Tag: Channarayapatna

ಜನ ಸಾಮಾನ್ಯರ ಕುಂದು-ಕೊರತೆಗೆ ಸ್ಪಂದಿಸಿ: ಸಿಇಓ
ಹಾಸನ

ಜನ ಸಾಮಾನ್ಯರ ಕುಂದು-ಕೊರತೆಗೆ ಸ್ಪಂದಿಸಿ: ಸಿಇಓ

May 26, 2019

ಚನ್ನರಾಯಪಟ್ಟಣ: ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು, ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂದಿಸಿ ಕೆಲಸ ಮಾಡ ಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ.ಕೆ.ಎನ್.ವಿಜಯ್‍ಪ್ರಕಾಶ್ ಸೂಚಿಸಿದರು. ಚನ್ನರಾಯಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಪಿ.ಡಿ.ಓಗಳೊಡನೆ ಸಭೆ ನಡೆಸಿದ ಅವರು, ಸಾರ್ವ ಜನಿಕರ ಅಹವಾಲುಗಳನ್ನು ಪರಿಹರಿಸದ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿ ಸಿಬ್ಬಂದಿಗಳ ಧೋರಣೆಗಳನ್ನು ತಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ…

ಆಕಸ್ಮಿಕ ಬೆಂಕಿ ನಾಲ್ಕು ಮನೆಗಳು ಭಸ್ಮ
ಹಾಸನ

ಆಕಸ್ಮಿಕ ಬೆಂಕಿ ನಾಲ್ಕು ಮನೆಗಳು ಭಸ್ಮ

September 8, 2018

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ತಿಮ್ಮಲಾಪುರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ನಾಲ್ಕು ಮನೆಗಳು ಸಂಪೂರ್ಣ ಭಸ್ಮವಾಗಿ, ಸುಮಾರು ರೂ.15 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ಗುರುವಾರ ಸಂಜೆ ಗ್ರಾಮದ ಅಪ್ಪಣ್ಣಿ ಅವರ ಸೋಗೆ ಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು, ನಂತರ ಪಕ್ಕದ ವೆಂಕಟಾಚಲಯ್ಯ, ರಘು ಹಾಗೂ ಶಿಕ್ಷಕ ವೆಂಕಟಲಚಲ ಅವರ ಮನೆಗಳಿಗೆ ತಗುಲಿದೆ. ಪರಿಣಾಮ ನಾಲ್ಕೂ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಬೆಂಕಿ ಅವಘಡದಿಂದ ಮನೆಯಲ್ಲಿ ಇದ್ದ ದವಸ-ಧಾನ್ಯಗಳು, ಹೊಲಿಗೆ ಯಂತ್ರಗಳು, ಟಿವಿ ಸೇರಿದಂತೆ ವಿದ್ಯುತ್ ಉಪಕರಣ ಗಳು,…

ವಿದ್ಯಾರ್ಥಿ ನೇಣಿಗೆ ಶರಣು
ಹಾಸನ

ವಿದ್ಯಾರ್ಥಿ ನೇಣಿಗೆ ಶರಣು

July 25, 2018

ಚನ್ನರಾಯಪಟ್ಟಣ: ವಿದ್ಯಾರ್ಥಿವೋರ್ವ ನೇಣಿಗೆ ಶರಣಾಗಿರುವ ಪ್ರಕರಣ ತಾಲೂಕಿನ ಕಾರೇಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ತಾಲೂಕಿನ ನುಗ್ಗೇಹಳ್ಳಿ ಸಮೀಪದ ತಾವರೆಕೆರೆಯ ಪೃಥ್ವಿರಾಜ್ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಇಂದು ಬೆಳಿಗ್ಗೆ ಎಲ್ಲಾ ವಿದ್ಯಾರ್ಥಿಗಳು ಪ್ರಾರ್ಥನೆಗೆ ತೆರಳಿದ್ದ ವೇಳೆ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಚನ್ನ ರಾಯಪಟ್ಟಣ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುರಸಭೆ ವಿರುದ್ಧ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ
ಹಾಸನ

ಪುರಸಭೆ ವಿರುದ್ಧ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

July 20, 2018

ಚನ್ನರಾಯಪಟ್ಟಣ: ರಸ್ತೆ ಬದಿ ವ್ಯಾಪಾರಸ್ಥರಿಗೆ ಕಾಲಾವಕಾಶ ನೀಡದೆ ಪುರಸಭೆ ಆಡಳಿತ ಮಂಡಳಿ ಏಕಾಏಕಿ ಗೂಡಂಗಡಿ ತೆರವುಗೊಳಿಸಿದನ್ನು ವಿರೋಧಿಸಿ ಬೀದಿಬದಿ ವ್ಯಾಪಾರಿಗಳು ಪಟ್ಟಣ ದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಮಿನಿ ವಿಧಾನ ಸೌಧದ ಮುಂಭಾಗ ಸಮಾವೇಶಗೊಂಡ ಬೀದಿ ಬದಿ ವ್ಯಾಪಾರಿಗಳು ಪುರಸಭೆಯ ಕ್ರಮಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಬೀದಿಬದಿ ವ್ಯಾಪಾರಸ್ಥರಿಗೆ ತಿಳಿವಳಿಕೆ ಪತ್ರ ನೀಡಿಲ್ಲ. ಸಭೆ ನಡೆಸಿ ಗೂಡಂಗಡಿ ತೆರವು ಮಾಡಲು ಕಾಲಾವಕಾಶವನ್ನು ನೀಡಿಲ್ಲ. ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ್ದರಿಂದ ನಮಗೆ…

ಚನ್ನರಾಯಪಟ್ಟಣ ಜನತೆಯಿಂದ ಡಿಸಿ ದೂರು ಸ್ವೀಕಾರ
ಹಾಸನ

ಚನ್ನರಾಯಪಟ್ಟಣ ಜನತೆಯಿಂದ ಡಿಸಿ ದೂರು ಸ್ವೀಕಾರ

July 10, 2018

ಚನ್ನರಾಯಪಟ್ಟಣ: ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅವರಿಂದು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ, ಕೂಡಲೇ ಬಗೆಹರಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸುಮಾರು ನಾಲ್ಕುಗಂಟೆಗಳ ಕಾಲ ಅತ್ಯಂತ ತಾಳ್ಮೆಯಿಂದ ಎಲ್ಲರ ಕುಂದುಕೊರತೆ ಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆ ಹರಿಸಿದರು. ಸುಮಾರು 310ಕ್ಕೂ ಅಧಿಕ ಅರ್ಜಿಗಳು ಸ್ವೀಕಾರವಾದವು. ನೂರಾರು ವೈಯಕ್ತಿಕ ಹಾಗೂ ಹತ್ತಾರು ಸಾರ್ವ ಜನಿಕ ಸಮಸ್ಯೆಗಳನ್ನು ಬಗೆ ಹರಿಸುವಂತೆ ಕೋರಿ ಪಟ್ಟಣದ ಜನತೆ ಅರ್ಜಿ ಸಲ್ಲಿಸಿದರು. ಜಮೀನು ಮಂಜೂರಾತಿ…

Translate »