ಆಕಸ್ಮಿಕ ಬೆಂಕಿ ನಾಲ್ಕು ಮನೆಗಳು ಭಸ್ಮ
ಹಾಸನ

ಆಕಸ್ಮಿಕ ಬೆಂಕಿ ನಾಲ್ಕು ಮನೆಗಳು ಭಸ್ಮ

September 8, 2018

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ತಿಮ್ಮಲಾಪುರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ನಾಲ್ಕು ಮನೆಗಳು ಸಂಪೂರ್ಣ ಭಸ್ಮವಾಗಿ, ಸುಮಾರು ರೂ.15 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ಗುರುವಾರ ಸಂಜೆ ಗ್ರಾಮದ ಅಪ್ಪಣ್ಣಿ ಅವರ ಸೋಗೆ ಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು, ನಂತರ ಪಕ್ಕದ ವೆಂಕಟಾಚಲಯ್ಯ, ರಘು ಹಾಗೂ ಶಿಕ್ಷಕ ವೆಂಕಟಲಚಲ ಅವರ ಮನೆಗಳಿಗೆ ತಗುಲಿದೆ. ಪರಿಣಾಮ ನಾಲ್ಕೂ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಬೆಂಕಿ ಅವಘಡದಿಂದ ಮನೆಯಲ್ಲಿ ಇದ್ದ ದವಸ-ಧಾನ್ಯಗಳು, ಹೊಲಿಗೆ ಯಂತ್ರಗಳು, ಟಿವಿ ಸೇರಿದಂತೆ ವಿದ್ಯುತ್ ಉಪಕರಣ ಗಳು, ಬಟ್ಟೆಗಳು, ಅಡುಗೆ ಪಾತ್ರೆಗಳು, ಕೊಬ್ಬರಿ ಮತ್ತು ತೆಂಗಿನ ಕಾಯಿಗಳು ಸೇರಿದಂತೆ ಇನ್ನಿತರೆ ಪದಾರ್ಥಗಳು ಭಸ್ಮವಾಗಿದೆ. ಸ್ಥಳೀಯರು ಬೆಂಕಿ ಅಕ್ಕ-ಪಕ್ಕದ ಮನೆಗಳಿಗೆ ತಗುಲದಂತೆ ಎಚ್ಚರ ವಹಿಸಿ, ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಧಾಮಿಸಿದ ಆಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನಂದಿಸಿದರು.

Translate »