ಮೈಸೂರು-ಊಟಿ ಹೆದ್ದಾರಿ ಬಂದ್
ಮೈಸೂರು

ಮೈಸೂರು-ಊಟಿ ಹೆದ್ದಾರಿ ಬಂದ್

August 18, 2018

ನಂಜನಗೂಡು: ಕೇರಳದ ವೈನಾಡಿನಲ್ಲಿ ಮತ್ತೇ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟ ಪರಿಣಾಮ 2ನೇ ಬಾರಿಗೆ ಮೈಸೂರು-ಊಟಿ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರ ಬಂದ್ ಮಾಡಲಾಗಿದೆ.

ನಂಜನಗೂಡಿನ ಮಲ್ಲನ ಮೂಲೆ ಮಠದ ಮುಂಭಾಗ ಹೆದ್ದಾರಿಯಲ್ಲಿ ಸುಮಾರು 4 ಅಡಿ ನೀರು ನಿಂತಿರುವ ಕಾರಣ ವಾಹನ ಸಂಚಾರವನ್ನು ರದ್ದುಗೊಳಿಸಿ ಮೈಸೂರಿನಿಂದ ನಂಜನಗೂಡಿಗೆ ತೆರಳುವ ವಾಹನಗಳನ್ನು ತಾಂಡವಪುರ ಮುಖಾಂತರ ಹುಳಿಮಾವು, ಹೆಜ್ಜಿಗೆ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಇದೇ ರೀತಿ ನಂಜನಗೂಡಿನಿಂದ ಮೈಸೂರಿಗೆ ತೆರಳುವ ವಾಹನಗಳು ಹುಲ್ಲಹಳ್ಳಿ ಮೂಲಕ ಸಂಚರಿಸುತ್ತಿವೆ. ಕಪಿಲಾ ನದಿ ಮೈದುಂಬಿ ಹರಿಯುತ್ತಿದ್ದು, ನದಿ ದಡದಲ್ಲಿರುವ ಪರಶುರಾಮ ದೇವಾಲಯ ಜಲಾವೃತವಾಗಿದೆ. ಸ್ನಾನಘಟ್ಟ ಮುಳುಗಿದೆ. ಪಟ್ಟಣದ ತಗ್ಗು ಪ್ರದೇಶವಾದ ಒಕ್ಕಲಗೇರಿ, ಸರಸ್ವತಿ ಕಾಲೋನಿ ಹಾಗೂ ತೋಪಿನ ಬೀದಿಯ ಹಲವು ಮನೆಗಳಿಗೆ ನೀರು ನುಗ್ಗಿದೆ.

ನಂಜನಗೂಡು ತಾಲೂಕು ಕಣೆನೂರು, ಹುಲ್ಲಹಳ್ಳಿ, ರಾಂಪುರ, ಹಂಡುಗಿನಹಳ್ಳಿ, ದೇಬೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ. ದೇಬೂರು ಗ್ರಾಮದಲ್ಲಿರುವ ಕುಡಿಯುವ ನೀರು ಸರಬರಾಜು ಘಟಕ ಜಲಾವೃತ ವಾಗಿರುವುದರಿಂದ ನಂಜನಗೂಡು ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ.

ಶಾಸಕ ಹರ್ಷವರ್ಧನ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ತಹಶೀಲ್ದಾರ್ ದಯಾನಂದ, ನಗರಸಭೆ ಆಯುಕ್ತ ವಿಜಯ್ ಇಂದು ಬೆಳಿಗ್ಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಲ್ಲಾ ರೀತಿಯ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ನಂಜನಗೂಡು, ಆ. 17(ರವಿ)- ಕೇರಳದ ವೈನಾಡಿನಲ್ಲಿ ಮತ್ತೇ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟ ಪರಿಣಾಮ 2ನೇ ಬಾರಿಗೆ ಮೈಸೂರು-ಊಟಿ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರ ಬಂದ್ ಮಾಡಲಾಗಿದೆ.

ನಂಜನಗೂಡಿನ ಮಲ್ಲನ ಮೂಲೆ ಮಠದ ಮುಂಭಾಗ ಹೆದ್ದಾರಿಯಲ್ಲಿ ಸುಮಾರು 4 ಅಡಿ ನೀರು ನಿಂತಿರುವ ಕಾರಣ ವಾಹನ ಸಂಚಾರವನ್ನು ರದ್ದುಗೊಳಿಸಿ ಮೈಸೂರಿನಿಂದ ನಂಜನಗೂಡಿಗೆ ತೆರಳುವ ವಾಹನಗಳನ್ನು ತಾಂಡವಪುರ ಮುಖಾಂತರ ಹುಳಿಮಾವು, ಹೆಜ್ಜಿಗೆ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಇದೇ ರೀತಿ ನಂಜನಗೂಡಿನಿಂದ ಮೈಸೂರಿಗೆ ತೆರಳುವ ವಾಹನಗಳು ಹುಲ್ಲಹಳ್ಳಿ ಮೂಲಕ ಸಂಚರಿಸುತ್ತಿವೆ. ಕಪಿಲಾ ನದಿ ಮೈದುಂಬಿ ಹರಿಯುತ್ತಿದ್ದು, ನದಿ ದಡದಲ್ಲಿರುವ ಪರಶುರಾಮ ದೇವಾಲಯ ಜಲಾವೃತವಾಗಿದೆ. ಸ್ನಾನಘಟ್ಟ ಮುಳುಗಿದೆ. ಪಟ್ಟಣದ ತಗ್ಗು ಪ್ರದೇಶವಾದ ಒಕ್ಕಲಗೇರಿ, ಸರಸ್ವತಿ ಕಾಲೋನಿ ಹಾಗೂ ತೋಪಿನ ಬೀದಿಯ ಹಲವು ಮನೆಗಳಿಗೆ ನೀರು ನುಗ್ಗಿದೆ. ನಂಜನಗೂಡು ತಾಲೂಕು ಕಣೆನೂರು, ಹುಲ್ಲಹಳ್ಳಿ, ರಾಂಪುರ, ಹಂಡುಗಿನಹಳ್ಳಿ, ದೇಬೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ. ದೇಬೂರು ಗ್ರಾಮದಲ್ಲಿರುವ ಕುಡಿಯುವ ನೀರು ಸರಬರಾಜು ಘಟಕ ಜಲಾವೃತ ವಾಗಿರುವುದರಿಂದ ನಂಜನಗೂಡು ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ.

ಶಾಸಕ ಹರ್ಷವರ್ಧನ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ತಹಶೀಲ್ದಾರ್ ದಯಾನಂದ, ನಗರಸಭೆ ಆಯುಕ್ತ ವಿಜಯ್ ಇಂದು ಬೆಳಿಗ್ಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಲ್ಲಾ ರೀತಿಯ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

Translate »