ಅಟಲ್ ಬಿಹಾರಿ ವಾಜಪೇಯಿಗೆ ಭಾವಪೂರ್ಣ ಶ್ರದ್ಧಾಂಜಲಿ
ಚಾಮರಾಜನಗರ

ಅಟಲ್ ಬಿಹಾರಿ ವಾಜಪೇಯಿಗೆ ಭಾವಪೂರ್ಣ ಶ್ರದ್ಧಾಂಜಲಿ

August 18, 2018

ಚಾಮರಾಜನಗರ: ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ ಮೊದಲ ಪ್ರಧಾನ ಮಂತ್ರಿಯಾಗಿದ್ದರು. ಅವರು ಎಲ್ಲಾ ಪಕ್ಷದ ಮುಖಂಡರ ಜೊತೆ ಸ್ನೇಹದಿಂದ ವರ್ತಿಸುತ್ತಿದ್ದರು. ಇಂತಹ ಮಹಾಪುರುಷ ಜನ ಮೆಚ್ಚಿನ ರಾಜಕಾರಣಿಯನ್ನು ಕಳೆದು ಕೊಂಡು ನಾವು ಅನಾಥರಾಗಿದ್ದೇವೆ ಎಂದು ನಗರಸಭಾ ಮಾಜಿ ಸದಸ್ಯ ಸುದರ್ಶನ್‍ಗೌಡ ತಿಳಿಸಿದರು.

ನಗರದ ನೃಪತುಂಗ ವೃತ್ತದಲ್ಲಿ ಮಾಜಿ ಪ್ರಧಾನ ಮಾಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ನಾನು ರಾಜಕೀಯ ಪ್ರವೇಶಕ್ಕೆ ಅವರ ಮಾರ್ಗದರ್ಶನವೇ ಕಾರಣ ಇಂತಹ ರಾಜಕಾರಣಿ ನಮಗೆ ಸ್ಫೂರ್ತಿಯಾಗಿದ್ದರು. ಇವರು ಅಗಲಿ ನಮ್ಮ ದೇಶಕ್ಕೆ ನಷ್ಟವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ 1 ನಿಮಿಷ ಮೌನ ಆಚರಿಸ ಲಾಯಿತು. ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ರವರ ಮೆಚ್ಚಿನ ಅಭಿಮಾನಿಗಳಾದ ವಿಜಯ್‍ಕುಮಾರ್‍ಗೌಡ, ಮಂಜುನಾಥಗೌಡ, ಶಿವಣ್ಣ, ನಾಗೇಂದ್ರಗೌಡ, ಎಂನಾಗರಾಜು, ಕಾರ್ ಪ್ರಭುಸ್ವಾಮಿ, ನಂಜುಂಡಸ್ವಾಮಿ, ಶಿವಕುಮಾರ್, ಕಾಳನಾಯ್ಕ, ಕುಮಾರ್ ಹಾಗೂ ಇನ್ನು ಮುಂತಾದವರು ಹಾಜರಿದ್ದರು.

Translate »