ಮೋದಿ ಸಂಪುಟದಲ್ಲಿ ಉ.ಪ್ರದೇಶಕ್ಕೆ ಅಧಿಕ 9 ಸ್ಥಾನ
ಮೈಸೂರು

ಮೋದಿ ಸಂಪುಟದಲ್ಲಿ ಉ.ಪ್ರದೇಶಕ್ಕೆ ಅಧಿಕ 9 ಸ್ಥಾನ

May 31, 2019

ನವದೆಹಲಿ: ಎರಡನೇ ಅವಧಿಯ ನರೇಂದ್ರ ಮೋದಿ ಅವರ ಸರ್ಕಾರದ ಸಚಿವ ಸಂಪುಟದಲ್ಲಿ ಅತೀ ಹೆಚ್ಚು ಸ್ಥಾನ ಸಿಕ್ಕಿರುವುದು ಉತ್ತರ ಪ್ರದೇಶಕ್ಕೆ ಒಟ್ಟು 303 ಸ್ಥಾನಗಳನ್ನು ಪಡೆದಿರುವ ಬಿಜೆಪಿಗೆ ಅತೀ ಹೆಚ್ಚು ಸಂಸದರ ಕೊಡುಗೆ ನೀಡಿದ ಉತ್ತರ ಪ್ರದೇಶಕ್ಕೆ 9 ಸಚಿವ ಸ್ಥಾನ ಸಿಕ್ಕಿದೆ.

ಅತಿ ಹೆಚ್ಚು ಮಂತ್ರಿ ಪದವಿ ಪಡೆದ ರಾಜ್ಯಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ. ಬಿಜೆಪಿ-ಶಿವಸೇನೆ ಮೈತ್ರಿಯ ರಾಜ್ಯದಿಂದ 8 ಸಂಸದರಿಗೆ ಮಂತ್ರಿ ಪದವಿ ಒಲಿದಿದೆ.

ಬಿಹಾರ, ಮಧ್ಯಪ್ರದೇಶ ತಲಾ 5, ಕರ್ನಾ ಟಕ 4, ಗುಜರಾತ್, ರಾಜಸ್ಥಾನ, ಹರಿ ಯಾಣ ತಲಾ 3, ಪಶ್ಚಿಮ ಬಂಗಾಳ, ಪಂಜಾಬ್, ಜಾಖಂಡ್ ತಲಾ 2 ಸಚಿವ ಸ್ಥಾನಗಳು ಸಿಕ್ಕಿವೆ. ಉಳಿದಂತೆ ಅಸ್ಸಾಂ, ಅರುಣಾಚಲ ಪ್ರದೇಶ, ಛತ್ತೀಸ್‍ಗಢ, ದೆಹಲಿ, ಗೋವಾ, ಹಿಮಾಚಲಪ್ರದೇಶ, ಜಮ್ಮು-ಕಾಶ್ಮೀರ, ಒಡಿಶಾ, ತೆಲಂಗಾಣ, ಉತ್ತರಾಖಂಡ ರಾಜ್ಯಗಳಿಗೆ ತಲಾ 1 ಮಂತ್ರಿ ಸ್ಥಾನ ದೊರೆತಿದೆ. 303 ಸಂಸದರಿ ರುವ ಬಿಜೆಪಿಗೆ 58 ಸಚಿವರ ದೊಡ್ಡ ಸಂಪುಟದಲ್ಲಿ ಸಹಜವಾಗಿಯೇ ದೊಡ್ಡ ಪಾಲು (54) ಸಿಕ್ಕಿದೆ. ಶಿವಸೇನೆ, ಶಿರೋ ಮಣಿ ಅಕಾಲಿ ದಳ, ಎಲ್‍ಜೆಪಿ ಮತ್ತು ಆರ್‍ಪಿಐ ತಲಾ 1 ಸ್ಥಾನ ಪಡೆದು ಕೊಂಡಿವೆ. 1 ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಮುನಿದಿರುವ ಜೆಡಿಯು, ಸದ್ಯ ಸಂಪುಟಕ್ಕೆ ಸೇರಲು ನಿರಾಕರಿಸಿದೆ. ಮುಂದಿನ ಸಂಪುಟ ವಿಸ್ತರಣೆ ವೇಳೆ ಸೇರ್ಪಡೆ ಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 58 ಸಚಿವರಲ್ಲಿ 13 ಮಂದಿ ರಾಜ್ಯಸಭೆ ಸದಸ್ಯರಿದ್ದರೆ, 45 ಮಂದಿ ಲೋಕಸಭೆಗೆ ಆಯ್ಕೆಯಾದವರಿದ್ದಾರೆ.

72 ವರ್ಷಗಳ ರಾಮ್‍ವಿಲಾಸ್ ಪಾಸ್ವಾನ್ ಸಂಪುಟದಲ್ಲಿನ ಅತಿ ಹಿರಿಯ ಸದಸ್ಯರಾಗಿದ್ದರೆ, 43 ವರ್ಷದ ಸ್ಮøತಿ ಇರಾನಿ ಕಿರಿಯ ಮಂತ್ರಿ.ಅಮಿತ್ ಶಾ, ಕರ್ನಾಟಕದ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಸೇರಿದಂತೆ ಒಟ್ಟು 16 ಮಂದಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ.

Translate »