Tag: Mysuru-Nanjangud Highway

ತಗ್ಗಿದ ಕಪಿಲೆ ಪ್ರವಾಹ: ಮೈಸೂರು-ಊಟಿ ಹೆದ್ದಾರಿ ಸದ್ಯ ಸಂಚಾರಕ್ಕೆ ಮುಕ್ತ
ಮೈಸೂರು

ತಗ್ಗಿದ ಕಪಿಲೆ ಪ್ರವಾಹ: ಮೈಸೂರು-ಊಟಿ ಹೆದ್ದಾರಿ ಸದ್ಯ ಸಂಚಾರಕ್ಕೆ ಮುಕ್ತ

August 14, 2018

ಮೈಸೂರು:  ಕಪಿಲಾ ನದಿ ಪ್ರವಾಹ ತಗ್ಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766ರ ಮೈಸೂರು-ಊಟಿ ಹೆದ್ದಾರಿ ಸೋಮ ವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಕೇರಳದ ವೈನಾಡಿನಲ್ಲಿ ಮುಂಗಾರು ಮಳೆ ಹೆಚ್ಚಾಗಿದ್ದರಿಂದ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾ ಗುತ್ತಿತ್ತು. ಇದರ ಪರಿಣಾಮ ಕಪಿಲಾ ನದಿ ಅಪಾಯದ ಮಟ್ಟ ತಲುಪಿ, ಕಳೆದ ಶುಕ್ರ ವಾರ ಮೈಸೂರು- ಊಟಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಮಲ್ಲನಮೂಲೆ ಮಠ ಹಾಗೂ ಚಿಕ್ಕಯ್ಯನ ಛತ್ರ ಗ್ರಾಮದ ಶ್ರೀ ಪ್ರಸನ್ನ…

ಕಬಿನಿ ಹೊರಹರಿವು ಕಡಿಮೆಯಾದರೂ ನಂ.ಗೂಡಲ್ಲಿ ಪ್ರವಾಹ ಇಳಿಮುಖವಾಗಿಲ್ಲ:  3ನೇ ದಿನವೂ ಮೈಸೂರು-ಊಟಿ ಹೆದ್ದಾರಿ ಬಂದ್
ಮೈಸೂರು

ಕಬಿನಿ ಹೊರಹರಿವು ಕಡಿಮೆಯಾದರೂ ನಂ.ಗೂಡಲ್ಲಿ ಪ್ರವಾಹ ಇಳಿಮುಖವಾಗಿಲ್ಲ: 3ನೇ ದಿನವೂ ಮೈಸೂರು-ಊಟಿ ಹೆದ್ದಾರಿ ಬಂದ್

August 13, 2018

ನಂಜನಗೂಡು: ಕಬಿನಿ ಜಲಾಶಯ ದಿಂದ ಹೊರಬಿಡುವ ನೀರಿನ ಪ್ರಮಾಣ ಕಡಿಮೆ ಯಾಗಿದ್ದರೂ ಸಹ ಕಪಿಲಾ ನದಿ ಪ್ರವಾಹ ಕಡಿಮೆಯಾಗಿಲ್ಲ. ಇದರ ಪರಿಣಾಮವಾಗಿ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರವಾಹದ ಎಫೆಕ್ಟ್ ಮುಂದುವರೆದಿದ್ದು, ಮೂರನೇ ದಿನ ವಾದ ಶನಿವಾರವೂ ಸಹ ಮೈಸೂರು-ಊಟಿ ಹೆದ್ದಾರಿ ಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಕಬಿನಿ ಜಲಾಶಯಕ್ಕೆ ಇಂದು ಒಳಹರಿವು 50,900 ಕ್ಯೂಸೆಕ್ ಆಗಿದ್ದು, ಕಳೆದ ಎರಡು ದಿನಗಳಿಂದ ಹೊರಬಿಡಲಾಗುತ್ತಿದ್ದ 80 ಸಾವಿರ ಕ್ಯೂಸೆಕ್ ನೀರಿನ ಪ್ರಮಾಣವನ್ನು ಇಂದು 40,500 ಕ್ಯೂಸೆಕ್‍ಗೆ ಇಳಿಸಲಾಗಿತ್ತು. ಆದರೂ…

ನಂಜನಗೂಡಿಗೆ ನುಗ್ಗಿದ ಕಪಿಲೆ!ಮೈಸೂರು-ಊಟಿ, ಸುತ್ತೂರು ರಸ್ತೆ ಸಂಪರ್ಕ ಕಡಿತ
ಮೈಸೂರು

ನಂಜನಗೂಡಿಗೆ ನುಗ್ಗಿದ ಕಪಿಲೆ!ಮೈಸೂರು-ಊಟಿ, ಸುತ್ತೂರು ರಸ್ತೆ ಸಂಪರ್ಕ ಕಡಿತ

August 11, 2018

ನಂಜನಗೂಡು: ಕೇರಳದ ವೈನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾಗಿ ಅಲ್ಲಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಿದ ಪರಿಣಾಮ ಉಂಟಾದ ಪ್ರವಾಹದಿಂದಾಗಿ ದಕ್ಷಿಣ ಕಾಶಿ ನಂಜನಗೂಡು ನಲುಗಿ ಹೋಗಿದೆ. ಅಪಾಯದ ಮಟ್ಟ ಮೀರಿ ಕಪಿಲೆ ಹರಿಯುತ್ತಿರುವುದರಿಂದ ಮೈಸೂರು-ನಂಜನಗೂಡು ಹಾಗೂ ಮೈಸೂರು-ಸುತ್ತೂರು ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ನಂಜನಗೂಡಿನ ಮಲ್ಲನಮೂಲೆ ಮಠದ ಬಳಿ ಹೆದ್ದಾರಿ, ಪ್ರವಾಹದ ನೀರಿನಲ್ಲಿ ಮುಳುಗಿದೆ. ರಸ್ತೆ ಮೇಲೆ 2ರಿಂದ 3 ಅಡಿ ನೀರು ಹರಿಯು ತ್ತಿರುವ…

Translate »