ಪ್ರವಾಹ ಬಾಧಿತ ಬೆಳೆ ವಸತಿ ಹಾನಿ ಪರಿಹಾರಕ್ಕೆ ಕ್ರಮ
ಚಾಮರಾಜನಗರ

ಪ್ರವಾಹ ಬಾಧಿತ ಬೆಳೆ ವಸತಿ ಹಾನಿ ಪರಿಹಾರಕ್ಕೆ ಕ್ರಮ

August 18, 2018

ಚಾಮರಾಜನಗರ: ಕಾವೇರಿ ನದಿ ಪ್ರವಾಹದಿಂದ ಕೊಳ್ಳೇಗಾಲ ಭಾಗ ದಲ್ಲಿ ಉಂಟಾಗಿರುವ ಮನೆ, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.

ತುಂಬಿ ಹರಿಯುತ್ತಿರುವುದರಿಂದ ಕಾವೇರಿ ನದಿಯಿಂದ ತಲೆದೋರಿರುವ ಪ್ರವಾಹ ಪೀಡಿತ ಕೊಳ್ಳೇಗಾಲದ ವಿವಿಧ ಗ್ರಾಮಗಳಿಗೆ ಇಂದು ನೀಡಿದ ಭೇಟಿ ನೀಡಿದ ಸಚಿವರು ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ನೀಡುವ ಭರವಸೆ ನೀಡಿದರು.

ಪ್ರವಾಹದಿಂದ ಬಾಧಿತವಾಗಿರುವ ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ಹಳೆ ಹಂಪಾಪುರ , ದಾಸನ ಪುರ, ಹರಳೆ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ವೀಕ್ಷಿಸಿದರು.

ನೀರಿನಿಂದ ಆವೃತವಾಗಿರುವ ಬೀದಿಗಳಿಗೆ ಸಚಿವರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಉಪ ವಿಭಾಗಾಧಿಕಾರಿ ಫೌಜಿಯ ತರನ್ನುಮ್ ಇತರೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜನರ ಸಂಕಷ್ಟ ಆಲಿಸಿದರು.

ಪ್ರವಾಹದಿಂದ ಜಲಾವೃತಗೊಂಡು ಹಾನಿಯಾಗಿರುವ ಬೆಳೆ, ವಸತಿ, ಇತರೆ ನಷ್ಟಕ್ಕೆ ಪರಿಹಾರ ನೀಡಲಾಗುವುದು. ಪ್ರವಾಹ ಪರಿಸ್ಥಿತಿ ಕಡಿಮೆಯಾಗಿ ಸಹಜ ಸ್ಥಿತಿಗೆ ಬಂದ ಕೂಡಲೇ ಕಂದಾಯ ಗ್ರಾಮ ಪಂಚಾಯತ್ ಇಲಾಖೆ ಅಧಿಕಾರಿಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ನಷ್ಟವನ್ನು ಲೆಕ್ಕಾಚಾರ ಹಾಕಲಿದ್ದಾರೆ. ಹಾನಿಗೆ ಒಳಗಾದ ಬೆಳೆ, ವಸತಿಗಳಿಗೆ ಅನುಸಾರವಾಗಿ ಪರಿಹಾರ ಕೊಡಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಏರುತ್ತಿರುವ ನೀರಿನ ಪ್ರಮಾಣದಿಂದ ಜನರನ್ನು ಸುರಕ್ಷಿತವಾಗಿ ಇರಿಸುವ ಸಲುವಾಗಿ ಕೊಳ್ಳೆಗಾಲ ಪಟ್ಟಣದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಪ್ರವಾಹ ಪರಿ ಸ್ಥಿತಿ ಇರುವ ತನಕ ಗಂಜಿಕೇಂದ್ರದಲ್ಲಿ ವಾಸ್ತವ್ಯ ಹೂಡಬೇಕು. ಪ್ರವಾಹ ತಗ್ಗಿದ ಕೂಡಲೇ ಗ್ರಾಮಕ್ಕೆ ವಾಪಾಸ್ಸಾಗಬಹುದು ಎಂದು ಹೇಳಿದರು.

ಪ್ರವಾಹ ಸಂದರ್ಭದಲ್ಲಿ ಮನೆಗಳು ಜಲಾ ವೃತಗೊಂಡು ತೊಂದರೆ ಅನುಭವಿಸು ತ್ತಲೇ ಬಂದಿದ್ದೇವೆ. ನಮ್ಮ ಸಮಸ್ಯೆ ಪರಿಹರಿವಾಗಬೇಕಾದರೆ ಬೇರೆ ಕಡೆ ನಿವೇಶನ ನೀಡಬೇಕು. ಅಲ್ಲಿಯೇ ಮನೆ ಕಟ್ಟಿ ಕೊಂಡು ಇರಲಿದ್ದೇವೆ. ಇದರಿಂದ ಪದೇ ಪದೇ ಸಮಸ್ಯೆಗೆ ಒಳಗಾಗುವುದು ತಪ್ಪ ಲಿದೆ ಎಂದು ಜನರು ಸಚಿವರಿಗೆ ಅಳಲು ತೋಡಿಕೊಂಡರು. ಇದೆ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ಮಹೇಶ್, ಪ್ರವಾಹ ಪೀಡಿತ ಗ್ರಾಮಗಳಲ್ಲಿ 24×7 ಅವಧಿಯಲ್ಲಿ ಅಧಿಕಾರಿಗಳು ಇದ್ದು ರಕ್ಷಣಾ ಪರಿಹಾರಗಳಿಗೆ ಮುಂದಾಗಲಿ ದ್ದಾರೆ. ಜನರ ತೊಂದರೆಗಳಿಗೆ ತಕ್ಷಣವೇ ಸ್ಪಂದಿಸಿ ಅಗತ್ಯ ಕ್ರಮ ವಹಿಸಲಿದ್ದಾರೆ ಎಂದರು.

ಪ್ರವಾಹದಿಂದ ಉಂಟಾಗಿರುವ ಬೆಳೆ, ಮನೆ ಇತರೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಹಣದ ಕೊರತೆ ಇಲ್ಲ. ಅಧಿಕಾರಿಗಳು ಸಂಪೂರ್ಣವಾಗಿ ಪರಿಸ್ಥಿತಿಯನ್ನು ಪರಾಮರ್ಶಿಸಿ ನಷ್ಟದ ಬಗ್ಗೆ ವರದಿ ಸಲ್ಲಿಸಿದ್ದು, ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದರು.

ತಹಸೀಲ್ದಾರ್ ಚಂದ್ರಮೌಳಿ, ನೋಡಲ್ ಅಧಿಕಾರಿಗಳಾದ ತಾಲೂಕು ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಎಲ್.ಗಂಗಾ ಧರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ, ತಾಲೂಕು ಆರೋಗ್ಯ ಅಧಿಕಾರಿ ಡಾ.ಗೋಪಾಲ್ ಡಿವೈಎಸ್‍ಪಿ ಪುಟ್ಟ ಮಾದಯ್ಯ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Translate »