ಚನ್ನರಾಯಪಟ್ಟಣ ಜನತೆಯಿಂದ ಡಿಸಿ ದೂರು ಸ್ವೀಕಾರ
ಹಾಸನ

ಚನ್ನರಾಯಪಟ್ಟಣ ಜನತೆಯಿಂದ ಡಿಸಿ ದೂರು ಸ್ವೀಕಾರ

July 10, 2018

ಚನ್ನರಾಯಪಟ್ಟಣ: ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅವರಿಂದು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ, ಕೂಡಲೇ ಬಗೆಹರಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸುಮಾರು ನಾಲ್ಕುಗಂಟೆಗಳ ಕಾಲ ಅತ್ಯಂತ ತಾಳ್ಮೆಯಿಂದ ಎಲ್ಲರ ಕುಂದುಕೊರತೆ ಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆ ಹರಿಸಿದರು. ಸುಮಾರು 310ಕ್ಕೂ ಅಧಿಕ ಅರ್ಜಿಗಳು ಸ್ವೀಕಾರವಾದವು. ನೂರಾರು ವೈಯಕ್ತಿಕ ಹಾಗೂ ಹತ್ತಾರು ಸಾರ್ವ ಜನಿಕ ಸಮಸ್ಯೆಗಳನ್ನು ಬಗೆ ಹರಿಸುವಂತೆ ಕೋರಿ ಪಟ್ಟಣದ ಜನತೆ ಅರ್ಜಿ ಸಲ್ಲಿಸಿದರು.

ಜಮೀನು ಮಂಜೂರಾತಿ ಸರ್ವೇ ಕಾರ್ಯ, ಪೋಡಿ, ಭೂಪರಿಹಾರ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಹೆಚ್ಚಿನ ಮನವಿಗಳು ಬಂದವು. ಕಲ್ಲು ಗಣಿಗಾರಿಕೆಗೆ ಅನುಮತಿ, ಅನಧಿಕೃತ ಗೋಮಾಂಸ ಮಾರಾಟ ತಡೆ, ಪಿಡಿಸಿಎಲ್ ಜಮೀನು ಮಂಜೂರಾತಿ, ಮುಜುರಾಯಿ ದೇವಸ್ಥಾನದ ಜಾಗದ ದಾಖಲೆ ದುರಸ್ತಿ, ಅರ್ಚಕರಿಗೆ ವೇತನ ಹೆಚ್ಚಳ, ಹಿರಂಗಿ ಮಠದ ಜಾಗ ಅಕ್ರಮ ಉತ್ತುವರಿ ತೆರವು, ಹೊಸ ಬಿಪಿಎಲ್ ಪಡಿತರ ಚೀಟಿ ವಿತರಣೆ, ಗ್ರಾಮಗಳ ರಸ್ತೆ ಹಾಗೂ ಗ್ರಾಮ ಠಾಣಾ ದುರಸ್ತಿ ಸೇರಿದಂತೆ ಹತ್ತಾರು ಬಗೆಯ ಸಮಸ್ಯೆ ಬಗೆಹರಿಸಲು ಕೋರಿ ಅರ್ಜಿಗಳು ಬಂದವು. ಎಲ್ಲಾ ದೂರುಗಳನ್ನು ಶೀಘ್ರವೇ ಪರಿಹರಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ರೈಲ್ವೇ ನಿಲ್ದಾಣದಲ್ಲಿ ಶೌಚಾ ಲಯ ನಿರ್ಮಿಸಿ, ಬೆಳಿಗ್ಗೆ 7 ಗಂಟೆ ಯಿಂದಲೇ ಮದ್ಯ ಮಾರಾಟ ಮಾಡು ತ್ತಿದ್ದು, ಇದನ್ನು ನಿಯಂತ್ರಿಸಿ, ಹಂದಿ ಜೋಗಿ ಗಳಿಗೆ ನಿವೇಶನ ಹಕ್ಕು ಪತ್ರ ಒದಗಿಸಿ, ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿ ಎಂದು ಸಂಘಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಅರ್ಜಿ ಸಲ್ಲಿಸಿದರು.

ತಾಲೂಕಿನಲ್ಲಿ ನೀರು ಪೂರೈಸುವ ಏತ ನೀರಾವರಿ ಯೋಜನೆಗಳ ಕಾಮಗಾರಿ ಬೇಗ ಪೂರ್ಣಗೊಳಿಸಿ ಎಂದು ರೈತರು ಕೋರಿದರು. ಸಾರಿಗೆ ಸೌಲಭ್ಯ, ಬಸ್ ನಿಲುಗಡೆ ಹಾಗೂ ಸಾರಿಗೆ ಬಸ್ ನಿಲ್ದಾಣಕ್ಕೆ ವಶಪಡಿಸಿಕೊಂಡ ಭೂಮಿಗೆ ಪರಿಹಾರ ವಿತರಿಸುವಂತೆ ವಿವಿಧ ಗ್ರಾಮಸ್ಥರು ಮನವಿ ಮಾಡಿದರು. ಸಭೆಯ ಪ್ರಾರಂಭದಲ್ಲಿ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್. ನಾಗರಾಜ್ ಸಭೆ ಉದ್ದೇಶಿಸಿ ಮಾಹಿತಿ ನೀಡಿ ಮಾತನಾಡಿದರು. ಈ ಸಭೆಯಲ್ಲಿ ಸ್ವೀಕಾರವಾದ ಅರ್ಜಿಗಳನ್ನು ವರ್ಗೀಕರಿಸಿ 7 ದಿನಗಳೊಳಗಾಗಿ ಕ್ರಮ ಕೈಗೊಂಡು ಹಿಂಬರಹ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಪ್ರೊಬೆಷನರಿ ಐಎಎಸ್ ಅಧಿಕಾರಿ ಪ್ರಿಯಾಂಕ, ಡಿವೈಎಸ್‍ಪಿ ಶಶಿಧರ್, ಭೂ ದಾಖಲೆಗಳ ಉಪನಿರ್ದೇಶಕ ಕೃಷ್ಣ ಪ್ರಸಾದ್, ತಹಶೀಲ್ದಾರ್ ಸೋಮ ಶೇಖರ್, ತಾಪಂ ಇಓ ನಂದಿನಿ, ಮತ್ತಿ ತರರು ಸಭೆಯಲ್ಲಿದ್ದರು.

Translate »