ಶ್ರೀಗಳ ಜನ್ಮ ದಿನಾಚರಣೆ

June 1, 2019

ಮೈಸೂರು: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ದಲ್ಲಿ ಜೂ.2ರಂದು ಬೆಳಿಗ್ಗೆ 10ಕ್ಕೆ ಪೌರಕಾರ್ಮಿಕ ಸಂಘ ಟನೆ ಗಳಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 77ನೇ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಮಾಜಿ ಮೇಯರ್ ನಾರಾಯಣ್ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಇದುವರೆಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ 25ರಿಂದ…

ಡಾ.ಜಯಂತ್ ಮೈಸೂರು ಪಾಲಿಕೆ ಆರೋಗ್ಯಾಧಿಕಾರಿ
ಮೈಸೂರು

ಡಾ.ಜಯಂತ್ ಮೈಸೂರು ಪಾಲಿಕೆ ಆರೋಗ್ಯಾಧಿಕಾರಿ

June 1, 2019

ಮೈಸೂರು: ಮೈಸೂರು ಮಹಾನಗರಪಾಲಿಕೆ ಆರೋ ಗ್ಯಾಧಿಕಾರಿಯಾಗಿ ಡಾ.ಎಂ.ಎಸ್. ಜಯಂತ್ ಅವರನ್ನು ನೇಮಿಸಲಾಗಿದೆ. ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಅವರನ್ನು ನಗರ ಪಾಲಿಕೆಗೆ ವರ್ಗಾವಣೆ ಮಾಡಿ ನಗರಾ ಭಿವೃದ್ಧಿ ಇಲಾಖೆ ಅಧೀನ ಕಾರ್ಯ ದರ್ಶಿ ನಾಗರಾಜ್ ಅವರು ಮೇ 27ರಂದು ಆದೇಶ ಹೊರಡಿಸಿದ್ದಾರೆ. ಪಾಲಿಕೆ ಆರೋಗ್ಯಾಧಿ ಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಬಿ.ನಾಗರಾಜ್ ಅವರು ಸಹ ನಗರ ಪಾಲಿಕೆಯ ಆರೋಗ್ಯಾಧಿಕಾರಿ (ಕಿರಿಯ ಶ್ರೇಣಿ)ಯಾಗಿ ಮುಂದುವರೆಯಲಿದ್ದಾರೆ. ಡಾ.ಎಂ.ಎಸ್.ಜಯಂತ್ ಅವರು ಇಂದು ಅಧಿಕಾರ ವಹಿಸಿಕೊಂಡರು.

ಗ್ಯಾಂಗ್ ರೇಪ್ ಪ್ರಕರಣ: ಮೂವರ ಸೆರೆ, ಐವರ ಪತ್ತೆಗೆ ಮುಂದುವರೆದ ಶೋಧ
Uncategorized, ಮೈಸೂರು

ಗ್ಯಾಂಗ್ ರೇಪ್ ಪ್ರಕರಣ: ಮೂವರ ಸೆರೆ, ಐವರ ಪತ್ತೆಗೆ ಮುಂದುವರೆದ ಶೋಧ

June 1, 2019

ಮೈಸೂರು: ಮೈಸೂರಿನ ಹೊರ ವಲಯದಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣವನ್ನು ಕಡೆಗೂ ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ನಗರದ ನಿವಾಸಿ ಗಳೆನ್ನಲಾದ ಕಾರ್ತಿಕ್‍ಕುಮಾರ(25), ಜೀವನ್(25) ಹಾಗೂ ಸೂರ್ಯ ಕುಮಾರ್(23) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಇನ್ನೂ ಐವರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಕೆ.ಆರ್. ಉಪ ವಿಭಾಗದ ಎಸಿಪಿ ಜಿ.ಟಿ.ನಾಯಕ್ ಅವರು ಗ್ಯಾಂಗ್ ರೇಪ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿ ಕುವೆಂಪು ನಗರ ಠಾಣೆ ಇನ್‍ಸ್ಪೆಕ್ಟರ್ ರಾಜು, ಸಬ್‍ಇನ್‍ಸ್ಪೆಕ್ಟ್‍ಗಳಾದ ಅರುಣ್ ಮತ್ತು ರಘು…

ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ
ಮೈಸೂರು

ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

May 31, 2019

ನವದೆಹಲಿ: ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಇಂದು ಗೋಧೂಳಿ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಐದು ವರ್ಷ ಪೂರ್ಣ ಗೊಳಿಸಿ ಮತ್ತೊಮ್ಮೆ ಪಟ್ಟಕ್ಕೇರಿದ ಕಾಂಗ್ರೆಸ್ಸೇ ತರ ಪ್ರಧಾನಿ ಎಂಬ ಹೆಗ್ಗಳಿಕೆಯೂ ಮೋದಿ ಅವರ ಪಾಲಾಗಿದೆ. ಇಂದು ಸಂಜೆ 7 ಗಂಟೆ 5 ನಿಮಿಷಕ್ಕೆ ಪ್ರಮಾಣ ವಚನ ಸ್ವೀಕರಿಸಲು ಮೋದಿ ಅವರು ಆಗಮಿಸುತ್ತಿದಂತೆ ರಾಷ್ಟ್ರಪತಿ ಭವನದ ದಶದಿಕ್ಕುಗಳಲ್ಲೂ ಮೋದಿ… ಮೋದಿ… ಜಯಘೋಷ ಮೊಳಗಿತು. ಈ ವೇಳೆ ಈಶ್ವರನ ಹೆಸರಲ್ಲಿ ಗೌಪ್ಯತಾ ವಿಧಿ ಸ್ವೀಕರಿಸಿದ ಮೋದಿ ಅವರು…

ರಾಜ್ಯದಿಂದ ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ನಿರ್ಮಲಾ ಸೀತಾರಾಮನ್ ಸಂಪುಟ ಸೇರ್ಪಡೆ
ಮೈಸೂರು

ರಾಜ್ಯದಿಂದ ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ನಿರ್ಮಲಾ ಸೀತಾರಾಮನ್ ಸಂಪುಟ ಸೇರ್ಪಡೆ

May 31, 2019

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 25 ಸ್ಥಾನಗಳಲ್ಲಿ ಗೆಲುವು ತಂದು ಕೊಟ್ಟ ಕರ್ನಾಟಕಕ್ಕೆ ಇಲ್ಲಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ತಮಿಳು ನಾಡಿನ ನಿರ್ಮಲಾ ಸೀತಾರಾಮನ್ ಸೇರಿ 4 ಕೇಂದ್ರ ಸಚಿವ ಸ್ಥಾನಗಳನ್ನು ಮೋದಿ ಸಂಪುಟದಲ್ಲಿ ನೀಡಲಾಗಿದೆ. ಹಿಂದಿನ ಸರ್ಕಾರದಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್, ಹಿಂದಿನ ಸರ್ಕಾರದಲ್ಲಿ ರೈಲ್ವೆ, ಕಾನೂನು, ಸಾಂಖ್ಯಿಕ ಯೋಜನೆ ಜಾರಿ ಹಾಗೂ ರಸಗೊಬ್ಬರ ಖಾತೆಗಳನ್ನು ನಿರ್ವಹಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದಗೌಡ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ…

ಮನೆಯಲ್ಲೇ ಪುತ್ರನ ಪ್ರಮಾಣ ವಚನ ಕಣ್ಣು ತುಂಬಿಕೊಂಡ ಮಹಾತಾಯಿ…
ಮೈಸೂರು

ಮನೆಯಲ್ಲೇ ಪುತ್ರನ ಪ್ರಮಾಣ ವಚನ ಕಣ್ಣು ತುಂಬಿಕೊಂಡ ಮಹಾತಾಯಿ…

May 31, 2019

ನವದೆಹಲಿ: ತಾಯಿ-ಮಗನ ನಡುವಿನ ಪ್ರೀತಿ, ಬಾಂಧವ್ಯಗಳೇ ಅಂತಹದು.. ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. 17ನೇ ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೋದಿ ದೆಹಲಿಯಲ್ಲಿ ಪ್ರಮಾಣ ತೆಗೆದುಕೊಂಡರೆ ತಾಯಿ ಮನೆಯಲ್ಲೇ ಕುಳಿತು ಪುತ್ರನ ಪದಗ್ರಹಣ ವೀಕ್ಷಿಸಿದರು. ಸೋಷಿಯಲ್ ಮೀಡಿಯಾ ಸಹ ಅಷ್ಟೆ ವೇಗವಾಗಿ ಈ ಫೋಟೋಕ್ಕೆ ಪ್ರತಿಕ್ರಿಯೆ ನೀಡಿದ್ದು ಕೆಲವೇ ಕ್ಷಣದಲ್ಲಿ ಲಕ್ಷಾಂತರ ಶೇರ್ ಆಗುತ್ತಿದೆ.

ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಪ್ರತಿ ಯೂನಿಟ್‍ಗೆ 33 ಪೈಸೆ ಹೆಚ್ಚಳ
ಮೈಸೂರು

ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಪ್ರತಿ ಯೂನಿಟ್‍ಗೆ 33 ಪೈಸೆ ಹೆಚ್ಚಳ

May 31, 2019

ಬೆಂಗಳೂರು: ಸಾರ್ವತ್ರಿಕ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರ ಪ್ರತಿ ಯೂನಿಟ್‍ಗೆ 33 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಿಸಿ ಆದೇಶ ಮಾಡಿದೆ. ಕಳೆದ ಏಪ್ರಿಲ್ 1ರಿಂದಲೇ ಪೂರ್ವಾನ್ವಯ ವಾಗುವಂತೆ ದರ ಹೆಚ್ಚಳ ಮಾಡಿದ್ದು, ಗ್ರಾಹಕರು ತಮ್ಮ ಮುಂದಿನ ಬಿಲ್ ಸಂದರ್ಭದಲ್ಲಿ 2ತಿಂಗಳ ಹೆಚ್ಚಿನ ದರವನ್ನು ತೆರಬೇಕಾಗಿದೆ. ಸರ್ಕಾರ ಮತ್ತು ವಿದ್ಯುತ್ ಪ್ರಸರಣ ಇಲಾಖೆಗಳು ಮಾಡಿರುವ ತಪ್ಪಿಗೆ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಬೆಲೆ ತೆರಬೇಕಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ವಿದ್ಯುತ್ ನಿಯಂತ್ರಣಾ…

ಮೈಸೂರಲ್ಲಿ ಮೋದಿ ಪ್ರಮಾಣ ವಚನವನ್ನು ಬೃಹತ್ ಎಲ್‍ಇಡಿ ಪರದೆಯಲ್ಲಿ ವೀಕ್ಷಿಸಿ ಹರ್ಷಚಿತ್ತರಾದ ಜನತೆ
ಮೈಸೂರು

ಮೈಸೂರಲ್ಲಿ ಮೋದಿ ಪ್ರಮಾಣ ವಚನವನ್ನು ಬೃಹತ್ ಎಲ್‍ಇಡಿ ಪರದೆಯಲ್ಲಿ ವೀಕ್ಷಿಸಿ ಹರ್ಷಚಿತ್ತರಾದ ಜನತೆ

May 31, 2019

ಮೈಸೂರು: ದೇಶದ ಪ್ರಧಾನಿ ಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಗಳಿಗೆಯನ್ನು ಬೃಹತ್ ಎಲ್‍ಇಡಿ ಪರದೆ ಮೂಲಕ ಮೈಸೂರಿನ ವಿವಿಧೆಡೆ ಬಿಜೆಪಿ ಕಾರ್ಯ ಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಕಣ್ತುಂಬಿ ಕೊಂಡರು. ಮೈಸೂರಿನ ಗಾಂಧಿ ವೃತ್ತ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ನೇರ ಪ್ರಸಾರ ಕಾರ್ಯಕ್ರಮ ದಲ್ಲಿ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು ಮೋದಿಯವರ ಪ್ರಮಾಣ ವಚನಕ್ಕೆ ಸಾಕ್ಷಿಯಾದರು. ಶಾಸಕ ಎಸ್.ಎ.ರಾಮದಾಸ್ ಕಚೇರಿ ಆವರಣ: ವಿದ್ಯಾರಣ್ಯಪುರಂನಲ್ಲಿರುವ ಶಾಸಕ ಎಸ್.ಎ.ರಾಮ ದಾಸ್ ಅವರ ಕಚೇರಿ ಆವರಣದಲ್ಲಿ…

ಮೋದಿ ಸಂಪುಟದಲ್ಲಿ ಉ.ಪ್ರದೇಶಕ್ಕೆ ಅಧಿಕ 9 ಸ್ಥಾನ
ಮೈಸೂರು

ಮೋದಿ ಸಂಪುಟದಲ್ಲಿ ಉ.ಪ್ರದೇಶಕ್ಕೆ ಅಧಿಕ 9 ಸ್ಥಾನ

May 31, 2019

ನವದೆಹಲಿ: ಎರಡನೇ ಅವಧಿಯ ನರೇಂದ್ರ ಮೋದಿ ಅವರ ಸರ್ಕಾರದ ಸಚಿವ ಸಂಪುಟದಲ್ಲಿ ಅತೀ ಹೆಚ್ಚು ಸ್ಥಾನ ಸಿಕ್ಕಿರುವುದು ಉತ್ತರ ಪ್ರದೇಶಕ್ಕೆ ಒಟ್ಟು 303 ಸ್ಥಾನಗಳನ್ನು ಪಡೆದಿರುವ ಬಿಜೆಪಿಗೆ ಅತೀ ಹೆಚ್ಚು ಸಂಸದರ ಕೊಡುಗೆ ನೀಡಿದ ಉತ್ತರ ಪ್ರದೇಶಕ್ಕೆ 9 ಸಚಿವ ಸ್ಥಾನ ಸಿಕ್ಕಿದೆ. ಅತಿ ಹೆಚ್ಚು ಮಂತ್ರಿ ಪದವಿ ಪಡೆದ ರಾಜ್ಯಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ. ಬಿಜೆಪಿ-ಶಿವಸೇನೆ ಮೈತ್ರಿಯ ರಾಜ್ಯದಿಂದ 8 ಸಂಸದರಿಗೆ ಮಂತ್ರಿ ಪದವಿ ಒಲಿದಿದೆ. ಬಿಹಾರ, ಮಧ್ಯಪ್ರದೇಶ ತಲಾ 5, ಕರ್ನಾ ಟಕ…

1 966 967 968 969 970 1,611
Translate »