ನವದೆಹಲಿ: ನಿನ್ನೆಯಷ್ಟೇ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿಯವರು ತಮ್ಮ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಬಿಜೆಪಿಯ ಚಾಣಕ್ಯ ಎಂದೇ ಕರೆಯಲ್ಪಡುವ ಅಮಿತ್ ಶಾ ಅವರಿಗೆ ಮಹತ್ವದ ಗೃಹ ಖಾತೆಯನ್ನು ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಸಿಬ್ಬಂದಿ, ಸಾರ್ವಜನಿಕ ಕುಂದು-ಕೊರತೆ ಮತ್ತು ಪಿಂಚಣಿ, ಪರಮಾಣು ಶಕ್ತಿ, ಬಾಹ್ಯಾಕಾಶ, ಎಲ್ಲಾ ಪ್ರಮುಖ ನೀತಿಗಳ ನಿರ್ವಹಣೆ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಕರ್ನಾಟಕದಿಂದ ಕೇಂದ್ರ ಸಂಪುಟ ಸೇರಿರುವ ಡಿ.ವಿ.ಸದಾನಂದಗೌಡರಿಗೆ ಕಳೆದ ಅವಧಿಯಲ್ಲಿ ದಿವಂಗತ…
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ‘ಕೈ’ ಮೇಲುಗೈ
June 1, 2019ಬೆಂಗಳೂರು: ರಾಷ್ಟ್ರದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಕರ್ನಾಟಕದ ಪ್ರಜ್ಞಾವಂತ ಮತದಾರರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೆ ಮೇ 29ರಂದು ರಾಜ್ಯದ 61 ಸ್ಥಳೀಯ ಸಂಸ್ಥೆ ಗಳಿಗೆ ನಡೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿ, ಕಾಂಗ್ರೆಸ್ ಮೊದಲ ಸಾಲಿನಲ್ಲಿದ್ದರೆ, ನಂತರದ ಸ್ಥಾನವನ್ನು ಬಿಜೆಪಿ ಮತ್ತು ಜೆಡಿಎಸ್ ಪಡೆದುಕೊಂಡಿವೆ. 61 ನಗರ ಸ್ಥಳೀಯ ಸಂಸ್ಥೆಗಳು ನಗರಸಭೆಯ 248, ಪಟ್ಟಣ ಪಂಚಾಯ್ತಿಯ 330…
ನಂಜನಗೂಡು ನಗರಸಭೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ
June 1, 2019ಮೈಸೂರು: ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಒಂದು ನಗರ ಸಭೆ, 6 ಪುರಸಭೆ ಮತ್ತು 4 ಪಟ್ಟಣ ಪಂಚಾಯ್ತಿಗಳ ಫಲಿತಾಂಶ ಹೊರಬಿದ್ದಿದ್ದು, ಮೈಸೂರು ಜಿಲ್ಲೆಯಲ್ಲಿ ಚುನಾವಣೆ ನಡೆದ ಏಕೈಕ ನಗರ ಸಭೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಜೆಡಿಎಸ್ 2, ಕಾಂಗ್ರೆಸ್, ಬಿಜೆಪಿ ತಲಾ ಒಂದು ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿವೆ. 2 ಪುರಸಭೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ. 4 ಪಟ್ಟಣ ಪಂಚಾಯ್ತಿಗಳ ಪೈಕಿ ಒಂದರಲ್ಲಿ ಕಾಂಗ್ರೆಸ್ ಅಧಿಪತ್ಯ ಸಾದಿಸಿದರೆ, ಉಳಿದ 3 ಪಪಂಗಳಲ್ಲಿ ಅತಂತ್ರ…
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆ
June 1, 2019ಬೆಂಗಳೂರು: ಕರ್ನಾಟಕ ಸುರಕ್ಷಿತ ವಲಯದಲ್ಲಿದ್ದು, ರಾಜ್ಯದ ಜನತೆ ಆತಂಕಪಡುವ ಅಗತ್ಯ ವಿಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ನಗರದ ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಗ್ರೆನೇಡ್ ಇದ್ದರೂ, ಅದರಲ್ಲಿ ಸ್ಫೋಟಕ ವಸ್ತುಗಳು ಇರಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದರು. ಹಳಿಗಳ ಮೇಲೆ ಗ್ರೆನೇಡ್ ಇರು ವುದನ್ನು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಬಾಂಬ್…
ಒಳ ಚರಂಡಿ ಕಾಮಗಾರಿಗೆ ಶಾಸಕ ರಾಮದಾಸ್ ಗುದ್ದಲಿಪೂಜೆ
June 1, 2019ಮೈಸೂರು: ಮೈಸೂ ರಿನ ವಿದ್ಯಾರಣ್ಯಪುರಂ ಅಕ್ಕಮಹಾದೇವಿ ರಸ್ತೆ ಪೆಟ್ರೋಲ್ ಬಂಕ್ ಎದುರು 50 ಲಕ್ಷ ರೂ. ಅಂದಾಜು ವೆಚ್ಚದ ಒಳಚರಂಡಿ ಕಾಮಗಾರಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು. ಮೈಸೂರು ಮಹಾನಗರಪಾಲಿಕೆ ಒಳಚರಂಡಿ ವಿಭಾಗದ ವತಿಯಿಂದ ನಿರ್ಮಿಸಲಾಗುವ ಕಾಮ ಗಾರಿಯಲ್ಲಿ ವಿದ್ಯಾರಣ್ಯ ಪುರಂ ಅಕ್ಕಮಹಾದೇವಿ ರಸ್ತೆಯಿಂದ ಬಾಂಬೆ ಟಿಫಾನೀಸ್ ಮುಖಾಂತರ 30ನೇ ಅಡ್ಡ ರಸ್ತೆಯಲ್ಲಿರುವ ಮುಖ್ಯ ಒಳ ಚರಂಡಿ ಕೊಳವೆ ಮಾರ್ಗದವರೆಗೆ ಒಳಚರಂಡಿ ಕೊಳವೆ ಮಾರ್ಗವನ್ನು ಅಳವಡಿಸಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ಈ ಸಂದರ್ಭದಲ್ಲಿ…
ಪಾರಂಪರಿಕ ವಿನ್ಯಾಸಕ್ಕೆ ಧಕ್ಕೆ ಬಾರದಂತೆ ರೈಲು ನಿಲ್ದಾಣ ಅಭಿವೃದ್ಧಿ
June 1, 2019ಮೈಸೂರು: ಪಾರಂಪರಿಕ ಸ್ವರೂಪಕ್ಕೆ ಧಕ್ಕೆ ಬಾರದಂತೆ ಮೈಸೂರು ರೈಲು ನಿಲ್ದಾಣ ಅಭಿವೃದ್ಧಿಪಡಿಸಲು ರೈಲ್ವೇ ಅಧಿಕಾರಿಗಳು ಸಮ್ಮತಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಾರಂಪರಿಕ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ರೈಲ್ವೇ ಅಧಿಕಾರಿಗಳು, ಪ್ರಯಾಣಿಕರ ಅನುಕೂಲಕ್ಕಾಗಿ ಸುರಕ್ಷತಾ ಕಾಮಗಾರಿ ಮಾಡುತ್ತಿದ್ದೇವೆ. ಪಾರಂಪರಿಕ ಕಟ್ಟಡದ ಮೂಲ ಸ್ವರೂಪವನ್ನು ಎಲ್ಲೂ ವಿರೂಪಗೊಳಿಸಿಲ್ಲ ಎಂದರು. ಪಾರಂಪರಿಕ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿ ಕಾರಿ ಅಭಿರಾಂ ಜಿ. ಶಂಕರ್ ಅವರು ರೈಲ್ವೇ ನಿಲ್ದಾಣ ಹಾಗೂ ಡಿಆರ್‍ಎಂ ಪಾರಂಪರಿಕ ಕಟ್ಟಡಗಳಿಗೆ ಬಿಳಿ ಮತ್ತು…
ನ್ಯಾಯಬೆಲೆ ಅಂಗಡಿಗಳಲ್ಲಿ ರೈತರು, ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ
June 1, 2019ಮೈಸೂರು: ಮೈಸೂರು ತಾಲೂಕಿನ ಹಲವು ಗ್ರಾಮಗಳ ನ್ಯಾಯ ಬೆಲೆ ಅಂಗಡಿಗಳಲ್ಲಿ ರೈತರು, ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅಂಥ ನ್ಯಾಯ ಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾ ಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿದರು. ಮೈಸೂರಿನ ಮಿನಿ ವಿಧಾನಸೌಧದಲ್ಲಿ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಪಂಚಾಯಿತಿ ವ್ಯಾಪ್ತಿಯ ಕೆಡಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಆಹಾರ ಇಲಾಖೆ ಕುರಿತ ಚರ್ಚೆ ಸಂದರ್ಭ ದಲ್ಲಿ ಈ ವಿಚಾರ ತಿಳಿಸಿದರು….
ಚೆಲುವಾಂಬ ಪಾರ್ಕ್ ಬಳಿ ‘ಮಕ್ಕಳ ಸೈನ್ಸ್’ ಪಾರ್ಕ್
June 1, 2019ಮೈಸೂರು: ಮೈಸೂರಿನ ಚೆಲುವಾಂಬ ಪಾರ್ಕ್ ಬಳಿ ಸಿಎಫ್ ಟಿಆರ್‍ಐಗೆ ಹೊಂದಿಕೊಂಡಂತಿರುವ ಉದ್ಯಾನವನವನ್ನು ‘ಮಕ್ಕಳ ಸೈನ್ಸ್’ ಪಾರ್ಕ್ ಆಗಿ ಅಭಿವೃದ್ಧಿಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಶಾಸಕ ಎಲ್.ನಾಗೇಂದ್ರ ಅವರು ಸ್ಥಳೀಯ ಕಾರ್ಪೊರೇಟರ್‍ಗಳಾದ ಪ್ರಮೀಳಾ ಹಾಗೂ ಸುಬ್ಬಯ್ಯ ಅವರೊಂದಿಗೆ ಶುಕ್ರವಾರ ಬೆಳಿಗ್ಗೆ ಪಾರ್ಕ್‍ಗೆ ಭೇಟಿ ನೀಡಿ ಪರಿಶೀಲಿ ಸಿದರು. ಸ್ಥಳದಲ್ಲಿ ಹಾಜರಿದ್ದ ನಗರ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಕೃಷ್ಣ ಅವರು, ಈ ಹಿಂದೆ ಉದ್ಯಾನವನದ ಅರ್ಧ ಭಾಗದಲ್ಲಿ ಚಿಲ್ಡ್ರನ್ ಸೈನ್ಸ್ ಪಾರ್ಕ್, ಇನ್ನರ್ಧ ಭಾಗದಲ್ಲಿ ರೋಸ್ ಗಾರ್ಡನ್ ಮಾಡ…
ಭಾರತದಲ್ಲಿ ತಂಬಾಕಿಗೆ ವರ್ಷಕ್ಕೆ 27 ಸಾವಿರ ಜನ ಬಲಿ
June 1, 2019ಮೈಸೂರು: ತಂಬಾಕು ಸೇವನೆಯಿಂದ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ವಾರ್ಷಿಕ 60 ಲಕ್ಷ ಜನರು ವಿಶ್ವದಲ್ಲಿ, 27 ಸಾವಿರ ಜನ ಭಾರತದಲ್ಲಿ ಸಾವಿಗೀಡಾ ಗುತ್ತಿದ್ದಾರೆ. ಇನ್ನಾದರೂ ಜನರು ಎಚ್ಚೆತ್ತು ಕೊಂಡು ತಂಬಾಕು ಸೇವನೆಯಿಂದ ಹೊರಬರುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಸಲಹೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಭಾರತೀಯ ವೈದ್ಯ ಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ…
ಶಾಲಾ-ಕಾಲೇಜು ಹಂತದಲ್ಲೇ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮೂಹ
June 1, 2019ಮೈಸೂರು: ಧೂಮ ಪಾನ ಹಾಗೂ ತಂಬಾಕು ಸೇವನೆಯಂತಹ ದುಶ್ಚಟಗಳಿಂದಾಗಿಯೇ ಹಲವರು ಶಾಲಾ ಹಂತದಲ್ಲಿಯೇ ವಿದ್ಯಾಭÁ್ಯಸ ಮೊಟಕು ಗೊಳಿಸುತ್ತಿದ್ದಾರೆ ಎಂದು ಶಾಸಕ ಎಸ್.ಎ. ರಾಮದಾಸ್ ವಿಷಾದ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿರ ಸಂಜೀ ವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್, ಮಹಾರಾಣಿ ಮಹಿಳಾ ಪದವಿ ಪೂರ್ವ ಕಾಲೇಜು, ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯಲ್ಲಿ ನಡೆದ `ವಿಶ್ವ ತಂಬಾಕು ವಿರೋಧಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀ ಚಿನ ದಿನಗಳಲ್ಲಿ ಯುವ ಸಮೂಹ ದುಶ್ಚಟ ಗಳಿಗೆ ದಾಸರಾಗುತ್ತಿದ್ದಾರೆ. ಶಾಲಾ…










