ಜವಹರ್ ಎಜುಕೇಷನ್ ಟ್ರಸ್ಟ್‍ನಿಂದ ಸ್ವಾತಂತ್ರೋತ್ಸವ
ಚಾಮರಾಜನಗರ

ಜವಹರ್ ಎಜುಕೇಷನ್ ಟ್ರಸ್ಟ್‍ನಿಂದ ಸ್ವಾತಂತ್ರೋತ್ಸವ

August 18, 2018

ಗುಂಡ್ಲುಪೇಟೆ: ಪಟ್ಟಣದಲ್ಲಿರುವ ಜವಹರ್ ಎಜುಕೇಷನ್ ಟ್ರಸ್ಟ್ ವತಿಯಿಂದ 72ನೇ ಸ್ವಾತಂತ್ರ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಪಟೇಲ್ ಶಾಂತಪ್ಪ ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತ್ಯಾಗ ಬಲಿದಾನಗಳ ಮೂಲಕ ಹಿರಿ ಯರು ತಂದು ಕೊಟ್ಟ ಸ್ವಾತಂ್ರತ್ಯವನ್ನು ನೆನಪಿಸಿಕೊಳ್ಳಬೇಕು. ದೇಶದ ಏಳಿಗೆಗಾಗಿ ಸದಾ ಸಿದ್ಧರಾಗಿರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಪಿ.ಸುನಿಲ್ ಮಾತ ನಾಡಿ, ದೇಶಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ನೆನೆದುಕೊಂಡು ದೇಶದ ಅಭಿವೃದ್ಧಿ ಮತ್ತು ದೇಶದ ಉನ್ನತಿಗಾಗಿ ಶ್ರಮಿಸುವ ಮನೋಭಾವನೆಯನ್ನು ವಿದ್ಯಾರ್ಥಿ ದಿಸೆಯಿಂದಲೇ ಬೆಳೆಸಿಕೊಳ್ಳಿ. ದೇಶಕ್ಕೆ ನಾವು ಉತ್ತಮ ಪ್ರಜೆಗಳಾಗಿ ದೇಶದ ಪ್ರಗತಿಗೆ ಶ್ರಮಿಸಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ ಸಿ.ನಾಗರಾಜ್ ಸೇರಿದಂತೆ ಶಾಲಾ-ಕಾಲೇಜಿನ ಭೋದಕ ಮತ್ತು ಭೋದಕೇತರ ವರ್ಗದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಜವಹರ್ ಎಜುಕೇಷನ್ ಟ್ರಸ್ಟ್‍ನ ವಿದ್ಯಾರ್ಥಿಗಳು ಸ್ವಾತಂತ್ರ್ಯಹೋರಾಟಗಾರರ ವೇಷಭೂಷಣ ಗಳನ್ನು ತೊಟ್ಟು ಸಾರ್ವಜನಿಕರ ಮೆಚ್ಚುಗೆ ಗಳಿಸಿದರು.

Translate »