ನವದೆಹಲಿ: ಅಜಾತಶತ್ರು, ಧೀಮಂತ ನಾಯಕ, ಕವಿ ಹೃದಯದ ಸರಳ, ಸಜ್ಜನ ರಾಜಕಾರಣಿ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯಮುನಾ ನದಿಯ ದಡ ದಲ್ಲಿ ಪಂಚಭೂತಗಳಲ್ಲಿ ಲೀನರಾದರು.
ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಾಧಾರಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಪುರೋ ಹಿತರು ಹಾಗೂ ಕುಟುಂಬ ಸದಸ್ಯರು ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ನೆರವೇರಿಸಿದರು. 21 ಬಾರಿ ಕುಶಾಲ ತೋಪು ಸಿಡಿತ ಹಾಗೂ ಅಟಲ್ ಬಿಹಾರಿ ವಾಜಪೇಯಿ ಕೀ ಜೈ ಘೋಷಣೆ ನಡುವೆ ವಾಜಪೇಯಿ ಅವರ ದತ್ತುಪುತ್ರಿ ನಮಿತಾ ಭಟ್ಟಾಚಾರ್ಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಸಾರ್ಕ್ ರಾಷ್ಟ್ರಗಳ ಗಣ್ಯರು, ಕೇಂದ್ರ ಸಂಪುಟದ ಸಚಿವರು, ಎಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ನೂರಾರು ಮಂದಿ ಅಂತ್ಯಕ್ರಿಯೆ ಸ್ಥಳದಲ್ಲಿ ಹಾಜರಿದ್ದು, ಅಗಲಿದ ಹಿರಿಯ ನಾಯಕನಿಗೆ ಅಂತಿಮ ವಿದಾಯ ಹೇಳಿದರು. ಇದಕ್ಕೂ ಮುನ್ನಾ ಬಿಜೆಪಿ ಕೇಂದ್ರ ಕಚೇರಿಯಿಂದ ಮೆರವಣಿಗೆ ಮೂಲಕ ಸಾಗಿ ಬಂದ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರಮೋದಿ, ಸಾರ್ಕ್ ರಾಷ್ಟ್ರಗಳ ಹಿರಿಯ ನಾಯಕರು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಬಿಜೆಪಿ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ, ಪುಷ್ಪನಮನ ಸಲ್ಲಿಸಿದರು. ನಿನ್ನೆ ಸಂಜೆ 5.05ಕ್ಕೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ
ಸಂಸ್ಥೆಯಲ್ಲಿ ನಿಧನರಾದ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ರಾತ್ರಿ ನವದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿನ ಅವರ ನಿವಾಸದಲ್ಲಿ ಇರಿಸಲಾ ಗಿತ್ತು.
ಇಂದು ಬೆಳಗಿನವರೆಗೂ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯಾತಿ ಗಣ್ಯರು ಇಲ್ಲಿ ಅಂತಿಮ ದರ್ಶನ ಪಡೆದರು. ಕುಟುಂಬದ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದ ನಂತರ ಇಂದು ಬೆಳಿಗ್ಗೆ 8.30ಕ್ಕೆ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಾರ್ಗ್‍ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ತರಲಾಯಿತು. ಇಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಅಗಲಿದ ಅಜಾತಶತ್ರುವಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಮಧ್ಯಾಹ್ನ 1 ಗಂಟೆಗೆ ಬಿಜೆಪಿ ಕಚೇರಿಯಿಂದ ಅವರ ಅಂತಿಮ ಯಾತ್ರೆ ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರೂ, ಬಿಜೆಪಿ ಸಂಸದರು, ಮುಖಂಡರು ಸೇರಿದಂತೆ ಲಕ್ಷಾಂತರ ಮಂದಿ ಯಾತ್ರೆಯಲ್ಲಿ ಸಾಗಿದರು. ಅಂತಿಮವಾಗಿ ಯಾತ್ರೆ ಮಹಾತ್ಮಗಾಂಧಿ ಮಾರ್ಗ್‍ನ ರಾಷ್ಟ್ರೀಯ ಸ್ಮøತಿ ಸ್ಥಳ್ ತಲುಪುವಷ್ಟರ ವೇಳೆಗೆ ಸಂಜೆಯಾಗಿತ್ತು. ಅಲ್ಲಿ ಅವರ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿ ಅಗ್ನಿ ಸ್ಪರ್ಶ ಮಾಡಿದರು. ಇದರೊಂದಿಗೆ ಭಾರತ ರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಪಂಚಭೂತಗಳಲ್ಲಿ ಲೀನವಾದರು.
ಮೋಹನ್ ಭಾಗವತ್ ನುಡಿ ನಮನ: ಅಟಲ್ ಬಿಹಾರಿ ವಾಜಪೇಯಿ ಅವರಂತಹ ವರು ಶತಮಾನಗಳಲ್ಲಿ ಒಬ್ಬರು ಮಾತ್ರ ಜನಿಸುತ್ತಾರೆ. ಮತ್ತು ಅವರು ಅಮರವಾಗಿ ಉಳಿಯುತ್ತಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮಾಜಿ ಪ್ರಧಾನಿ ನಿವಾಸದಲ್ಲಿನ ಸಂದರ್ಶನ ಪುಸ್ತಕದಲ್ಲಿ ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಅಟಲ್ ವಾಜಪೇಯಿ ಅವರ ನಿಧನ ನಮ್ಮ ಹೃದಯದಲ್ಲಿ ಅನೂರ್ಜಿತವಾಗಿದೆ. ಅದನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ . ಅಂತಹವರು ಶತಮಾನದಲ್ಲಿ ಒಬ್ಬರು ಮಾತ್ರ ಜನಿಸುತ್ತಾರೆ ಎಂದು ಜನರು ಇಷ್ಟಪಡುತ್ತಾರೆ ಎಂದು ಅವರ ಭಾವನಾತ್ಮಾಕ ನುಡಿ ನಮನ ಸಲ್ಲಿಸಿದ್ದಾರೆ. ವಾಜಪೇಯಿ ಅವರ ದೇಹ ನಿರ್ಗಮನದೊಂದಿಗೆ ಒಂದು ಯುಗದ ಅಂತ್ಯವಾಗಿದೆ. ಘನತೆವೆತ್ತ ಗುಣ ಬೆಳೆಸುವಲ್ಲಿ ಅವರು ಬುನಾದಿ ಹಾಕಿದರು. ಅವರ ದೊಡ್ಡ ಸಾಧನೆ ನಮ್ಮೊಂದಿಗೆ ಉಳಿಯುತ್ತದೆ. ಅಟಲ್ ಜೀ ಸತ್ತಿಲ್ಲ. ಆದರೆ ಅವರು ಅಮರರಾಗಿ ಉಳಿಯುತ್ತಾರೆ ಎಂದು ಅವರು ಹೇಳಿದ್ದಾರೆ. ವಾಜಪೇಯಿ ಜಗತ್ತಿನಾದ್ಯಂತ ಸ್ವಿಕರಿಸಲ್ಪಟ್ಟ ನಾಯಕ ರಾಗಿದ್ದು, ಸಾರ್ವಜನಿಕ ಜೇವನದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಂತಹ ಉನ್ನತ ಆದರ್ಶಗಳನ್ನು ಬೆಳೆಸಿದ್ದರು. ಅವರು ಎಂದಿಗೂ ನಿಧನರಾಗಿಲ್ಲ. ಅವರು ಎಂದೆಂದಿಂಗೂ ಅಮರವಾಗಿಯೇ ಉಳಿಯಲಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿಯೂ ಭಾಗವತ್ ನುಡಿ ನಮನ ಸಲ್ಲಿಸಿದ್ದಾರೆ.