ಮೈಸೂರು: ಐಟಿಬಿ ಮತ್ತು ಮುಡಾದಿಂದ ಅಭಿವೃದ್ಧಿಪಡಿಸಿರುವ ಕುರುಬಾರಹಳ್ಳಿ ಸರ್ವೆ ನಂಬರ್ 4 ಮತ್ತು ಆಲನಹಳ್ಳಿ ಸರ್ವೆ ನಂಬರ್ 41ರ ಬಡಾವಣೆಗಳನ್ನು ‘ಬಿ’ ಖರಾಬು ವರ್ಗದಿಂದ ಕೈಬಿಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ನಿವಾಸಿಗಳು ಫೆಬ್ರವರಿ 11ರಂದು ‘ಬೆಂಗಳೂರು ಚಲೋ’ ಚಳವಳಿ ನಡೆಸಲು ನಿರ್ಧರಿಸಿದ್ದಾರೆ. ಅಂದು ಬಸ್ಸುಗಳಲ್ಲಿ ಬೆಂಗಳೂರಿಗೆ ತೆರಳಲಿರುವ ಸುಮಾರು ಒಂದು ಸಾವಿರ ಮಂದಿ ನಿವಾಸಿಗಳು ಅಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ತ.ಮ.ವಿಜಯಭಾಸ್ಕರ್, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಕಂದಾಯ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ…
ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೇ ನಂ.41 ಸಮಸ್ಯೆ ನಿವಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿಗೆ ನಿವಾಸಿಗಳ ಮನವಿ
December 8, 2018ಮೈಸೂರು: ‘ಬಿ’ ಖರಾಬು (ಸರ್ಕಾರಿ ಭೂಮಿ) ವರ್ಗೀಕರಣದಿಂದ ಕೈಬಿಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಮೈಸೂರಿನ ಕುರುಬಾರಹಳ್ಳಿ ಸರ್ವೇ ನಂಬರ್ 4 ಮತ್ತು ಆಲನಹಳ್ಳಿ ಸರ್ವೇ ನಂಬರ್ 41ರ ವ್ಯಾಪ್ತಿಯ ನಿವಾಸಿಗಳು ಇಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರನ್ನು ಅವರ ವಿಜಯನಗರದ ನಿವಾಸದಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದರು. ಹಿಂದಿನ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿ (ಸಿಐಟಿಬಿ), ಈಗಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಬಡಾವಣೆಗಳ ನಿವಾಸಿಗಳಾದ ಎಸ್. ಪ್ರಸನ್ನಕುಮಾರ್, ಉಮೇಶ್, ವಿಜಯಕುಮಾರ್, ಲಿಂಗಣ್ಣ, ಶಿವಕುಮಾರ್, ಮಣಿಕಂಠಸ್ವಾಮಿ…
ಕಳೆದ ಮಾರ್ಚ್ 3ರ ಸಂಪುಟ ಸಭೆಯಲ್ಲಿ ಸಿದ್ದಾರ್ಥನಗರ, ಕೆಸಿ, ಜೆಸಿ ನಗರ ‘ಬಿ’ ಖರಾಬಿನಿಂದ ಕೈಬಿಡುವ ನಿರ್ಧಾರವಾದರೂ ಕಾರ್ಯಾನುಷ್ಠಾನಗೊಳಿಸದ ಅಧಿಕಾರಿ ವರ್ಗ
October 2, 2018ಮೈಸೂರು: ‘ದೇವರು ಕೊಟ್ಟರೂ ಪೂಜಾರಿ ಕೊಡಲೊಲ್ಲ’ ಎಂಬ ಗಾದೆ ಮಾತಿನಂತಿದೆ ನಮ್ಮ ಆಡಳಿತ ವ್ಯವಸ್ಥೆ. ಏಳು ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಕುರುಬಾರ ಹಳ್ಳಿ ಸರ್ವೆ ನಂ. 4ರ ಸಿದ್ದಾರ್ಥನಗರ, ಕೆ.ಸಿ. ನಗರ ಹಾಗೂ ಜೆ.ಸಿ. ನಗರ ಬಡಾವಣೆಗಳ ‘ಬಿ’ ಖರಾಬಿನಿಂದ ಕೈಬಿಡುವ ಸಂಬಂಧ ತೆಗೆದುಕೊಂಡಂತಹ ನಿರ್ಣಯ ಇನ್ನೂ ಕಾರ್ಯಾನುಷ್ಠಾನಗೊಳ್ಳದೇ ಇರುವುದು ನಮ್ಮ ಜನಪ್ರತಿ ನಿಧಿಗಳ ಜನಪರ ಚಿಂತನೆ, ಅಧಿಕಾರಿ ವರ್ಗದ ದಕ್ಷತೆ ಹಾಗೂ ಸಮಯ ಪಾಲನೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ. ಈ ವರ್ಷದ ಮಾರ್ಚ್…