ಸ್ವಾತಂತ್ರ್ಯ ನಂತರ ಭಾರತ ಜಗತ್ತಿಗೆ ಮಾದರಿ
ಚಾಮರಾಜನಗರ

ಸ್ವಾತಂತ್ರ್ಯ ನಂತರ ಭಾರತ ಜಗತ್ತಿಗೆ ಮಾದರಿ

August 18, 2018

ಚಾಮರಾಜನಗರ: ಸ್ವಾತಂತ್ರ್ಯ ಗಳಿಸಿದ ನಂತರ ಭಾರತ ದೇಶ ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಬಾಹ್ಯಾಕಾಶ, ಅಣು ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಜೀವ ವಿಜ್ಞಾನ, ಆಹಾರ ಭದ್ರತೆ ಮುಂತಾದ ಕ್ಷೇತ್ರ ಗಳಲ್ಲಿ ಅತ್ಯುನ್ನತ ಸಾಧನೆ ಮಾಡಿ ಜಗತ್ತಿಗೆ ಮಾದರಿಯಾಗಿದೆ ಎಂದು ಹಿಂದುಳಿದ ವರ್ಗ ಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣ ದಲ್ಲಿ ಬುಧವಾರ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾ ರೋಹಣ ಮಾಡಿ ಮಾತನಾಡಿದ ಅವರು, ಏಳು ದಶಕಗಳಲ್ಲಿ ಭಾರತ ಅನೇಕ ಕ್ಷೇತ್ರ ಗಳಲ್ಲಿ ಮಹತ್ತರ ಸಾಧನೆ ಮಾಡಿದೆ. ವ್ಯಾಪಾರ, ವಾಣಿಜ್ಯ, ವಿಜ್ಞಾನ, ಚಂದ್ರಯಾನ, ಮಂಗ ಳಯಾನ, ಉಪಗ್ರಹಣಗಳ ಉಡಾವಣೆ, ಮಿಲಿಟರಿ, ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಸಜ್ಜಾಗಿದೆ ಎಂದರು.

ಇಂಥ ಸಂದರ್ಭದಲ್ಲಿ ನಾವೆಲ್ಲ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ನಡೆಸಿ ತಮ್ಮ ಪ್ರಾಣವನ್ನೇ ತೆತ್ತ ಮಹ ನೀಯರನ್ನು ನೆನೆಯಬೇಕು. ಅವರೆಲ್ಲ ಭಾರ ತೀಯರ ಮನದಲ್ಲಿ ಅಮರರಾಗಿ ಉಳಿದಿ ದ್ದಾರೆ. ಕರ್ನಾಟಕದ ಅನೇಕ ವೀರ ಸೇನಾ ನಿಗಳು ಸ್ವಾತಂತ್ರ್ಯಕ್ಕಾಗಿ ಮಡಿದಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಯಾಳು ಗಳಾದವರಿದ್ದಾರೆ ಎಂದು ಸ್ಮರಿಸಿದರು.

ಚಾಮರಾಜನಗರ ಜಿಲ್ಲೆಯೂ ಸ್ವಾತಂತ್ರ್ಯ ಹೋರಾಟಕ್ಕೆ ಕಾಣಿಕೆ ನೀಡಿದೆ. ಜಿಲ್ಲೆಯ ರಂಗಸ್ವಾಮಿ, ಗೋಪಾಲರಾಯರು, ವೆಂಕಟ ರಾವ್, ಡಿ.ಜೆ.ಶಂಕರಪ್ಪ, ಕೆ.ಕೃಷ್ಣಮೂರ್ತಿ, ರಂಗಸ್ವಾಮಿ ನಾಯಕ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ದ್ದರು. ಯತಿರಾಜು, ಕುಲಗಾಣ ಸಿದ್ದಪ್ಪ, ಮಲೆಯೂರು ಚಿಕ್ಕಲಿಂಗಪ್ಪ, ಪದ್ಮರಾಜ ಪಂಡಿತ್, ಐಎನ್‍ಎ ರಾಮರಾವ್, ಪುಟ್ಟ ನಂಜಪ್ಪ, ತೋಟಪ್ಪ, ಬಸವಯ್ಯ, ಬಸಪ್ಪ, ಮಹಿಳಾ ಹೋರಾಟಗಾರರಾದ ಲಲಿತಾ ಜಿ.ಟ್ಯಾಗೆಟ್, ಗಜಲಕ್ಷ್ಮಿಬಾಯಿ, ಕಮಲಮ್ಮ ಸಹ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ದ್ದಾರೆ. ಈ ಎಲ್ಲ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ ನಮನ ಸಲ್ಲಿಸೋಣ ಎಂದರು.

ಸ್ವಾತಂತ್ರ್ಯ ಗಳಿಕೆಗೆ ಶಸ್ತ್ರರಹಿತ ಹೋರಾ ಟದ ಮಾರ್ಗವನ್ನು ಪರಿಚಯಿಸಿದ ಕೀರ್ತಿ ಮಹಾತ್ಮಾಗಾಂಧೀಜಿಯವರಿಗೆ ಸಲ್ಲುತ್ತದೆ. ಬಂದೂಕಿನ ಬಲದಿಂದ ಭಾರತವನ್ನಾಳು ತ್ತಿದ್ದ ಬ್ರಿಟಿಷರಿಗೆ ಬರಿಗೈ ಹೋರಾಟದ ಪಾಠ ಕಲಿಸಿದವರು ಮಹಾತ್ಮಗಾಂಧೀಜಿ. ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರಿಗೆ ಕೇವಲ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿ ಕೊಡುವುದಷ್ಟೇ ಮುಖ್ಯವಾಗಿರಲಿಲ್ಲ. ಭಾರ ತೀಯರೆಲ್ಲರಿಗೂ ಸಮಾನತೆ, ಸಮಾನ ನ್ಯಾಯ, ಭ್ರಾತೃತ್ವಗಳನ್ನು ದೊರಕಿಸಿಕೊಡು ವುದು ಕೂಡ ಮುಖ್ಯವಾಗಿತ್ತು ಎಂದು ಪುಟ್ಟರಂಗಶೆಟ್ಟಿ ಹೇಳಿದರು.
ಈ ದಿನ ನಾವು ದೇಶದ ಗಡಿ ಕಾಯು ತ್ತಿರುವ ಸೈನಿಕರನ್ನು ನೆನಪಿಸಿಕೊಳ್ಳಬೇಕು. ಅವರ ತ್ಯಾಗ ಬಲಿದಾನಗಳು ನಾವು ಸುರ ಕ್ಷಿತರಾಗಿರಲು ಕಾರಣ. ಅವರದೇಶ ಸೇವೆ ಅವಿಸ್ಮರಣೀಯ. ವಿಶಾಲ ಭಾರತದಲ್ಲಿ ಸಮೃದ್ಧಿಯ ಜೊತೆಗೆ ಸರ್ವೋದಯದ ತೇರು ಸಮನಾಗಿ ಸಾಗಬೇಕು. ವರ್ಗ, ವರ್ಣ, ಧರ್ಮದ ಆಚೆ ಸಮಾನತೆಯ ಅಗ್ನಿದಿವ್ಯ ಶಾಂತವಾಗಿ ಬೆಳಗಬೇಕು. ನಮ್ಮ ನಡು ವಿನ ಸಂಕುಚಿತತೆಗಳು ಇಲ್ಲವಾಗಬೇಕು ಎಂದು ಸಚಿವರು ಆಶಿಸಿದರು.

ಧ್ವಜಾರೋಹಣದ ಬಳಿಕ ಉಸ್ತುವಾರಿ ಸಚಿವರು ಸಶಸ್ತ್ರ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ಪೆÇಲೀಸ್ ಮೀಸಲು ಪಡೆ ಮತ್ತು ಶಾಲಾ ಮಕ್ಕಳಿಂದ ಆಕರ್ಷಕ ಪೆರೇಡ್ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆ ದವು. ಸಂಸದ ಆರ್. ಧ್ರುವನಾರಾಯಣ, ಜಿಪಂ ಅಧ್ಯಕ್ಷೆ ಶಿವಮ್ಮ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ನಗರಸಭೆ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ರಾಜಪ್ಪ, ಜಿಲ್ಲಾಧಿಕಾರಿ ಕಾವೇರಿ, ಜಿಪಂ ಸಿಇಒ ಹರೀಶ್‍ಕುಮಾರ್, ಎಸ್ಪಿ ಧರ್ಮೇಂದರ್‍ಕುಮಾರ್ ಮೀನಾ, ಎಡಿಸಿ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.

Translate »