ಬಂಡೀಪುರದಲ್ಲಿ ಆನೆ ಮರಿ ಸಾವು
ಚಾಮರಾಜನಗರ

ಬಂಡೀಪುರದಲ್ಲಿ ಆನೆ ಮರಿ ಸಾವು

August 18, 2018

ಗುಂಡ್ಲುಪೇಟೆ:  ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾ ನವನದ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಆನೆಮರಿಯೊಂದು ಸಾವಿ ಗೀಡಾಗಿರುವ ಘಟನೆ ಬಂಡೀಪುರದಲ್ಲಿ ನಡೆದಿದೆ.

ಆ.16ರಂದು ಕೆಕ್ಕನಹಳ್ಳ ಚೆಕ್ ಪೆÇೀಸ್ಟ್ ಸಮೀಪದಲ್ಲಿ ಕಾಡಾನೆಗಳ ಗುಂಪಿನಿಂದ ಹೊರ ಬಂದ ಸುಮಾರು 9 ತಿಂಗಳ ಗಂಡು ಮರಿಯಾನೆಯು ಘೀಳಿಡುತ್ತಿತ್ತು. ಇದನ್ನು ಕಂಡ ಪ್ರವಾಸಿಗರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿಗಳು ಸಮೀಪದಲ್ಲಿ ತಾಯಿ ಇಲ್ಲದಿರುವುದನ್ನು ಕಂಡು ಮರಿಯನ್ನು ಬಂಡೀಪುರದ ಸಾಕಾನೆ ಶಿಬಿರಕ್ಕೆ ತಂದು ಆಹಾರ, ನೀರು ನೀಡಿ ಆರೈಕೆ ಮಾಡಿದ್ದಾರೆ.

ಇದಕ್ಕೂ ಮೊದಲೇ ಹುಲಿಯ ದಾಳಿಯಿಂದ ಮರಿಯಾನೆಗೆ ಸಣ್ಣಪುಟ್ಟ ಗಾಯ ವಾಗಿದ್ದು, ನಿಶ್ಯಕ್ತಿ ಹಾಗೂ ತೀವ್ರ ಶೀತದಿಂದ ಬಳಲಿದ ಈ ಮರಿಯಾನೆಯು ಶುಕ್ರ ವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದೆ. ಅರಣ್ಯ ಇಲಾಖೆಯ ಪಶು ವೈದ್ಯ ಡಾ.ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಸಂಸ್ಕಾರ ಮಾಡ ಲಾಯಿತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ.

Translate »