ಮೈಸೂರು

ಅಮೆರಿಕದಲ್ಲಿ `ಹೌಡಿ ಮೋದಿ’

September 23, 2019

ಹೂಸ್ಟನ್ (ಅಮೇರಿಕಾ), ಸೆ.22-ಅಮೇರಿಕಾದ ಹೂಸ್ಟನ್‍ನಲ್ಲಿ ಇಂದು ನಡೆದ `ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ನವ ಭಾರತದ ಚಿತ್ರಣವನ್ನು ತೆರೆದಿಟ್ಟ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ್ದನ್ನು ಸಮರ್ಥಿಸಿಕೊಂಡರು.
ಒಬ್ಬನೇ ಒಬ್ಬ ಭಾರತೀಯ ವಿಕಾಸದಿಂದ ದೂರ ಉಳಿ ಯುವುದನ್ನು ನಾವು ಸಹಿಸುವುದಿಲ್ಲ. ನಮಗೆ ದಶಕಗಳಿಂದ ತಲೆನೋವಾಗಿದ್ದ ಒಂದು ವಿಷಯಕ್ಕೆ ನಾವು ಮೊನ್ನೆ-ಮೊನ್ನೆಯಷ್ಟೇ ಫೇರ್ ವೆಲ್ ನೀಡಿದ್ದೇವೆ. (ಈ ವೇಳೆ ನೆರೆದಿದ್ದ ಸಭಿಕರು ಭಾರೀ ಕರತಾಡನದ ಮೂಲಕ ಹರ್ಷ ವ್ಯಕ್ತಪಡಿ ಸಿದರು) ಅದೇ 370ನೇ ವಿಧಿ. ಈ ವಿಧಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ಪ್ರದೇಶದ ಜನರ ಅಭಿವೃದ್ಧಿಗೆ ಬಹುದೊಡ್ಡ ತೊಡಕಾಗಿತ್ತು. ಅಲ್ಲಿ ಮಹಿಳೆಯರು, ಬಡವರು, ಮಕ್ಕಳು ಮತ್ತು ದಲಿತರ ಮೇಲೆ ನಡೆಯುತ್ತಿದ್ದ ಶೋಷಣೆಗಳಿಗೆ ಅಂತ್ಯ ಹಾಡಲಾಗಿದೆ. ನಮ್ಮ ಈ ನಿರ್ಧಾರವನ್ನು ಸಂಸತ್ತಿನ ಎರಡೂ ಸದನಗಳೂ ಭಾರೀ ಬಹುಮತದಿಂದ ಸಮರ್ಥಿಸಿಕೊಂಡಿವೆ. ಇದಕ್ಕಾಗಿ ನಮ್ಮ ದೇಶದ ಎಲ್ಲಾ ಸಂಸದರಿಗೂ ನೀವೆಲ್ಲರೂ ಸ್ಟ್ಯಾಂಡಿಂಗ್ ಒವೇಶನ್ ನೀಡಬೇಕು ಎಂದರು.

ನಮ್ಮ ಈ ನಿರ್ಧಾರ ಆತಂಕವಾದಿಗಳಿಗೆ ಮತ್ತು ಆತಂಕವಾದ ವನ್ನು ಪೋಷಿಸುವವರಿಗೆ ತಲೆನೋವಾಗಿದೆ. ಅಮೆರಿಕಾದ 9/11 ಆಗಿರಬಹುದು, ಮುಂಬಯಿಯ 26/11 ಇರಬಹುದು, ಇದರ ಸಂಚುದಾರರು ಎಲ್ಲಿ ಅಡಗಿದ್ದಾರೆ ಎಂದು ವಿಶ್ವಕ್ಕೇ ಗೊತ್ತಿದೆ. ಭಯೋ ತ್ಪಾದನೆ ವಿರುದ್ಧ ನಾವೆಲ್ಲರೂ ನಿರ್ಣಾಯಕ ಸಮರ ನಡೆಸುವ ಸಮಯ ಬಂದಿದೆ. ಆತಂಕವಾದದ ವಿರುದ್ಧ ಪ್ರಬಲ ಮನೋ ಬಲದಿಂದ ಹೋರಾಡುತ್ತಿರುವ ಅಧ್ಯಕ್ಷ ಟ್ರಂಪ್ ಅವರಿಗೂ ಒಂದು ಸ್ಟ್ಯಾಂಡಿಂಗ್ ಒವೇಶನ್ ನೀಡಬೇಕು
ಎಂದು ಮೋದಿ ಮನವಿ ಮಾಡಿದರು. ಸಂಕಷ್ಟಗಳ ಆಗಸದಲ್ಲೇ ನನ್ನ ಭರವಸೆಗಳ ಅರಮನೆ ಇದೆ. ಭಾರತ ಇಂದು ಸಮಸ್ಯೆಗಳನ್ನು ಮೂಲದಿಂದಲೇ ಪರಿಹರಿಸುತ್ತಿದೆ. 5 ಟ್ರಿಲಿಯನ್ ಆರ್ಥಿಕತೆಯತ್ತ ನಮ್ಮ ಚಿತ್ತ ನೆಟ್ಟಿದೆ. ಇಲ್ಲಿ ನಾವು ಜನಸ್ನೇಹಿ, ಹೂಡಿಕೆದಾರ ಸ್ನೇಹಿ ಪರಿಸರವನ್ನು ನಿರ್ಮಿಸಿದ್ದೇವೆ. ನಮ್ಮ ಬೆಳವಣಿಗೆ ದರ ಸರಾಸರಿ 7ರ ಮಟ್ಟದಲ್ಲಿದೆ. ಟ್ರಂಪ್ ನನ್ನನ್ನು ಟಫ್ ನೆಗೋಷಿಯೇಟರ್ ಎಂದು ಕರೆಯುತ್ತಾರೆ ಆದರೆ ಟ್ರಂಪ್ ಅವರೇನೂ ಚೌಕಾಶಿ ಮಾಡುವುದರಲ್ಲಿ ಕಡಿಮೆಯೆನಿಲ್ಲ, ಅವರಿಂದ ನಾನು ಬಹಳಷ್ಟು ಕಲಿಯುತ್ತಿದ್ದೇನೆ. ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಛೇರಿಗಳು ಅನಿವಾಸಿ ಭಾರತೀಯರ ಪಾಲಿನ ಆಪತ್ಬಾಂಧವ ಕೇಂದ್ರಗಳಾಗಿವೆ ಎಂದು ಅವರು ಹೇಳಿದರು.

ನಾವಿಂದು ಇಲ್ಲಿ ಹೊಸ ಇತಿಹಾಸ ಮತ್ತು ಹೊಸ ಬಾಂಧವ್ಯ ರೂಪುಗೊಳ್ಳುವುದನ್ನು ಕಾಣುತ್ತಿದ್ದೇವೆ. ಭಾರತ ಮತ್ತು ಅಮೆರಿಕಾದ ಹೊಸ ಬಾಂಧವ್ಯದ ಶಕ್ತಿ ಇಲ್ಲಿ ಅನಾವರಣ ಗೊಂಡಿದೆ. ನಾನು ಶತಕೋಟಿ ಭಾರತೀಯರ ಆದೇಶದ ಮೇಲೆ ಕಾರ್ಯ ನಿರ್ವಹಿಸುವ ಸಾಮಾನ್ಯ ವ್ಯಕ್ತಿಯಾಗಿದ್ದೇನೆ. ನೀವು `ಹೌಡಿ ಮೋದಿ’ ಎಂದು ಕೇಳಿದರೆ, ನಾನು `ಭಾರತದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ’ ಎಂದು ಹೇಳುತ್ತೇನೆ. ವಿವಿಧ ಭಾಷೆಗಳಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ ಮೋದಿ ನಿಮಗೆ ಆಶ್ಚರ್ಯವಾಗ ಬಹುದು. ನಾನು ಹೇಳಿದ್ದು ಎಲ್ಲಾ ಚೆನ್ನಾಗಿದೆ ಎಂದು ಭಾರತದ ವಿವಿಧ ಭಾಷೆಗಳಲ್ಲಿ ನಾನು ಹೇಳಿದ್ದೇನೆ. ನಮ್ಮಲ್ಲಿರುವ ಭಾಷಾ ವೈವಿಧ್ಯತೆಯೇ ನಮ್ಮ ಶಕ್ತಿಯಾಗಿದೆ. ನಾವೆ ಲ್ಲರೂ ವೈವಿಧ್ಯತೆಯಲ್ಲಿ ಏಕತೆಯನ್ನು ಅದ್ಭುತವಾಗಿ ಮಾಡಿದೆ. ನಮ್ಮಲ್ಲಿ ವೈವಿಧ್ಯತೆಯೇ ಪ್ರಜಾಪ್ರಭುತ್ವವನ್ನು ಏಕರಥದಲ್ಲಿ ಕೊಂಡೊಯ್ಯುತ್ತಿದೆ. ಇಲ್ಲಿ ಸೇರಿರುವ 50 ಸಾವಿರ ಜನ ನಮ್ಮ ದೇಶದ ವೈವಿಧ್ಯತೆಯ ಪ್ರತಿನಿಧಿಗಳಾಗಿದ್ದಾರೆ ಎಂದು ಮೋದಿ ಹೇಳಿದರು.

610 ಮಿಲಿಯನ್ ಮತದಾರರು ಈ ಬಾರಿಯ ಮತದಾನದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದರಲ್ಲೂ 80 ಮಿಲಿಯನ್ ಯುವಮತದಾರರು ಮೊದಲ ಬಾರಿಗೆ ಮತ ಚಲಾಯಿಸಿದ್ದರು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರತಿನಿಧಿಗಳು ಆರಿಸಿ ಬಂದಿದ್ದೂ ಇತಿಹಾಸವಾಗಿದೆ. ಇದೆಲ್ಲವೂ ಯಾರಿಂದ ಸಾಧ್ಯವಾಯಿತೆಂದು ಕೇಳಿದರೆ, ಇದೆಲ್ಲಾ ಮೋದಿಯ ಕಾರಣದಿಂದ ಆದದ್ದಲ್ಲ, ಬದಲಾಗಿ ಹಿಂದೂಸ್ಥಾನಿ ವಾಸಿಗಳ ಕಾರಣದಿಂದ ಸಾಧ್ಯವಾಯಿತು. ಇಂದು ಭಾರತದಲ್ಲಿ ಅತೀಹೆಚ್ಚು ಚರ್ಚೆ ಯಾಗುತ್ತಿರುವ ವಿಚಾರವೇ `ವಿಕಾಸ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬುದು ನಮ್ಮ ಮೂಲಮಂತ್ರ ವಾಗಿದೆ. ನಮ್ಮ ಬಹುದೊಡ್ಡ ಸಂಕಲ್ಪವೇ ನವ ಭಾರತ. ಇದನ್ನು ಪೂರ್ಣಗೊಳಿಸುವುದಕ್ಕೆ ನಾವೆಲ್ಲಾ ಆಹೋರಾತ್ರಿ ಶ್ರಮಪಡುತ್ತಿದ್ದೇವೆ. ನಾವಿಂದು ನಮಗೆ ಸ್ಪರ್ಧೆ ನೀಡುತ್ತಿದ್ದೇವೆ; ನಾವಿಂದು ನಮ್ಮಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ನಮ್ಮ ಗುರಿ ಎತ್ತರದ್ದಾಗಿದೆ ಮತ್ತು ನಾವು ಉನ್ನತವಾದುದನ್ನೇ ಸಾಧಿಸುತ್ತಿದ್ದೇವೆ. ಗ್ರಾಮೀಣ ಭಾರತದ ಸ್ವಚ್ಛತೆ 50 ವರ್ಷ ಗಳಿಂದ ಶೇ.38 ಇತ್ತು. ಕಳೆದ ವರ್ಷಗಳಲ್ಲಿ ನಾವು 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಅಡುಗೆ ಅನಿಲ, ಗ್ರಾಮೀಣ ರಸ್ತೆ ಅಭಿವೃದ್ಧಿ, ಬ್ಯಾಂಕ್ ಖಾತೆ ತೆರೆಯುವಿಕೆ, ಮೂಲಭೂತ ಸೌಕರ್ಯ ಅಭಿವೃದ್ದಿ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ದೇಶದಲ್ಲಿ ಸಾಮಾನ್ಯ ಪ್ರಜೆಯೊಬ್ಬನ ಸ್ಥಿತಿಗತಿ ಉತ್ತಮ ಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ದೇಶದಲ್ಲಿ ಸಾಮಾನ್ಯ ಪ್ರಜೆಯೊಬ್ಬನ ಸ್ಥಿತಿಗತಿ ಉತ್ತಮಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ. ಇವತ್ತು ಮಾಹಿತಿ ಎನ್ನುವುದು ತೈಲದಷ್ಟೇ ಮಹತ್ವದ್ದಾಗಿದೆ. ಅದಕ್ಕಿಂದು ಬಂಗಾರದ ಬೆಲೆ ಇದೆ. ಅತೀ ಕಡಿಮೆ ದರದಲ್ಲಿ ಡೇಟಾ ಲಭ್ಯವಾಗುವ ದೇಶವಿದ್ದರೆ ಅದು ಭಾರತದಲ್ಲಿ ಮಾತ್ರ. ನಮ್ಮಲ್ಲಿ 1 ಜಿಬಿ ಡಾಟಾದ ಬೆಲೆ ಬಹಳ ಕಮ್ಮಿ ಇದೆ. ಡಿಜಿಟಲ್ ಇಂಡಿಯಾ ನಿರ್ಮಾಣ ದಲ್ಲಿ ಡೇಟಾಗಳ ಪಾತ್ರ ಮಹತ್ವದ್ದಾಗಿದೆ. ಹೊಸ ಪಾಸ್ ಪೋರ್ಟ್ ಮಾಡಿಸಿಕೊಳ್ಳುವುದು ನಮ್ಮಲ್ಲಿ ಸುಲಭವಾಗಿದೆ. ಹಾಗೆಯೇ ತೆರಿಗೆ ಪಾವತಿ ವಿಧಾನವನ್ನೂ ಸಹ ಸುಧಾರಿಸಲಾಗಿದೆ. ಈ ಆಗಸ್ಟ್ 31ರಂದು ಒಂದೇ ದಿನ 5 ಮಿಲಿಯನ್ ಜನರು ತಮ್ಮ ಇನ್ ಕಂ ಟ್ಯಾಕ್ಸ್ ಅನ್ನು ಆನ್ ಲೈನ್ ಮೂಲಕ ಪಾವತಿಸಿದ್ದಾರೆ. ವೆಲ್ಫೇರ್‍ಗೆ ಕೊಟ್ಟಷ್ಟೇ ಮಹತ್ವವನ್ನು ಫೇರ್ ವೆಲ್ ಕೂಡಾ ನಾವು ನೀಡುತ್ತಿದ್ದೇವೆ. ಹಳೆಯ ಕಾನೂನುಗಳಿಗೆ ನಾವು ಈಗಾಗಲೇ ತಿಲಾಂಜಲಿ ನೀಡಿದ್ದೇವೆ. ಜಿ.ಎಸ್.ಟಿ. ಜಾರಿಗೆ ತರುವ ಮೂಲಕ ಹೊಸ ಸಾಧನೆಯನ್ನು ಮಾಡಿದ್ದೇವೆ. ಏಕ ದೇಶ ಏಕ ತೆರಿಗೆ ಪದ್ಧತಿ ನಮ್ಮಲ್ಲಿ ಜಾರಿಗೊಂಡಿದೆ. ಹಲವಾರು ಬೇನಾಮಿ ಕಂಪೆನಿಗಳಿಗೆ ನಾವು ಫೇರ್ ವೆಲ್ ನೀಡಿದ್ದೇವೆ ಎಂದು ಮೋದಿ ಹೇಳಿದರು.

ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ

ಅಮೆರಿಕ ಮತ್ತು ಭಾರತ ರಕ್ಷಣಾ ಪಡೆಗಳು ಜತೆಗೂಡಿ ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಬದ್ಧತೆ ಯಿಂದ ಹೋರಾಟ ನಡೆಸಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೂಸ್ಟನ್‍ನ `ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಘೋಷಿಸಿದರು. ಟ್ರಂಪ್ ಅವರ ಈ ಘೋಷಣೆಗೆ ಹೂಸ್ಟನ್‍ನ ಎನ್‍ಆರ್‍ಜಿ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಜಯಶಂಕರ್, ಅಮೆರಿಕದ ಹಲವು ಸೆನೆಟರ್‍ಗಳು, ಹೂಸ್ಟನ್‍ನ ಮೇಯರ್, ಟೆಕ್ಸಾಸ್‍ನ ಗವರ್ನರ್ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ 50 ಸಾವಿರ ಅನಿವಾಸಿ ಭಾರತೀಯರು ಮತ್ತು ಅಮೆರಿಕ ಪ್ರಜೆಗಳು ಭಾರೀ ಕರತಾಡನ ಮಾಡಿ ಸಮ್ಮತಿ ಸೂಚಿಸಿದರು. ಅಷ್ಟೇ ಅಲ್ಲದೆ, ಅಮೆರಿಕ ಮತ್ತು ಭಾರತದ ಸೇನೆಗಳು ಜಂಟಿ ಸಮರಾಭ್ಯಾಸ ಮಾಡಲು, ತಮ್ಮ ತಮ್ಮ ದೇಶದ ಗಡಿಗಳನ್ನು ಸಂರಕ್ಷಿಸಿಕೊಳ್ಳಲು ಸಮರ್ಥವಾಗಿವೆ ಎಂದು ಹೇಳಿದ ಟ್ರಂಪ್, `ನಾವು ನಮ್ಮ ದೇಶದ ಗಡಿಗಳನ್ನು ರಕ್ಷಿಸಿಕೊಳ್ಳಲೇಬೇಕು’.
ನಾವು ಮೆಕ್ಸಿಕೊ ಗಡಿಯಲ್ಲಿ ಅಕ್ರಮವಾಗಿ ಒಳನುಸುಳುವವರು ತಡೆಯುವಂತೆಯೇ ಭಾರತವೂ ತನ್ನ ಗಡಿಗಳನ್ನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ ಎಂದರು. ಅಮೆರಿಕ ಮತ್ತು ಭಾರತದ ಗಡಿ ಪ್ರದೇಶಗಳತ್ತ ನಿಗಾ ಇಡುವುದು ಬಹಳ ಮುಖ್ಯ ವಾಗಿದೆ. ನಮಗೆ ನಮ್ಮ ಪ್ರಜೆಗಳ ಹಿತರಕ್ಷಣೆ ಎಲ್ಲದಕ್ಕಿಂತಲೂ ಪ್ರಮುಖವಾದುದು ಎಂದು ಹೇಳಿದರು. ಅಮೆರಿಕ ಅಧ್ಯಕ್ಷರ ಈ ಮಾತುಗಳು ನೇರವಾಗಿ ಮೆಕ್ಸಿಕೊ ದೇಶ ವನ್ನೂ, ಪರೋಕ್ಷವಾಗಿ ಪಾಕಿಸ್ತಾನ ಮತ್ತು ಚೀನಾವನ್ನು ಉದ್ದೇಶಿಸಿಯೇ ಹೇಳಿದಂತೆ ಇತ್ತು. ಭಾರತ ಅಮೆರಿಕದ ಪರಮಾಪ್ತ ಮಿತ್ರನಾಗಿದೆ. ಅಮೆರಿಕವೂ ಸದಾ ಕಾಲ ಭಾರತದ ಜತೆಗಿರಲಿದೆ. ಪ್ರತಿಹಂತದಲ್ಲೂ ಭಾರತದ ಜತೆ ಕೈಜೋಡಿಸಲಿದೆ ಎಂದು ಭರವಸೆಯ ಮಾತನಾಡಿದರು. ಇದೇ ವೇಳೆ ಸಭಿಕರ ಜತೆ ಮುಂದಿನ ಸಾಲಿನಲ್ಲಿ ಆಸೀನರಾಗಿದ್ದ ಮೋದಿ ಅವರತ್ತ ಕೈತೋರಿ ಮಾತನಾಡಿದ ಟ್ರಂಪ್, `ಪಿಎಂ ಮೋದಿ ನಾನು ನಿಮ್ಮ ಜತೆ ಇನ್ನು ಮುಂದೆಯೂ ಜತೆಯಾಗಿ ಕೆಲಸ ಮಾಡಲು ಇಚ್ಛಿಸುತ್ತೇನೆ’ ಎಂದು ವಚನ ನೀಡಿದರು. ಭಾರತ, ಭಾರತೀಯರು, ಅನಿವಾಸಿ ಭಾರತೀಯರನ್ನು ಪ್ರಶಂಸಿಸುತ್ತಲೇ ಮಾತು ಮುಂದುವರಿಸಿದ ಅಮೆರಿಕ ಅಧ್ಯಕ್ಷರು, ಭಾರತದ ಜತೆಗಿನ ವಾಣಿಜ್ಯ ಸಂಬಂಧದ ವೃದ್ಧಿಯ ಬಗೆಗೂ ಮಾತನಾಡಿದರು.

ಇಂಧನ ಸಹಕಾರ: ಇಂಧನ ವಿಚಾರದಲ್ಲಿ ಭಾರತ ಚಿಂತೆ ಮಾಡುವುದು ಬೇಡ. ಭಾರತಕ್ಕೆ ಎಲ್‍ಎನ್‍ಜಿ ಸೇರಿದಂತೆ ಇಂಧನ ದ್ರವ್ಯಗಳನ್ನು ಒದಗಿಸುವ ವಿಚಾರದಲ್ಲಿ ಅಮೆರಿಕಕ್ಕೆ ಯಾವುದೇ ಸಮಸ್ಯೆ ಇಲ್ಲ. ಸದ್ಯದಲ್ಲೆ ಭಾರತಕ್ಕೆ ಬೃಹತ್ ಪ್ರಮಾಣದಲ್ಲಿ ಎಲ್‍ಎನ್‍ಜಿ (ಅನಿಲ ಇಂಧನ) ಅಮೆರಿಕ ಪೂರೈಸಲಿದೆ. ಎನರ್ಜಿ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರ ನೀಡಲಿದೆ ಎಂದೂ ಭರವಸೆ ನೀಡಿದರು. ಇದೇ ವೇಳೆ, ಅಮೆರಿಕದ ಅಭಿವೃದ್ಧಿ ಯಲ್ಲಿ ಅನಿವಾಸಿ ಭಾರತೀಯ ಪ್ರಜೆಗಳ ಕೊಡುಗೆಯನ್ನು ಬಹಳವಾಗಿ ಪ್ರಶಂಸಿಸಿದ ಟ್ರಂಪ್ ಅವರು, ಭಾರತೀಯರು ಅಮೆರಿಕದಲ್ಲಿ 800 ಶತಕೋಟಿ ಡಾಲರ್‍ಗೂ ಅಧಿಕ ಪ್ರಮಾಣದಲ್ಲಿ ಇಲ್ಲಿ ಬಂಡವಾಳ ಹೂಡಿದ್ದಾರೆ. ನೂರಾರು ಕಂಪೆನಿಗಳನ್ನು ಸ್ಥಾಪಿಸಿ ಸಾವಿರಾರು ಅಮೆರಿಕನ್ನರಿಗೆ ಉದ್ಯೋಗವನ್ನೂ ಸೃಷ್ಟಿಸಿಕೊಟ್ಟಿದ್ದಾರೆ. ಅಮೆರಿಕದ ಪ್ರಗತಿಗಾಗಿ ಪ್ರತಿದಿನವೂ ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಅಮೆರಿಕ ದಲ್ಲಿರುವ 40 ಲಕ್ಷ ಭಾರತೀಯರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಕ್ರೀಡಾಂಗಣದಲ್ಲಿ ನೆರೆದಿದ್ದ 50 ಸಾವಿರ ಸಭಿಕರನ್ನು ಕಂಡು ಉತ್ತೇಜಿತರಾದ ಟ್ರಂಪ್, 30 ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿದರು.

ಸಾಕಷ್ಟು ನೋವು ಅನುಭವಿಸಿದ್ದೀರಿ, ನವ ಕಾಶ್ಮೀರ ನಿರ್ಮಾಣ ಮಾಡೋಣ

ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಸಾಕಷ್ಟು ನೋವು ಅನುಭವಿ ಸಿದ್ದೀರಿ, ನವ ಕಾಶ್ಮೀರ ನಿರ್ಮಾಣ ಮಾಡೋಣ ಎಂದು ಅಭಯ ನೀಡಿದ್ದಾರೆ. ಒಂದು ವಾರಗಳ ಕಾಲ ಅಮೆರಿಕ ಪ್ರವಾಸ ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಶನಿವಾರ ಅಮೆರಿಕದ ಹೂಸ್ಟನ್‍ನಲ್ಲಿ ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿಯಾಗಿ ಸಂವಾದ ನಡೆಸಿದರು. ಈ ವೇಳೆ ಕಾಶ್ಮೀರಿ ಪಂಡಿತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ನೀವು ಸಾಕಷ್ಟು ನೋವು ಅನುಭವಿಸಿದ್ದೀರಿ. ಇನ್ನು ಮುಂದೆ ನಾವು ಎಲ್ಲರೂ ಸೇರಿ ನವ ಕಾಶ್ಮೀರವನ್ನು ನಿರ್ಮಾಣ ಮಾಡೋಣ ಎಂದು ಅವರು ಹೇಳಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದೆ ಎಂದು ಹೇಳಿದ್ದಾರೆ. ಇನ್ನು ಸಂವಾದದಲ್ಲಿ ಕಾಶ್ಮೀರಿ ಪಂಡಿತರೊಬ್ಬರು ಪ್ರಧಾನಿ ಮೋದಿಯವರ ಕೈಗೆ ಮುತ್ತನ್ನಿಟ್ಟು 7 ಲಕ್ಷ ಕಾಶ್ಮೀರಿ ಪಂಡಿತರ ಪರವಾಗಿ ಧನ್ಯವಾದ ಅರ್ಪಿಸಿ ದರು. ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಪಡಿಸಲು ತೆಗೆದು ಕೊಂಡ ದಿಟ್ಟ ನಿರ್ಧಾರಕ್ಕಾಗಿ ಕಾಶ್ಮೀರಿ ಪಂಡಿತರ ನಿಯೋಗ ಮೋದಿ ಅವರಿಗೆ ಧನ್ಯವಾದ ಅರ್ಪಿಸಿತು. ಬಳಿಕ ಸುದ್ದಿ ಸಂಸ್ಥೆ ಎಎನ್‍ಐ ಜೊತೆ ಮಾತನಾಡಿದ ಕಾಶ್ಮೀರಿ ಪಂಡಿತ್ ಪಿಎಂ ಸುರಿಂದರ್ ಕೌಲ್, ಕಳೆದ 70 ವರ್ಷಗಳಲ್ಲಿ ಕಾಶ್ಮೀರಿ ಪಂಡಿತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದೀಗ ನೂತನ ಕಾಶ್ಮೀರ ನಿರ್ಮಿಸುವಲ್ಲಿ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ಮೋದಿ ತಿಳಿಸಿದ್ದಾಗಿ ಹೇಳಿದರು. ಮೋದಿ ಅವರು ಬೋಹ್ರಾ ಮುಸ್ಲಿಮರ ನಿಯೋಗ ಮತ್ತು ಸಿಖ್ ಸಮುದಾಯದ ಸದಸ್ಯರ ನಿಯೋಗವನ್ನೂ ಭೇಟಿಯಾದರು. ಸಿಖ್ ಸಮು ದಾಯವು ಮೋದಿ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದು, 1984ರ ಸಿಖ್ ನರಮೇಧದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿತು. ದೆಹಲಿ ವಿಮಾನ ನಿಲ್ದಾಣದ ಹೆಸರನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುನಾನಕ್ ದೇವ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾಯಿಸ ಬೇಕು ಎಂದು ಸಿಖ್ ಸಮುದಾಯ ಒತ್ತಾಯಿಸಿತು.

Translate »