ದಸರಾ ಕಾರ್ಯಕ್ರಮಗಳಿಗೆ ಇಲ ನೀತಿ ಸಂಹಿತೆ ಕರಿನೆರಳು
ಮೈಸೂರು

ದಸರಾ ಕಾರ್ಯಕ್ರಮಗಳಿಗೆ ಇಲ ನೀತಿ ಸಂಹಿತೆ ಕರಿನೆರಳು

September 23, 2019
  • ಹುಣಸೂರು ಉಪವಿಭಾಗ ವ್ಯಾಪ್ತಿಗಷ್ಟೇ ನಿಯಮ ಮೀಸಲು
  • ಹೊಸ ಯೋಜನೆಗಳನ್ನು ಪ್ರಕಟಿಸದೇ ನಾನಾ ಕಾರ್ಯಕ್ರಮಗಳಲ್ಲಿಜನಪ್ರತಿನಿಧಿಗಳು ಪಾಲ್ಗೊಳ್ಳಬಹುದು
  • ಉಪಸಮಿತಿ ಅಧ್ಯಕ್ಷರು, ಸದಸ್ಯರು ವೇದಿಕೆ ಹಂಚಿಕೊಳ್ಳಲು ಅನುಮತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವಿವಿಧ ಕಾರ್ಯ ಕ್ರಮಗಳಿಗೆ ಚುನಾವಣಾ ನೀತಿಸಂಹಿತೆಯಿಂದ ವಿನಾಯಿತಿ ದೊರೆತಿದ್ದು, ಜನಪ್ರತಿನಿಧಿ ಗಳು ಪಾಲ್ಗೊಳ್ಳಲು ಅವಕಾಶ ಸಿಕ್ಕಂತಾಗಿದೆ. ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿರುವುದರಿಂದ ಹುಣಸೂರು ಉಪ ವಿಭಾಗದ ವ್ಯಾಪ್ತಿಗಷ್ಟೇ ನೀತಿ ಸಂಹಿತೆ ಅನ್ವಯವಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅ.21ರಂದು ಉಪಚುನಾ ವಣೆ ದಿನಾಂಕ ನಿಗದಿಯಾಗಿದ್ದು, ಸೆ.21ರಿಂದಲೇ ನೀತಿಸಂಹಿತೆ ಜಾರಿಗೊಳಿಸಿ ಚುನಾವಣಾ ಆಯೋಗ ಆದೇಶಿಸಿತ್ತು. ಇದರಿಂದ ದಸರಾ ಮಹೋತ್ಸವದ ಕಾರ್ಯಕ್ರಮಗಳ ಮೇಲೆ ನೀತಿಸಂಹಿತೆಯ ಕರಿನೆರಳು ಬೀಳುವ ಆತಂಕವಿತ್ತು. ಅಲ್ಲದೇ ಯಾವುದೇ ಜನಪ್ರತಿನಿಧಿ ಗಳು ದಸರಾ ಕಾರ್ಯಕ್ರಮದ ವೇದಿಕೆಯಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಸಚಿವ ಕೆ.ಎಸ್.ಈಶ್ವರಪ್ಪ ಕರೆದಿದ್ದ ಅಧಿಕಾರಿಗಳ ಸಭೆಯನ್ನು ರದ್ದುಗೊಳಿಸಲಾಗಿತ್ತು. ಶನಿವಾರವೇ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ದಸರಾ ಕಾರ್ಯಕ್ರಮಗಳಿಗೆ ಚುನಾವಣಾ ನೀತಿ ಸಂಹಿತೆಯಿಂದ ವಿನಾಯಿತಿ ನೀಡುವುದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಸ್ಪಷ್ಟನೆ ಕೋರಿ ಪತ್ರ ಬರೆದಿ ದ್ದರು. ಆದರೆ ಇಂದು ಚುನಾವಣಾ ನೀತಿಸಂಹಿತೆಯ ಆದೇಶದ ಪ್ರತಿಯಲ್ಲಿ ಉಪ ಚುನಾ ವಣೆ ನಡೆಯುವ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದನ್ನು ಉಲ್ಲೇಖಿಸಲಾಗಿದೆ. ಇದರಿಂದ ದಸರಾ ಕಾರ್ಯ ಕ್ರಮಗಳಿಗೆ ಚುನಾವಣಾ ನೀತಿ ಸಂಹಿತೆಯಿಂದ ವಿನಾಯಿತಿ ದೊರೆತಂತಾಗಿದೆ.

zÀೃಢೀಕರಿಸಿದ ಜಿಲ್ಲಾಧಿಕಾರಿಗಳು: ದಸರಾ ಕಾರ್ಯಕ್ರಮಗಳಿಗೆ ನೀತಿ ಸಂಹಿತೆಯಿಂದ ವಿನಾಯಿತಿ ದೊರೆತಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನೀತಿ ಸಂಹಿತೆ ಕೇವಲ ಹುಣಸೂರು ಕ್ಷೇತ್ರಕ್ಕೆ ಮಾತ್ರ ಮೀಸಲಾಗಿದೆ. ಈ ಹಿನ್ನೆಲೆ ಯಲ್ಲಿ ದಸರಾ ಕಾರ್ಯಕ್ರಮಗಳಿಗೆ ವಿನಾಯಿತಿ ದೊರೆತ್ತಿದ್ದು, ಜನಪ್ರತಿ ನಿಧಿಗಳು ಪಾಲ್ಗೊಳ್ಳಬಹುದಾಗಿದೆ. ದಸರಾ ಕಾರ್ಯಕ್ರಮಗಳ ಪರಿಶೀಲನೆ, ವೇದಿಕೆ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಬಹುದಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಹೊಸ ಯೋಜನೆಗಳನ್ನು ಪ್ರಕಟಿಸುವಂತಿಲ್ಲ. ಕೇವಲ ದಸರಾಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನಪ್ರತಿನಿಧಿಗಳು ಭಾಗಿಯಾಗಲು ಯಾವುದೇ ಅಡ್ಡಿ ಇಲ್ಲ. ಕಾರ್ಯಕ್ರಮದ ಉಪ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ವೇದಿಕೆ ಹಂಚಿ ಕೊಳ್ಳಬಹುದಾಗಿದೆ ಎಂದು ಡಿಸಿ ಅಭಿರಾಂ ಜಿ.ಶಂಕರ್ ಸ್ಪಷ್ಟಪಡಿಸಿದರು.

Translate »