ತಗ್ಗಿದ ಕಪಿಲೆ ಪ್ರವಾಹ: ಮೈಸೂರು-ಊಟಿ ಹೆದ್ದಾರಿ ಸದ್ಯ ಸಂಚಾರಕ್ಕೆ ಮುಕ್ತ
ಮೈಸೂರು

ತಗ್ಗಿದ ಕಪಿಲೆ ಪ್ರವಾಹ: ಮೈಸೂರು-ಊಟಿ ಹೆದ್ದಾರಿ ಸದ್ಯ ಸಂಚಾರಕ್ಕೆ ಮುಕ್ತ

August 14, 2018

ಮೈಸೂರು:  ಕಪಿಲಾ ನದಿ ಪ್ರವಾಹ ತಗ್ಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766ರ ಮೈಸೂರು-ಊಟಿ ಹೆದ್ದಾರಿ ಸೋಮ ವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ.

ಕೇರಳದ ವೈನಾಡಿನಲ್ಲಿ ಮುಂಗಾರು ಮಳೆ ಹೆಚ್ಚಾಗಿದ್ದರಿಂದ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾ ಗುತ್ತಿತ್ತು. ಇದರ ಪರಿಣಾಮ ಕಪಿಲಾ ನದಿ ಅಪಾಯದ ಮಟ್ಟ ತಲುಪಿ, ಕಳೆದ ಶುಕ್ರ ವಾರ ಮೈಸೂರು- ಊಟಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಮಲ್ಲನಮೂಲೆ ಮಠ ಹಾಗೂ ಚಿಕ್ಕಯ್ಯನ ಛತ್ರ ಗ್ರಾಮದ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾ ಲಯದ ಸಮೀಪ ನದಿ ನೀರು ರಸ್ತೆಯನ್ನು ವ್ಯಾಪಿಸಿತ್ತು. ಇದರಿಂದ ಹೆದ್ದಾರಿ ಸಂಚಾರ ಸ್ಥಗಿತಗೊಂಡು ನಂಜನಗೂಡಿನಿಂದ ಮೈಸೂ ರಿಗೆ ಹೆಜ್ಜಿಗೆ ಸೇತುವೆ ಮಾರ್ಗದಲ್ಲಿ ಸುಮಾರು 10 ಕಿಮೀ ಬಳಸಿಕೊಂಡು ತೆರಳಬೇಕಿತ್ತು. ಸದ್ಯ ನದಿ ಪ್ರವಾಹ ತಗ್ಗಿದ್ದು, ಹೆದ್ದಾರಿಯನ್ನು ಆವರಿಸಿದ್ದ ತ್ಯಾಜ್ಯವನ್ನೆಲ್ಲಾ ತೆರವುಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಜನರಲ್ಲಿ ನಿಟ್ಟುಸಿರು: ಪ್ರವಾಹದಿಂದಾಗಿ ಕಪಿಲಾ ನದಿ ಪಾತ್ರದಲ್ಲಿರುವ ಅನೇಕ ಗ್ರಾಮಗಳ ಜನರಲ್ಲಿ ಆತಂಕ ನಿರ್ಮಾಣ ವಾಗಿತ್ತು. ಅಪಾರ ಪ್ರಮಾಣದ ಬೆಳೆ ನಷ್ಟ ವಾಗಿ ಕಂಗಾಲಾಗಿರುವ ರೈತರಲ್ಲಿ ಮತ್ತಷ್ಟು ಭೀತಿ ಹೆಚ್ಚಾಗಿತ್ತು. ನಂಜನಗೂಡಿನ ಶ್ರೀಕಂಠೇ ಶ್ವರನ ಸನ್ನಿಧಿಯ ಭಕ್ತಿ ಮಾರ್ಗ, ದಾಸೋಹ ಭವನದವರೆಗೂ ನದಿ ನೀರು ಆವರಿಸಿತ್ತು. ಕೆಲ ದಿನಗಳಿಂದ ನಂಜನಗೂಡಿಗೆ ಕುಡಿ ಯುವ ನೀರಿನ ಸರಬರಾಜನ್ನೂ ಸ್ಥಗಿತ ಗೊಳಿಸಲಾಗಿತ್ತು. ಇದೀಗ ನದಿ ಪ್ರವಾಹ ತಗ್ಗಿದ್ದು, ಜನ ಜೀವನ ಯಥಾಸ್ಥಿತಿಗೆ ಮರಳಿದೆ.

ಕಳೆದ ಎರಡು ವರ್ಷಗಳಿಂದ ಅನಾ ವೃಷ್ಟಿಯಿಂದ ತತ್ತರಿಸಿದ್ದ ತಾಲೂಕಿನ ರೈತರು, ಈ ಬಾರಿ ಅತಿವೃಷ್ಟಿಯಿಂದ ಕಂಗಾಲಾ ಗಿದ್ದಾರೆ. ನದಿ ಪಾತ್ರದ ಜಮೀನಲ್ಲಿದ್ದ ಬೆಳೆ, ಪ್ರವಾಹಕ್ಕೆ ತುತ್ತಾಗಿದೆ. ರೈತರ ಪರಿಶ್ರಮ ಉಕ್ಕಿ ಹರಿದ ಹೊಳೆಯಲ್ಲಿ ಕೊಚ್ಚಿ ಹೋದಂತಾ ಗಿದೆ. ಲಕ್ಷಾಂತರ ರೂ. ನಷ್ಟವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮರ್ಥವಾಗಿ ಪ್ರವಾಹ ನಿರ್ವ ಹಣೆ ಮಾಡಿರುವ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ನಷ್ಟಕ್ಕೆ ತುತ್ತಾಗಿರುವ ಜನರಿಗೆ ಶೀಘ್ರ ನೆರವು ನೀಡಬೇಕಿದೆ. ಈ ಮಧ್ಯೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ, ರೇಷ್ಮೆ ಸಚಿವ ಸಾ.ರಾ.ಮಹೇಶ್, ತಾಲೂಕಿ ನಲ್ಲಿ ಮಳೆ ಹಾಗೂ ಕಪಿಲೆ ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ಪರಿಹಾರಕ್ಕೆ ಸರ್ಕಾರಕ್ಕೆ ಸದ್ಯದಲ್ಲೇ ವರದಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ 3 ದಿನಗಳ ಕಾಲ ಭಾರೀ ಮಳೆ, ಕಾವೇರಿ ತೀರದಲ್ಲಿ ಕಟ್ಟೆಚ್ಚರ
ಮೈಸೂರು: ಮುಂದಿನ ಮೂರು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸುರಿಯಲಿದ್ದು, ಕಾವೇರಿ ತೀರದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಭಾರೀ ಮಳೆಯಿಂದಾಗಿ ಕಾವೇರಿ ತೀರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಹಾರಂಗಿ ಜಲಾಶಯ ತುಂಬಿ ತುಳುಕುತ್ತಿದೆ. ಅಧಿಕಾರಿಗಳು ಈಗಾಗಲೇ ಪ್ರವಾಹ ಎಚ್ಚರಿಕೆ ನೀಡಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.

ಇನ್ನು ಕೊಡಗು ಜಿಲ್ಲೆಯಲ್ಲೂ ಮಹಾಮಳೆ ಮುಂದುವರೆದಿದ್ದು, ಭಾಗ ಮಂಡಲದಲ್ಲಿ ಭಾನುವಾರ 106 ಮಿಲಿ ಮೀಟರ್ ಮಳೆಯಾಗಿದೆ. ಜಿಲ್ಲಾ ಆಡಳಿತ ಕೊಡಗು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜ್‍ಗಳಿಗೆ ಸೋಮವಾರವೂ ರಜೆ ಘೋಷಿಸಿತ್ತು. ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಭರ್ತಿಯಾಗಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಮೈಸೂರು – ನಂಜನಗೂಡು ರಾಷ್ಟ್ರೀಯ ಹೆದ್ದಾರಿ 766, ಎಚ್ ಡಿ ಕೋಟೆ, ಸುತ್ತೂರು ಸುತ್ತಲಿನ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಸುತ್ತೂರಿನಲ್ಲಿ ಸುಮಾರು 100 ಎಕರೆ ಪ್ರದೇಶ ಜಲಾವೃತಗೊಂಡಿದ್ದು, ನಾಟಿ ಮಾಡಿದ್ದ ಭತ್ತದ ಪೈರು ನೀರಿನಲ್ಲಿ ಮುಳುಗಿದೆ. ಎಚ್ ಡಿ ಕೋಟೆಯ ಬೀಚನಹಳ್ಳಿ ಸೇರಿದಂತೆ ನದಿ ತೀರದ ಊರುಗಳು ಹೊಲ-ಗದ್ದೆಗಳಲ್ಲಿ ಹಾಕಿರುವ ಭತ್ತ, ಹತ್ತಿ ಮತ್ತು ತರಕಾರಿ ಬೆಳೆಗಳು ಹಾಳಾಗಿವೆ.

Translate »