Tag: Atal Bihari Vajpayee

ವಾಜಪೇಯಿ ಪಂಚಭೂತಗಳಲ್ಲಿ ಲೀನ
ಮೈಸೂರು

ವಾಜಪೇಯಿ ಪಂಚಭೂತಗಳಲ್ಲಿ ಲೀನ

August 18, 2018

ನವದೆಹಲಿ: ಅಜಾತಶತ್ರು, ಧೀಮಂತ ನಾಯಕ, ಕವಿ ಹೃದಯದ ಸರಳ, ಸಜ್ಜನ ರಾಜಕಾರಣಿ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯಮುನಾ ನದಿಯ ದಡ ದಲ್ಲಿ ಪಂಚಭೂತಗಳಲ್ಲಿ ಲೀನರಾದರು. ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಾಧಾರಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಪುರೋ ಹಿತರು ಹಾಗೂ ಕುಟುಂಬ ಸದಸ್ಯರು ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ನೆರವೇರಿಸಿದರು. 21 ಬಾರಿ ಕುಶಾಲ ತೋಪು ಸಿಡಿತ ಹಾಗೂ ಅಟಲ್ ಬಿಹಾರಿ ವಾಜಪೇಯಿ ಕೀ ಜೈ ಘೋಷಣೆ…

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೈಸೂರಲ್ಲಿ ಬಿಜೆಪಿ ಭಾವಪೂರ್ಣ ನಮನ
ಮೈಸೂರು

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೈಸೂರಲ್ಲಿ ಬಿಜೆಪಿ ಭಾವಪೂರ್ಣ ನಮನ

August 18, 2018

ಮೈಸೂರು: ಅಟಲ್‍ಜೀ, ಮರಳಿ ಹುಟ್ಟಿ ಬನ್ನಿ… ಅಗಲಿದ ಮಾಜಿ ಪ್ರಧಾನಿ, ಹಿರಿಯ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶುಕ್ರವಾರ ಮೈಸೂರಿನ ನಜರ್‍ಬಾದ್‍ನ ವಿ.ಕೆ.ಫಂಕ್ಷನ್ ಹಾಲ್‍ನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಮುಖಂಡರು ಅವರ ಗುಣಗಾನ ಮಾಡಿದರು. ಮೊದಲಿಗೆ ಎ.ಬಿ.ವಾಜಪೇಯಿ ಅವರ ಭಾವಚಿತ್ರಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಂಸದ ಪ್ರತಾಪ್‍ಸಿಂಹ, ಶಾಸಕ ಎಲ್.ನಾಗೇಂದ್ರ, ಮಾಜಿ ಎಂಎಲ್‍ಸಿ ತೋಂಟದಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಇನ್ನಿತರರು ಪುಷ್ಪಾರ್ಚನೆ ಜೊತೆಗೆ…

ಅಟಲ್ ಬಿಹಾರಿ ವಾಜಪೇಯಿಗೆ ಭಾವಪೂರ್ಣ ಶ್ರದ್ಧಾಂಜಲಿ
ಚಾಮರಾಜನಗರ

ಅಟಲ್ ಬಿಹಾರಿ ವಾಜಪೇಯಿಗೆ ಭಾವಪೂರ್ಣ ಶ್ರದ್ಧಾಂಜಲಿ

August 18, 2018

ಚಾಮರಾಜನಗರ: ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ ಮೊದಲ ಪ್ರಧಾನ ಮಂತ್ರಿಯಾಗಿದ್ದರು. ಅವರು ಎಲ್ಲಾ ಪಕ್ಷದ ಮುಖಂಡರ ಜೊತೆ ಸ್ನೇಹದಿಂದ ವರ್ತಿಸುತ್ತಿದ್ದರು. ಇಂತಹ ಮಹಾಪುರುಷ ಜನ ಮೆಚ್ಚಿನ ರಾಜಕಾರಣಿಯನ್ನು ಕಳೆದು ಕೊಂಡು ನಾವು ಅನಾಥರಾಗಿದ್ದೇವೆ ಎಂದು ನಗರಸಭಾ ಮಾಜಿ ಸದಸ್ಯ ಸುದರ್ಶನ್‍ಗೌಡ ತಿಳಿಸಿದರು. ನಗರದ ನೃಪತುಂಗ ವೃತ್ತದಲ್ಲಿ ಮಾಜಿ ಪ್ರಧಾನ ಮಾಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ನಾನು ರಾಜಕೀಯ ಪ್ರವೇಶಕ್ಕೆ ಅವರ ಮಾರ್ಗದರ್ಶನವೇ ಕಾರಣ…

ವಾಜಪೇಯಿ ಆರೋಗ್ಯದಲ್ಲಿ ಏರುಪೇರು
ದೇಶ-ವಿದೇಶ

ವಾಜಪೇಯಿ ಆರೋಗ್ಯದಲ್ಲಿ ಏರುಪೇರು

August 12, 2018

ನವದೆಹಲಿ: ಹಿರಿಯ ರಾಜಕೀಯ ಮುತ್ಸದ್ಧಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ಇಂದು ರಾತ್ರಿ ಏರುಪೇರಾಗಿದ್ದು, ಅವರನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಜಪೇಯಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರ ಆರೋಗ್ಯ ಕುರಿತು ಪ್ರಧಾನಮಂತ್ರಿ ಗಳ ಕಾರ್ಯಾಲಯವು ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಪಡೆಯುತ್ತಿದೆ. ಕೇಂದ್ರ ಗೃಹ ಸಚಿವ ರಾಜಾನಾಥ್ ಸಿಂಗ್ ಅವರು ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಿದರು.

ಮಾಜಿ ಪ್ರಧಾನಿ ವಾಜಪೇಯಿ ಆಸ್ಪತ್ರೆಗೆ ದಾಖಲು
ಮೈಸೂರು

ಮಾಜಿ ಪ್ರಧಾನಿ ವಾಜಪೇಯಿ ಆಸ್ಪತ್ರೆಗೆ ದಾಖಲು

June 12, 2018

ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಸ್ಪತ್ರೆ ಭೇಟಿ ನವದೆಹಲಿ:  ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರನ್ನು ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಬಹು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಅವರನ್ನು ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೈನಂದಿನ ತಪಾಸಣೆಗಾಗಿ ವಾಜಪೇಯಿ ಯವರನ್ನು ಆಸ್ಪತ್ರೆಗೆ ದಾಖಲಿಸಲಾ ಗಿದ್ದು, ಡಾ. ರಣ್‍ದೀಪ್ ಗುಲಾರಿಯಾ ಅವರು ವಾಜಪೇಯಿಯವರ ಆರೋ ಗ್ಯದ ಬಗ್ಗೆ ನಿಗಾವಹಿಸಿದ್ದಾರೆ. ಆಸ್ಪತ್ರೆಗೆ ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ…

Translate »