ಮೈಸೂರು,ಅ.5-ಸುಮಯ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ 5.29 ಎಕರೆ ವಿಸ್ತಾರದ ‘ಸುಮಯ ಹೋಮ್ ಲ್ಯಾಂಡ್ಸ್’ ನೂತನ ಯೋಜನೆಯನ್ನು ಮೈಸೂರು-ಬನ್ನೂರು ರಸ್ತೆಯಲ್ಲಿ (ದೆಹಲಿ ಪಬ್ಲಿಕ್ ಶಾಲೆ ಬಳಿ) ಪ್ರಾರಂಭಿಸಿದೆ. ಈ ಯೋಜನೆಗೆ ಸುಮಯ ಪ್ರಾಪ ರ್ಟೀಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸುಧಿ ಎಸ್.ಶೆಟ್ಟಿ ಮತ್ತು ಶ್ರೀಮತಿ ವಿಶಾಖಾ ಸಿ. ಹೆಗ್ಡೆ ಅವರು ಅ.3ರಂದು ಚಾಲನೆ ನೀಡಿದರು.
ಈ ಸಂದರ್ಭ ಹೆಚ್.ಡಿ.ಕೋಟೆಯ ಹತ್ತಿ ವ್ಯಾಪಾರಿ ಶಿವಸ್ವಾಮಿ ಮತ್ತು ಸಾರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತರು ಹಾಗೂ ಭೂ ಮಾಲೀ ಕರೂ ಆದ ತಿಮ್ಮಯ್ಯ ಉಪಸ್ಥಿತರಿದ್ದರು. ತಿಮ್ಮಯ್ಯ ಅವರು ಸುಮಯ ಹೋಮ್‍ಲ್ಯಾಂಡ್ಸ್ ಅಭಿವೃದ್ಧಿ ಗಾಗಿ ಕೈಜೋಡಿಸಿದ್ದಾರೆ. ಅಲ್ಲದೆ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಸ್ಥಾಪಕರಾದ ಡಾ. ಭಾನುಪ್ರಕಾಶ್ ಶರ್ಮ ಸಾನ್ನಿಧ್ಯ ವಹಿಸಿ, ಆಶೀರ್ವದಿಸಿದರು.
ತಿಮ್ಮಯ್ಯ ಅವರು ನೂತನ ಯೋಜನೆ ಬಗ್ಗೆ ಸುದ್ದಿ ಗಾರರೊಂದಿಗೆ ಮಾತನಾಡಿ, ಸುಮಯ ಪ್ರಾಪ ರ್ಟೀಸ್‍ನೊಂದಿಗೆ ಈ ಯೋಜನೆಯ ಒಂದು ಭಾಗ ವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿ ದ್ದಾರೆ. ಅಲ್ಲದೆ ಈ ಯೋಜನೆಯು ಯುವ ಉದ್ಯಮಿ ಗಳು ಹಾಗೂ ಉತ್ತಮ ಗುಣಮಟ್ಟದ ಡೆವಲಪರ್ ಗಳ ಕೈಯಲ್ಲಿ ಸುರಕ್ಷಿತವಾಗಿದ್ದು, ಉತ್ತಮ ರೀತಿ ಅಭಿ ವೃದ್ಧಿಗೊಳ್ಳಲಿದೆ. ಮೈಸೂರಿನ ಜನತೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಹಾಗೂ ನಿಗದಿತ ವೇಳೆಯಲ್ಲಿ ವಿಲ್ಲಾಗಳು ಮತ್ತು ಫ್ಲಾಟ್‍ಗಳು ಲಭಿಸುವ ವಿಶ್ವಾಸವಿದೆ ಎಂದರು.
ಸುಮಯ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ನಂತಹ ಅತೀವ ಆಸಕ್ತಿಯ ಡೆವಲಪರ್‍ಗಳೊಂದಿಗೆ ಭೂಮಾಲೀಕರೂ ಕೈಜೋಡಿಸಿ ಇಂತಹ ಯೋಜನೆ ಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿದಲ್ಲಿ ಭೂ ಮಾಲೀಕರಿಗೆ ಹೆಚ್ಚು ಆದಾಯ ದೊರಕುತ್ತದೆ ಎಂದು ಅವರು ಹೇಳಿದರು.