ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ
ಮೈಸೂರು

ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

May 31, 2019

ನವದೆಹಲಿ: ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಇಂದು ಗೋಧೂಳಿ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಐದು ವರ್ಷ ಪೂರ್ಣ ಗೊಳಿಸಿ ಮತ್ತೊಮ್ಮೆ ಪಟ್ಟಕ್ಕೇರಿದ ಕಾಂಗ್ರೆಸ್ಸೇ ತರ ಪ್ರಧಾನಿ ಎಂಬ ಹೆಗ್ಗಳಿಕೆಯೂ ಮೋದಿ ಅವರ ಪಾಲಾಗಿದೆ.

ಇಂದು ಸಂಜೆ 7 ಗಂಟೆ 5 ನಿಮಿಷಕ್ಕೆ ಪ್ರಮಾಣ ವಚನ ಸ್ವೀಕರಿಸಲು ಮೋದಿ ಅವರು ಆಗಮಿಸುತ್ತಿದಂತೆ ರಾಷ್ಟ್ರಪತಿ ಭವನದ ದಶದಿಕ್ಕುಗಳಲ್ಲೂ ಮೋದಿ… ಮೋದಿ… ಜಯಘೋಷ ಮೊಳಗಿತು. ಈ ವೇಳೆ ಈಶ್ವರನ ಹೆಸರಲ್ಲಿ ಗೌಪ್ಯತಾ ವಿಧಿ ಸ್ವೀಕರಿಸಿದ ಮೋದಿ ಅವರು ಶ್ರದ್ಧಾ ಪೂರ್ವಕ ವಾಗಿ, ಶುದ್ಧ ಅಂತಃಕರಣದಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.


ಮೋದಿ ಅವರ ಜೊತೆ ಕರ್ನಾಟಕದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ ಸೇರಿದಂತೆ ಒಟ್ಟು 57 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಅವರಲ್ಲಿ 25 ಮಂದಿ ಕ್ಯಾಬಿನೆಟ್ ದರ್ಜೆ, 9 ಮಂದಿ ರಾಜ್ಯ ಸಚಿವರು (ಸ್ವತಂತ್ರ) ಹಾಗೂ 24 ಮಂದಿ ರಾಜ್ಯ ಸಚಿವರಾಗಿದ್ದಾರೆ.

ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಉತ್ತರಪ್ರದೇಶದ ಲಕ್ನೋ ಕ್ಷೇತ್ರದ ಸಂಸದ ರಾಜ್‍ನಾಥ್ ಸಿಂಗ್ ಅವರು 2ನೇಯ ವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 3ನೇಯವರಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆದ ಗುಜರಾತ್‍ನ ಗಾಂಧಿನಗರ ಸಂಸದ ಅಮಿತ್ ಶಾ ಈಶ್ವರನ ಹೆಸರಿನಲ್ಲಿ, 4ನೇಯವರಾಗಿ ಮಹಾರಾಷ್ಟ್ರದ ನಾಗ್ಪುರ ಸಂಸದ ನಿತಿನ್ ಗಡ್ಕರಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಆ ಬಳಿಕ ಕ್ರಮವಾಗಿ ರಾಜ್ಯದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಬಿಹಾ ರದ ಹಾಜೀಪುರ ಸಂಸದ ರಾಮ್ ವಿಲಾಸ್ ಪಾಸ್ವಾನ್, ಮಧ್ಯಪ್ರದೇಶದ ಗ್ವಾಲಿಯಾರ್ ಸಂಸದ ನರೇಂದ್ರ ಸಿಂಗ್ ತೋಮರ್, ಬಿಹಾರದ ಪಾಟ್ನಾ ಸಂಸದ ರವಿಶಂಕರ್ ಪ್ರಸಾದ್, ಪಂಜಾಬ್‍ನ ಬತ್ತಿಂಡ ಸಂಸದೆ ಹರ್ ಸಿಮ್ರತ್ ಕೌರ್, 5 ಬಾರಿ ರಾಜ್ಯ ಸಭಾ ಸದಸ್ಯರಾಗಿರುವ ತಾವರ್ ಚಂದ್ ಗೆಹ್ಲೋಟ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಡಾ. ಎಸ್.ಜೈಶಂಕರ್ (ಇವರು ಇನ್ನೂ ಸಂಸದರಾಗಿ ಆಯ್ಕೆಯಾಗಿಲ್ಲ), ಉತ್ತರಾಖಂಡ್‍ನ ಹರಿದ್ವಾರದ ರಮೇಶ್ ಪೋಖ್ರಿಯಾಲ್, ಜಾರ್ಖಂಡ್‍ನ ಜೆಮ್ ಷಡ್‍ಪುರದ ಅರ್ಜುನ್ ಮುಂಡಾ, ಅಮೇಥಿ ಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯವರನ್ನು ಮಣಿಸಿದ ಸ್ಮøತಿ ಇರಾನಿ, ದೆಹಲಿಯ ಚಾಂದನಿ ಚೌಕ್‍ನ ಡಾ. ಹರ್ಷವರ್ಧನ್, ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯರುಗಳಾದ ಪ್ರಕಾಶ್ ಜಾವ್ಡೇಕರ್, ಪಿಯೂಷ್ ಗೋಯಲ್, ಒಡಿಸ್ಸಾದ ರಾಜ್ಯಸಭಾ ಸದಸ್ಯ ಧರ್ಮೇಂದ್ರ ಪ್ರಧಾನ್, ಉತ್ತರಪ್ರದೇಶದ ರಾಜ್ಯಸಭಾ ಸದಸ್ಯ ಮುಖ್ತಾರ್ ಅಬ್ಬಾಸ್ ನಖ್ವಿ, ಕರ್ನಾಟಕದ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ, ಉತ್ತರಪ್ರದೇಶದ ಚಂದೌಲಿಯ ಡಾ. ಮಹೇಂದ್ರನಾಥ್ ಪಾಂಡೆ, ಮಹಾ ರಾಷ್ಟ್ರದ ಮುಂಬೈ ದಕ್ಷಿಣ ಕ್ಷೇತ್ರದ ಡಾ. ಅರವಿಂದ್ ಸಾವನ್, ಬಿಹಾರದ ಬೇಗೂ ಸರೈನ ಗಿರಿರಾಜ್ ಸಿಂಗ್, ರಾಜಸ್ತಾನದ ಜೋಧ್‍ಪುರನ ಗಜೇಂದ್ರಸಿಂಗ್ ಶೇಖಾ ವತ್ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಉತ್ತರ ಪ್ರದೇಶದ ಬರೇಲಿಯ ಸಂತೋಷ್ ಕುಮಾರ್ ಗಂಗ್ವಾರ್, ಹರಿಯಾಣದ ಗುರುಗ್ರಾಮ್‍ನ ಇಂದ್ರಜಿತ್ ಸಿಂಗ್, ಉತ್ತರ ಗೋವಾದ ಶ್ರೀಪಾದ್ ಯಶೋ ನಾಯಕ್, ಜಮ್ಮು-ಕಾಶ್ಮೀರದ ಉದಂಪುರ ಕ್ಷೇತ್ರದ ಡಾ. ಜಿತೇಂದ್ರ ಸಿಂಗ್, ಪಶ್ಚಿಮ ಅರುಣಾಚಲದ ಕಿರಣ್ ರಿಜಿಜು, ಮಧ್ಯ ಪ್ರದೇಶದ ದಾಮೋ ಕ್ಷೇತ್ರದ ಪ್ರಹ್ಲಾದ್ ಸಿಂಗ್ ಪಟೇಲ್, ಬಿಹಾರದ ಹರಹ ಕ್ಷೇತ್ರದ ರಾಜ್‍ಕುಮಾರ್ ಸಿಂಗ್, ಪಂಜಾಬ್‍ನ ರಾಜ್ಯಸಭಾ ಸದಸ್ಯ ಹರ್ದೀಪ್ ಸಿಂಗ್‍ಪುರಿ, ಗುಜರಾತ್‍ನ ರಾಜ್ಯಸಭಾ ಸದಸ್ಯ ಮನ್ ಸುಖ್ ಮಾಂಡವ್ಯ ಅವರುಗಳು ರಾಜ್ಯ (ಸ್ವತಂತ್ರ) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯ ಪ್ರದೇಶ ಮಂಡ್ಲಾದ ಫಗ್ಗನ್ ಸಿಂಗ್ ಕುಲಸ್ತೆ, ಬಿಹಾರದ ಬಕ್ಸರ್‍ನ ಅಶ್ವಿನ್ ಕುಮಾರ್ ಚೌಬೆ, ರಾಜಾಸ್ತಾನ ಬಿಕನೇರ್‍ನ ಅರ್ಜುನ್ ರಾಂ ಮೇಘಲಾಲ್, ಉತ್ತರಪ್ರದೇಶ ಗಜಿಯಾಬಾದ್‍ನ ಜನರಲ್ ವಿ.ಕೆ.ಸಿಂಗ್, ಹರಿಯಾಣ ಫರೀದಾಬಾದ್‍ನ ಕೃಷ್ಣಪಾಲ್ ಗುರ್ಜರ್, ಮಹಾರಾಷ್ಟ್ರ ಜಲ್ನಾದ ರಾವ್ ಸಾಹೇಬ್ ದಾನ್ವೆ, ತೆಲಂಗಾಣ ಸಿಕಿಂದರಾಬಾದ್‍ನ ಗಂಗಾಪುರಂ ಕಿಶನ್ ರೆಡ್ಡಿ, ಗುಜರಾತ್ ರಾಜ್ಯಸಭಾ ಸದಸ್ಯ ಪುರುಷೋತ್ತಮ್ ರೂಪಾಲಾ, ಮಹಾರಾಷ್ಟ್ರ ರಾಜ್ಯಸಭಾ ಸದಸ್ಯ ರಾಮದಾಸ್ ಅಠವಾಳೆ, ಉತ್ತರ ಪ್ರದೇಶ ಫತೇಪುರ್‍ನ ಸಾಧ್ವಿ ನಿರಂಜನ್ ಜ್ಯೋತಿ, ಪಶ್ಚಿಮ ಬಂಗಾಳ ಅಸಾಂನೋಲ್‍ನ ಬಾಬುಲ್ ಸುಪ್ರಿಯೋ, ಮುಜಾಪುರ್ ನಗರದ ಡಾ. ಸಂಜೀವ್ ಕುಮಾರ್ ಬಾಲಿಯಾ, ಮಹಾರಾಷ್ಟ್ರ ಅಕೋಲಾದ ಧೋತ್ರೆ ಸಂಜಯ್ ಶಾಮರಾವ್, ಹಿಮಾಚಲಪ್ರದೇಶ ಹಮೀರ್ಪುರದ ಅನುರಾಗ್ ಸಿಂಗ್ ಠಾಕೂರ್, ಕರ್ನಾಟಕ ಬೆಳಗಾವಿಯ ಸುರೇಶ್ ಅಂಗಡಿ, ಬಿಹಾರ ಹಾಜಿಪುರ್‍ನ ನಿತ್ಯಾನಂದ ರಾಯ್, ಹರಿಯಾಣ ಅಂಬಾಲಾದ ರತನ್‍ಲಾಲ್ ಕಠಾರಿಯಾ, ಕೇರಳ ರಾಜ್ಯಸಭಾ ಸದಸ್ಯ ಬಿ.ಮುರಳೀಧರನ್, ಛತ್ತೀಸ್‍ಘಡ್‍ನ ರೇಣುಕಾ ಸಿಂಗ್ ಸರೂತಾ, ಪಂಜಾಬ್ ಹೋಷಿಯಾಪುರ್‍ನ ಸೋಮ್ ಪ್ರಕಾಶ್, ಅಸ್ಸಾಂ ದಿಬುರ್ಗರ್‍ನ ರಾಮೇಶ್ವರ್ ತೇಲಿ, ಒಡಿಸ್ಸಾ ಬಾಲ್‍ಸೋರ್‍ನ ಪ್ರತಾಪ್ ಚಂದ್ರ ಸಾರಂಗಿ, ರಾಜಾಸ್ತಾನ ಬಾರ್ಮಾರ್‍ನ ಕೇಲಾಸ್ ಚೌಧರಿ, ಪಶ್ಚಿಮ ಬಂಗಾಳ ಪುರುಳಿಯಾದ ದೇವಶ್ರೀ ಚೌಧರಿ ಅವರುಗಳು ರಾಜ್ಯ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಬಾರಿಯ ಸಂಪುಟದಲ್ಲಿ ಸುಷ್ಮಾ ಸ್ವರಾಜ್ ಇರುತ್ತಾರೋ ಇಲ್ಲವೋ ಎನ್ನುವುದು ಕೊನೆ ಕ್ಷಣದವರೆಗೂ ಯಾರಿಗೂ ತಿಳಿದಿರಲಿಲ್ಲ. ಆದರೆ ಕಾರ್ಯಕ್ರಮಕ್ಕೆ ಬಂದ ಅವರು ಅತಿಥಿಗಳ ಸ್ಥಾನದಲ್ಲಿ ಕುಳಿತಾಗ ಈ ಬಾರಿ ಮೋದಿ ಸಂಪುಟದಲ್ಲಿ ಕಾರ್ಯನಿರ್ವಹಿಸುವು ದಿಲ್ಲ ಎನ್ನುವುದು ಖಚಿತವಾಯಿತು. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಚುನಾವಣಾ ಕಣದಿಂದಲೇ ಹಿಂದಕ್ಕೆ ಸರಿದಿದ್ದರು.

ಕಾರ್ಯಕ್ರಮದಲ್ಲಿ ಬಿಮ್ ಸ್ಟೆಕ್ ದೇಶಗಳ ಪ್ರಮುಖರು, ವಿದೇಶಿ ಗಣ್ಯರು, ಬಿಜೆಪಿ ವರಿಷ್ಠ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಹಲವು ರಾಜ್ಯಗಳ ಸಿಎಂಗಳು ಸೇರಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕರ್ನಾಟಕ ಸಿಎಂ ಕುಮಾರಸ್ವಾಮಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಉಮಾ ಭಾರತಿ, ಪೇಜಾವರ ಶ್ರೀ, ಆದಿಚುಂಚನಗಿರಿ ಶ್ರೀಗಳು, ಜಗ್ಗಿ ವಾಸುದೇವ್, ಗಾಯಕಿ ಆಶಾ ಬೋಸ್ಲೆ, ನಟರಾದ ರಜನಿಕಾಂತ್ ದಂಪತಿ, ಉದ್ಯಮಿಗಳಾದ ಮುಖ್ಯ ಅಂಬಾನಿ, ಅವರ ಪತ್ನಿ ನೀತೂ ಅಂಬಾನಿ ಸೇರಿದಂತೆ ದೇಶದ ಉದ್ಯಮಿಗಳು, ಬಿಜೆಪಿ ನಾಯಕರು, ಕಾರ್ಯಕರ್ತರು ಸಾಕ್ಷಿಯಾಗಿದ್ದರು.

Translate »