ರಾಜ್ಯದಿಂದ ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ನಿರ್ಮಲಾ ಸೀತಾರಾಮನ್ ಸಂಪುಟ ಸೇರ್ಪಡೆ
ಮೈಸೂರು

ರಾಜ್ಯದಿಂದ ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ನಿರ್ಮಲಾ ಸೀತಾರಾಮನ್ ಸಂಪುಟ ಸೇರ್ಪಡೆ

May 31, 2019

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 25 ಸ್ಥಾನಗಳಲ್ಲಿ ಗೆಲುವು ತಂದು ಕೊಟ್ಟ ಕರ್ನಾಟಕಕ್ಕೆ ಇಲ್ಲಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ತಮಿಳು ನಾಡಿನ ನಿರ್ಮಲಾ ಸೀತಾರಾಮನ್ ಸೇರಿ 4 ಕೇಂದ್ರ ಸಚಿವ ಸ್ಥಾನಗಳನ್ನು ಮೋದಿ ಸಂಪುಟದಲ್ಲಿ ನೀಡಲಾಗಿದೆ.

ಹಿಂದಿನ ಸರ್ಕಾರದಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್, ಹಿಂದಿನ ಸರ್ಕಾರದಲ್ಲಿ ರೈಲ್ವೆ, ಕಾನೂನು, ಸಾಂಖ್ಯಿಕ ಯೋಜನೆ ಜಾರಿ ಹಾಗೂ ರಸಗೊಬ್ಬರ ಖಾತೆಗಳನ್ನು ನಿರ್ವಹಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದಗೌಡ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಅವರುಗಳಿಗೆ ಕ್ಯಾಬಿನೆಟ್ ದರ್ಜೆ ಮತ್ತು ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರಿಗೆ ರಾಜ್ಯ ದರ್ಜೆ ಸಚಿವ ಸ್ಥಾನವನ್ನು ನೀಡಲಾಗಿದೆ.

ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರ ಸ್ಥಾನ ತುಂಬಲು ಬ್ರಾಹ್ಮಣ ಸಮಾಜಕ್ಕೆ ಸೇರಿದ ಪ್ರಹ್ಲಾದ್ ಜೋಷಿ, ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಲು ಡಿ.ವಿ.ಸದಾನಂದಗೌಡ ಹಾಗೂ ಲಿಂಗಾಯಿತರ ಕೋಟಾದಲ್ಲಿ ಸುರೇಶ್ ಅಂಗಡಿಯ ವರಿಗೆ ಸ್ಥಾನ ನೀಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರಾದರೂ, 2016ರಲ್ಲಿ ಕರ್ನಾ ಟಕದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 2008ರಲ್ಲಿ ಬಿಜೆಪಿ ಸೇರಿದ ಅವರು, ಪಕ್ಷದ ವಕ್ತಾರೆಯಾಗಿ ಕಾರ್ಯ ನಿರ್ವ ಹಿಸಿದ್ದಾರೆ. 2014ರಲ್ಲಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾಗ ಅವರು ವಾಣಿಜ್ಯ ಹಾಗೂ ಕೈಗಾರಿಕಾ ಖಾತೆ ನಿಭಾಯಿಸಿದ್ದರು. ನಂತರ ಕರ್ನಾಟಕದಿಂದ ಆಯ್ಕೆಯಾಗಿ ರಕ್ಷಣಾ ಖಾತೆ ನಿಭಾಯಿಸಿದರು. ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಷಿ ಅವರು ಸತತ 4 ಬಾರಿ ಸಂಸದ ರಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ. ಮೋದಿ ಸಂಪುಟ ದಲ್ಲಿ ಅವಕಾಶ ಪಡೆದಿರುವ ಸುರೇಶ್ ಅಂಗಡಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ. 4 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಇವರು ಎಲ್‍ಎಲ್‍ಬಿ ಪದವೀಧರರು. 1990ರಲ್ಲಿ ಬಿಜೆಪಿ ಸೇರಿದ ಇವರು, 1996 ರಿಂದ 99ರವರೆಗೆ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. 2001ರಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಹುದ್ದೆಯನ್ನೂ ಕೂಡ ಇವರಿಗೆ ವಹಿಸಲಾಗಿತ್ತು. ಬಿಜೆಪಿಗೆ 25 ಸ್ಥಾನಗಳನ್ನು ನೀಡಿದ್ದ ಕರ್ನಾಟಕಕ್ಕೆ 7ರಿಂದ 8 ಸಚಿವ ಸ್ಥಾನಗಳು ದೊರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಶೋಭಾ ಕರಂದ್ಲಾಜೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಿದ ಉಮೇಶ್ ಜಾಧವ್, ಪರಿಶಿಷ್ಟ ಜಾತಿ ಕೋಟಾದಲ್ಲಿ ರಮೇಶ್ ಜಿಗಜಿಣಗಿ ಇಲ್ಲವೆ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಹೊಸದಾಗಿ ಸಚಿವ ಸ್ಥಾನ ದೊರೆಯಬಹುದು ಹಾಗೂ ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ಅನಂತಕುಮಾರ್ ಹೆಗ್ಡೆ ಮತ್ತೆ ಸಚಿವರಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಹ ಯುವ ಪೀಳಿಗೆಯನ್ನು ಕೇಂದ್ರ ಸಂಪುಟದಲ್ಲಿ ಪ್ರತಿನಿಧಿಸುವ ಆಶಾ ಭಾವನೆಯೂ ಇತ್ತು. ಇವರ್ಯಾರಿಗೂ ಮೋದಿ ಅವರ ಮೊದಲ ಹಂತದ ಸಂಪುಟದಲ್ಲಿ ಸ್ಥಾನ ದೊರೆಯಲಿಲ್ಲ.

Translate »