ದಸರಾ ವಿದ್ಯುತ್ ದೀಪಾಲಂಕಾರಕ್ಕೂ ಖದೀಮರು ಕತ್ತರಿ
ಮೈಸೂರು

ದಸರಾ ವಿದ್ಯುತ್ ದೀಪಾಲಂಕಾರಕ್ಕೂ ಖದೀಮರು ಕತ್ತರಿ

October 6, 2019

ಮೈಸೂರು, ಅ.5(ಎಸ್‍ಬಿಡಿ)- ಈ ಬಾರಿ ದಸರಾದಲ್ಲಿ ವಿದ್ಯುತ್ ದೀಪಾಲಂಕಾರ ಅತ್ಯಾಕರ್ಷಕವಾಗಿದ್ದು, ಸಾರ್ವಜನಿಕ ರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದಸರಾ ಪ್ರಯುಕ್ತ ಕಾರ್ಯಕ್ರಮಗಳು ನಡೆಯುವ ಸ್ಥಳಗಳು, ಜಂಬೂ ಸವಾರಿ ಸಾಗುವ ರಾಜಮಾರ್ಗ, ಪ್ರಮುಖ ರಸ್ತೆ, ವೃತ್ತಗಳು, ಸರ್ಕಾರಿ ಕಚೇರಿಗಳು ಹೀಗೆ ಎಲ್ಲಿ ನೋಡಿದರೂ ಜಗಮಗಿಸುವ ದೀಪಾಲಂಕಾರ ಕಣ್ಮನ ತಣಿಸುತ್ತಿದೆ. ಯುವ ಜನತೆ ಅಷ್ಟೇ ಅಲ್ಲದೆ ಎಲ್ಲಾ ವಯೋ ಮಾನದವರೂ ದೀಪಾಲಂಕಾರದೊಂದಿಗೆ ತಮ್ಮ ಸೆಲ್ಫೀ ಕ್ಲಿಕ್ಕಿಸಿಕೊಂಡು ವಾಟ್ಸಾಪ್ ಸ್ಟೇಟಸ್, ಫೇಸ್‍ಬುಕ್‍ನಲ್ಲಿ ಅಪೆÇ್ಲೀಡ್ ಮಾಡಿ, ಖುಷಿ ಪಡುತ್ತಿದ್ದಾರೆ. ಅಲ್ಲದೆ ಉತ್ತಮ ಕ್ಯಾಮರಾ ಮೂಲಕ ಫೆÇೀಟೋಶೂಟ್ ಮಾಡಿಸುವುದೂ ಸಾಮಾನ್ಯವಾಗಿದೆ. ಪ್ರವಾಸಿ ಗರು, ಸ್ಥಳೀಯರು ದೀಪಾಲಂಕಾರದ ಸೊಬಗನ್ನು ಸವಿದು, ಸಂಭ್ರಮಿಸುತ್ತಿದ್ದಾರೆ.

ಆದರೆ ಇದರ ನಡುವೆ ಹೀನ ಮನಃಸ್ಥಿತಿಯ ಕೆಲವರು ದೀಪಾಲಂಕಾರಕ್ಕೇ ಕತ್ತರಿ ಹಾಕುವ ದುಷ್ಕೃತ್ಯಕ್ಕೆ ಇಳಿದಿರುವುದು ವಿಷಾದನೀಯ. ನವರಾತ್ರಿಯಲ್ಲಿ ಮೈಸೂರಿಗೆ ಮೆರಗು ನೀಡುವುದರ ಜೊತೆಗೆ ಪ್ರವಾಸಿಗರಿಗೆ ಮುದ ನೀಡುವ ಉದ್ದೇಶದೊಂದಿಗೆ ಮಾಡಲಾಗಿರುವ ದೀಪಾಲಂಕಾರ ದುಷ್ಕರ್ಮಿಗಳಿಗೆ ವರದಾನವಾಗಿದೆ.

ರಾತ್ರಿ ದೀಪಾಲಂಕಾರ ಆರಿಸಿದ ಬಳಿಕ ಖದೀಮರು ವಿದ್ಯುತ್ ದೀಪಗಳನ್ನು ಕದಿಯಲು ಆರಂಭಿಸಿದ್ದಾರೆ. ಅನೇಕ ಕಡೆ ಮರಗಳಿಗೆ ಸುತ್ತಿದ್ದ, ಜೋತು ಬಿಟ್ಟಿದ್ದ ಸೀರಿಯಲ್ ಸೆಟ್‍ಗಳು ಮಾತ್ರವಲ್ಲದೆ, ಎಲ್‍ಇಡಿ ಬಲ್ಬ್‍ಗಳೂ ಮಾಯವಾಗಿವೆ. ದೀಪಾಲಂಕಾರ ಆರಿಸುತ್ತಿದ್ದಂತೆ ಖದೀಮರು ದುಷ್ಕೃತ್ಯಕ್ಕಿಳಿಯುತ್ತಿದ್ದಾರೆ. ಹೆಚ್ಚು ಜನ ಸಂಚಾರವಿಲ್ಲದ ರಸ್ತೆಗಳಲ್ಲಿ ಕಳವು ಮಾಡುತ್ತಿದ್ದಾರೆ. ಅರಮನೆ ಸೇರಿದಂತೆ 8 ವೇದಿಕೆ ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಯುವದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ, ಕ್ರೀಡೆ, ವಸ್ತು ಪ್ರದರ್ಶನ ಹೀಗೆ ಹತ್ತು ಹಲವು  ಕಾರ್ಯಕ್ರಮಗಳಿಗೆ ಬಂದೋಬಸ್ತ್, ರಸ್ತೆ ಸಂಚಾರ ನಿರ್ವಹಣೆಯಲ್ಲಿ ಪೆÇಲೀಸರು ಕಾರ್ಯನಿರತರಾಗಿರು ತ್ತಾರೆ. ಇಂತಹ ಸಣ್ಣ ಪುಟ್ಟ ಕಳ್ಳತನದ ಬಗ್ಗೆ ಗಮನ ಹರಿಸಲು ಅವರಿಗೆ ಕಷ್ಟಸಾಧ್ಯ. ಇನ್ನು ದೀಪಾಲಂಕಾರ ನಿರ್ವಹಣೆ ಮಾಡುತ್ತಿರಬಹುದೆಂಬ ಭಾವನೆಯಲ್ಲಿ ಸಾರ್ವ ಜನಿಕರೂ ಗಂಭೀರವಾಗಿ ಕಾಣುವುದಿಲ್ಲ. ಹಾಗಾಗಿ ಖದೀಮರು  ರಾಜಾರೋಷ ವಾಗಿ ವಿದ್ಯುತ್ ದೀಪಗಳ ಕಳವು ಮಾಡುತ್ತಿದ್ದಾರೆಂದು ಚೆಸ್ಕಾಂ ಸಿಬ್ಬಂದಿ ಹೇಳಿದ್ದಾರೆ.

ಮನಸ್ಸಿಗೆ ಮುದ ನೀಡುವ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಸವಿದು, ಸಂತಸಪಡುವ ಮನಸ್ಸುಗಳ ನಡುವೆ ತಮ್ಮ ಮನೆಯ ವಸ್ತುವನ್ನೇ ಕದಿಯುವ ಕಿರಾತಕ ಮನಸ್ಥಿತಿ ಉಳ್ಳವರೂ ಇದ್ದಾರೆ ಎಂಬುದೇ ವಿಷಾದನೀಯ ಸಂಗತಿ. ಎಲ್ಲಾ ಸ್ಥಳದಲ್ಲೂ ಪೆÇಲೀಸರು ಇರಲು ಸಾಧ್ಯವಿಲ್ಲ. ಚೆಸ್ಕಾಂ ಸಿಬ್ಬಂದಿಯೂ ಕಾವಲಿರಲು ಆಗುವುದಿಲ್ಲ. ವಿದ್ಯುತ್ ದೀಪಗಳ ಕಳ್ಳತನಕ್ಕೆ ಯತ್ನಿಸುವುದನ್ನು ಕಂಡರೆ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಅಡ್ಡಾಡುತ್ತಿದ್ದರೆ ಸಾರ್ವಜನಿಕರು ಪೆÇಲೀಸರಿಗೆ ವಿಷಯ ತಿಳಿಸಿದರೆ ಸಹಕಾರವಾಗುತ್ತದೆ. ಇನ್ನು ಕುಡಿದ ಅಮಲಿನಲ್ಲಿ ಕ್ರೇಜ್‍ಗಾಗಿ ಇಂತಹ ದುಷ್ಕೃತ್ಯ ಮಾಡುವವರಿದ್ದರೆ ದಯವಿಟ್ಟು ನಿಲ್ಲಿಸಿ. ನಿಮ್ಮ  ಆತ್ಮಸಾಕ್ಷಿಯನ್ನೇ ಪ್ರಶ್ನಿಸಿ, ಇದೆಲ್ಲಾ ತಪ್ಪು ಎಂದು ತಿಳಿಯುತ್ತದೆ.

 

Translate »